ಮುಂಬಯಿ: ಯಕ್ಷಗಾನ ಉಳಿಸಿ ಬೆಳೆಸುವಲ್ಲಿ ಯುವ ಪೀಳಿಗೆ ಆಸಕ್ತಿ ವಹಿಸಬೇಕು. ಕಲಾಭಿಮಾನಿಗಳು ಹೆಚ್ಚು ಯಕ್ಷಗಾನ ಪ್ರೋತ್ಸಾಹಿಸಬೇಕು ಎಂದು ಕುಲಾಲ ಸಂಘ ಮುಂಬಯಿ ಇದರ ಅದ್ಯಕ್ಷ ದೇವುದಾಸ ಕುಲಾಲ್ ಹೇಳಿದರು.
ಕುಳಾಯಿ ಕಲಾಕುಂಭ ಯಕ್ಷ ವೃಂದ ಆಶ್ರಯದಲ್ಲಿ ಇತ್ತೀಚೆಗೆ ಕುಳಾಯಿ ನಾಡಬೆಟ್ಟು ಧರ್ಮಚಾವಡಿಯಲ್ಲಿ ಆಯೋಜಿಸಲಾದ ಯಕ್ಷಗಾನ ತರಬೇತುದಾರರಿಗೆ ಸಮ್ಮಾನ ಹಾಗು ನೂತನ ಕಲಾವಿದರಿಗೆ ಗೆಜ್ಜೆ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು ಒಂದು ವರ್ಷದಿಂದ ನಿರಂತರವಾಗಿ ಪ್ರತಿ ಭಾನುವಾರ ಯಕ್ಷಗಾನ ತರಬೇತಿ ನಡೆಯುತ್ತಾ ಇದ್ದು ಸುಮಾರು 40 ಮಂದಿ ಕಲಿಕೆಯಲ್ಲಿ ಭಾಗವಹಿಸುತ್ತಿ¨ªಾರೆ. ಆಸಕ್ತಿ ಹೆಚ್ಚಿದಂತೆ ಯಕ್ಷಗಾನ ಉಳಿಕೆ ಸಾಧ್ಯ ಎಂದರು.
ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಒಎಂಪಿಲ್ ನ ರಾಮ್ ಪ್ರಸಾದ್ ಭಟ್, ಹಿರಿಯ ಕೃಷಿಕ ರಾಮಯ್ಯ ಪೂಜಾರಿ ಕುಳಾಯಿ,ಕುಳಾಯಿ ಕುಲಾಲ ಸಂಘದ ಅಧ್ಯಕ್ಷರಾದ ಗಂಗಾಧರ ಕುಳಾಯಿ, ರೋಹಿತಾಕ್ಷ ರೈ ಕುಳಾಯಿಗುತ್ತು, ಪಾಲಿಕೆ ಮಾಜಿ ಸದಸ್ಯೆ ವೇದಾವತಿ, ಕುಳಾಯಿ ನಾಗರಿಕ ಸಮಿತಿ ಉಪಾಧ್ಯಕ್ಷೆ ಬೇಬಿ ಪದ್ಮನಾಭ ಕುಲಾಲ, ಕುಳಾಯಿ ನಾಡಬೆಟ್ಟು ಕುಲಾಲ್ ಪಂಚ ದೈವಗಳ ಸೇವಾ ಟ್ರಸ್ಟ್ ಆಡಳಿತ ಮುಕ್ತೇಸರ ಭಾಸ್ಕರ್ ಕುಲಾಲ…, ಯಕ್ಷಗಾನ ಕಲಾವಿದ ರಾಮಚಂದ್ರ ಮುಕ್ಕ ಕಲಾಕುಂಭ ಯಕ್ಷವೃಂದ ಗೌರವಾಧ್ಯಕ್ಷ ಮೋಹನ್ ಐ. ಮೂಲ್ಯ, ಉಪಾಧ್ಯಕ್ಷ ಸತೀಶ್ ತಡಂಬೈಲ, ಕಾರ್ಯದರ್ಶಿ ನಾರಾಯಣ್ ಪಿ. ಹೊಸಬೆಟ್ಟು, ಜತೆ ಕಾರ್ಯದರ್ಶಿ ಮನೋಜ್ ಕುಮಾರ್, ಕೋಶಾಧಿಕಾರಿ ಉಮೇಶ್ ಎಲ ಬಾಳ ಮೊದಲಾದವರು ಉಪಸ್ಥಿತರಿದ್ದರು.
ಕಲಾಕುಂಭ ಸಂಸ್ಥೆಯ ಅಧ್ಯಕ್ಷ ನಾಗೇಶ್ ಕುಲಾಲ್ ಸ್ವಾಗತಿಸಿದರು.ಯಕ್ಷಗಾನ ತರಬೇತುದಾರ ಜಿತೇಶ್ ಕುಲಾಲ್ ಸೂರಿಂಜೆ ಹಾಗು ಭಾಗವತರಾದ ಸುದೇಶ್ ಹೆಗ್ಡೆ ಕುತ್ತೆತ್ತೂರು ಅವರಿಗೆ ಸಮ್ಮಾನ ನಡೆಯಿತು. ದಯಾನಂದ್ ಜಿ. ಕತ್ತಲ್ಸಾರ್ ಅಭಿನಂದನಾ ಭಾಷಣ ಮಾಡಿದರು. ಮನೋಜ್ ಕುಮಾರ್ ಲತೇಶ್ ಕುಮಾರ್ ಕಾರ್ತಿಕ್, ನೀಲೇಶ್, ಕೇಶವ್ ಕುಲಾಲ್, ಚೆನ್ನಪ್ಪ ಕುಲಾಲ್ ಪ್ರೇಮ ನಾರಾಯಣ್, ರಮ್ಯಾ ಮಯ್ಯ, ಪ್ರಮೀಳಾ, ಮೋಹಿನಿ, ಉಮೇಶ್ ಕುಲಾಲ್ ಕುಶಾಲಕ್ಷಿ ಮುಂತಾದವರು ಉಪಸ್ಥಿರಿದ್ದರು.