Advertisement
ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು ಮಂಗಳೂರಿನಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿ ದರು. “ಪಾರ್ತಿಸುಬ್ಬ’ ಪ್ರಶಸ್ತಿ ಒಂದು ಲಕ್ಷ ರೂ. ನಗದು ಮತ್ತು ಪ್ರಮಾಣಪತ್ರ, ಗೌರವ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು ಮತ್ತು ಪ್ರಮಾಣಪತ್ರ, ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿಗಳು ತಲಾ 25 ಸಾವಿರ ರೂ. ನಗದು ಮತ್ತು ಪ್ರಮಾಣ ಪತ್ರ ವನ್ನು ಒಳ ಗೊಂಡಿದೆ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 2ನೇ ಅಥವಾ 3ನೇ ವಾರದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಗೌರವ ಪ್ರಶಸ್ತಿಗೆ ತೆಂಕುತಿಟ್ಟಿನ ಕೆ. ತಿಮ್ಮಪ್ಪ ಗುಜರನ್, ಉಡುಪಿಯ ಯಕ್ಷಗಾನ ಕೇಂದ್ರದ ಗುರು ಬಿ. ಸಂಜೀವ ಸುವರ್ಣ, ಪಡುವಲಪಾಯದ ವಿದ್ವಾಂಸ ಡಾ| ವಿಜಯ ನಳಿನಿ ರಮೇಶ್, ಮೂಡಲಪಾಯ ಯಕ್ಷಗಾನ ವಿದ್ವಾಂಸ, ಸಂಘಟಕ ಡಾ| ಚಕ್ಕೆರೆ ಶಿವಶಂಕರ್, ಮೂಡಲಪಾಯದ ಕಲಾವಿದ ಹಾಗೂ ಸಂಘಟಕ ಬಿ. ಪರಶುರಾಮ್ ಆಯ್ಕೆಯಾಗಿ ದ್ದಾರೆ. ತಿಮ್ಮಪ್ಪ ಗುಜರನ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗುವುದು. ಅವರು ನಿಧನ ಹೊಂದುವ ಹೆಸರು ಆಯ್ಕೆಯಾಗಿತ್ತು ಎಂದು ಪ್ರೊ| ಎಂ.ಎ. ಹೆಗಡೆ ಹೇಳಿದರು.
Related Articles
ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಕಲಾವಿದರಾದ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಆವರ್ಸೆ ಶ್ರೀನಿವಾಸ ಮಡಿವಾಳ, ಬೆಳೂ¤¤ರು ರಮೇಶ್, ಸ್ತ್ರೀ ವೇಷಧಾರಿ ಸಂಜಯ್ ಕುಮಾರ್ ಶೆಟ್ಟಿ, ಪಡುವಲಪಾಯ ಸಂಘಟಕ ಎಂ.ಆರ್. ಹೆಗಡೆ ಕಾನಗೋಡ, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಅರ್ಥ ಧಾರಿ ವಿಟ್ಲ ಶಂಭು ಶರ್ಮ, ಮೂಡ ಲಪಾಯ ಭಾಗ ವತ ಹನುಮಂತರಾಯಪ್ಪ, ಮುಖವೀಣೆ ಕಲಾವಿದ ಎ.ಎಂ. ಮುಳವಾಗಲಪ್ಪ ಆಯ್ಕೆ ಆಗಿದ್ದಾರೆ.
Advertisement
ಅಕಾಡೆಮಿ ಸದಸ್ಯರಾದ ರಾಧಾಕೃಷ್ಣ ಕಲ್ಚಾರ್, ಕದ್ರಿ ನವನೀತ ಶೆಟ್ಟಿ, ಸಹ ಸದಸ್ಯದಾಮೋದರ ಶೆಟ್ಟಿ, ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಅವರು ಉಪಸ್ಥಿತರಿದ್ದರು.
ಪಠ್ಯದಲ್ಲಿ ಯಕ್ಷಗಾನಪ್ರೌಢಶಾಲಾ ಪಠ್ಯದಲ್ಲಿ ಯಕ್ಷಗಾನವನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಈ ವಿಚಾರ ಸದ್ಯ ಪಠ್ಯ ಪುಸ್ತಕ ರಚನೆ ಸಮಿತಿಯ ಮುಂದಿದೆ. ತುಳುವಿನ ಪ್ರಸಂಗಗಳನ್ನು ಪ್ರಕಟಿಸಲು ಅಕಾಡೆಮಿ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಹಿರಿಯ ಯಕ್ಷಗಾನ ಕಲಾವಿದರ ಜತೆ “ನೆನಪಿನ ಬುತ್ತಿ’ ಕಾರ್ಯಕ್ರಮ ನಡೆಸಲಾಗುವುದು. ಈ ಬಾರಿಯ ಅಕಾಡೆಮಿಯ ಪುಸ್ತಕ ಬಹುಮಾನವನ್ನು ಮುಂದಿನ ಬಾರಿಯ ಬಹುಮಾನದೊಂದಿಗೆ ನೀಡಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಯಕ್ಷಗಾನ ಅಕಾಡೆಮಿಗೂ 5 ಲ.ರೂ. ಕಡಿಮೆ ಅನುದಾನ ದೊರೆತಿದೆ ಎಂದು ಪ್ರೊ| ಎಂ.ಎ. ಹೆಗಡೆ ತಿಳಿಸಿದರು.