ಕೋಟ: ಯಕ್ಷಗುರು ಹಳ್ಳಾಡಿ ದಿ| ಸುಬ್ರಾಯ ಮಲ್ಯ ಕಲಾ ಶಿಕ್ಷಣ ಪ್ರತಿಷ್ಠಾನದ ಉದ್ಘಾಟನೆ ಕಾರ್ಯಕ್ರಮವು ಜು. 22ರಂದು ಸಾ„ಬ್ರಕಟ್ಟೆ ಜಿ.ಎಸ್.ಬಿ. ಸಭಾಭವನದಲ್ಲಿ ಜರಗಿತು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪ್ರತಿಷ್ಠಾನವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲೆ ವಿಶ್ವಮಾನ್ಯ ಕಲೆಯಾಗಿ ಬೆಳೆದು ನಿಂತಿದೆ. ಅದೇ ರೀತಿ ಈ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ಸುಬ್ರಾಯ ಮಲ್ಯರ ರೀತಿಯ ಗುರುಗಳ ಕೊಡುಗೆ ಅಪಾರವಾದದ್ದು. ತನ್ನ ಜೀವನವನ್ನು ಯಕ್ಷಗಾನಕ್ಕಾಗಿ ಮುಡಿಪಾಗಿಟ್ಟ ಇಂತವರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ.ಕಿಶನ್ ಹೆಗ್ಡೆ ಮಾತನಾಡಿ, ಯಕ್ಷಗಾನ ಕಲೆಗೆ ಪ್ರೋತ್ಸಾಹಕರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಕಲೆಯ ಉಳಿವಿಗೆ ಕಲಾಭಿಮಾನಿಗಳ ನಿರಂತರ ಸಹಕಾರ ಅಗತ್ಯವಿದ್ದು, ಸುಬ್ರಾಯ ಮಲ್ಯ ಕಲಾ ಶಿಕ್ಷಣ ಪ್ರತಿಷ್ಠಾನವು ರಾಜ್ಯದಲ್ಲೇ ಉತ್ತಮ ಪ್ರತಿಷ್ಠಾನವಾಗಿ ಮೂಡಿಬರಲಿ ಎಂದರು.
ಯಕ್ಷಗಾನ ವಿಮರ್ಶಕ, ಉಪನ್ಯಾಸಕ ಎಸ್.ವಿ. ಉದಯ ಕುಮಾರ್ ಶೆಟ್ಟಿ, ಜಿ.ಎಸ್.ಬಿ. ಸೇವಾ ಸಂಘದ ಅಧ್ಯಕ್ಷ ನಾರಾಯಣ ಶೆಣೆ„ ಗಾವಳಿ, ಉದ್ಯಮಿ ಗೋಪಿನಾಥ್ ಕಾಮತ್, ಉಮೇಶ್ ಬಂಗೇರ ಸಕ್ಕಟ್ಟು, ರಾಘವೇಂದ್ರ ಆಚಾರ್ಯ ಸಾ„ಬ್ರಕಟ್ಟೆ , ಪ್ರತಿಷ್ಠಾನದ ಉಪಾಧ್ಯಕ್ಷ ಅಶೋಕ್ ಪ್ರಭು ಸಾ„ಬ್ರಕಟ್ಟೆ, ಶಿರಿಯಾರ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸುಕ್ರ ಪೂಜಾರಿ, ಸುಬ್ರಾಯ ಮಲ್ಯ ಶಿಷ್ಯ ವೃಂದದ ಅಧ್ಯಕ್ಷ ಗೋಪಾಲಕೃಷ್ಣ ಗಾಣಿಗ ಉಪಸ್ಥಿತರಿದ್ಧರು.
ಪ್ರತಿಷ್ಠಾನದ ಅಧ್ಯಕ್ಷ ಕೆ. ರಾಜಾರಾಮ್ ಶೆಟ್ಟಿ ಸ್ವಾಗತಿಸಿ, ಗೌರವಾಧ್ಯಕ್ಷ ಅರುಣ್ ಪ್ರಕಾಶ್ ಪ್ರಸ್ತಾವಿಕ ಮಾತನಾಡಿ, ವಿಧ್ವಾನ್ ದಾಮೋಧರ ಶರ್ಮ ಕಾರ್ಯಕ್ರಮ ನಿರೂಪಿಸಿ, ಪ್ರತಿಷ್ಠಾನದ ಗೌರವಾಧ್ಯಕ್ಷ ಮಾಧವ ಹೆಗ್ಡೆ ಮಧುವನ ವಂದಿಸಿದರು.