Advertisement

“ಯಕ್ಷಗಾನ ಸಂಪ್ರದಾಯದ ಸಂರಕ್ಷಣೆಗೆ ಅಕಾಡೆಮಿ ಬದ್ಧ ‘

04:57 PM Feb 23, 2017 | Harsha Rao |

ಉಡುಪಿ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿರುವ ಯಕ್ಷಗಾನ ಭಾಗವತಿಕೆ ಮತ್ತು ಹೆಜ್ಜೆಗಾರಿಕೆ ವಿಷಯಗಳ ಐದು ದಿನಗಳ ದೃಶ್ಯ-ಶ್ರವಣ ದಾಖಲಾತಿಯ ಎರಡನೆಯ ದಿನ ತೆಂಕುತಿಟ್ಟಿನ ಹಿರಿಯ ಭಾಗವತರ ಸಾಂಪ್ರದಾಯಿಕ ಶೈಲಿಯ ಭಾಗವತಿಕೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Advertisement

ಮಣಿಪಾಲ ಎಸ್‌ಒಸಿ ಚಿತ್ರೀಕರಣ ಕೊಠಡಿಯಲ್ಲಿ ಜರಗಿದ ದಾಖಲೀಕರಣ ಕಾರ್ಯಕ್ರಮದ ಆರಂಭದಲ್ಲಿ  ಅಕಾಡೆಮಿ ಸದಸ್ಯ ಸಂಚಾಲಕ  ಪಿ. ಕಿಶನ್‌ ಹೆಗ್ಡೆಯವರು, ಯಕ್ಷಗಾನದ ದಾಖಲೀಕರಣದ ಔಚಿತ್ಯವನ್ನು ವಿವರಿಸಿ ಮರೆಯಾಗುತ್ತಿರುವ ಸಾಂಪ್ರದಾಯಿಕ ಶೈಲಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಕಾಡೆಮಿ ಪ್ರಸ್ತುತ ಯೋಜನೆಯನ್ನು ಹಾಕಿಕೊಂಡಿದೆ ಎಂದರು. 

ಬಲಿಪ ನಾರಾಯಣ ಭಾಗವತ, ಅಗರಿ ರಘುರಾಮ ಭಾಗವತ, ತೆಂಕಬೈಲು ತಿರುಮಲೇಶ್ವರ ಶಾಸಿŒ, ಕುರಿಯ ಗಣಪತಿ ಶಾಸಿŒ, ಕುಬಣೂರು ಶ್ರೀಧರ ರಾವ್‌, ಲೀಲಾವತಿ ಬೈಪಾಡಿತ್ತಾಯ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಭಾಗವತಿಕೆಗೆ ಪದ್ಯಾಣ ಶಂಕರನಾರಾಯಣ ಭಟ್‌, ಹರಿನಾರಾಯಣ ಬೈಪಾಡಿತ್ತಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಚಂಡೆ-ಮದ್ದಲೆ ಸಾಥಿ ನೀಡಿದರು. ಗಣೇಶ ಕೊಲೆಕಾಡಿ ಮತ್ತು ನಿತ್ಯಾನಂದ ರಾವ್‌ ಸುರತ್ಕಲ್‌ ಅನುಕ್ರಮವಾಗಿ ಛಂದಸ್ಸು ಮತ್ತು ಸಂಗೀತಶಾಸ್ತ್ರಗಳ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಎಂ.ಎಲ್‌. ಸಾಮಗ ದಾಖಲಾತಿಯ ಸಂಯೋಜನೆಯಲ್ಲಿ ಸಹಕರಿಸಿದರು.

ಕೇಂದ್ರದ ಸಂಯೋಜನಾಧಿಕಾರಿ ಪ್ರೊ| ವರದೇಶ ಹಿರೇಗಂಗೆ ಪ್ರಸ್ತಾವನೆಗೈದರು. ಸಹಸಂಯೋ ಜನಾಧಿಕಾರಿ ಡಾ| ಅಶೋಕ ಆಳ್ವ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next