ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ 2022 ಪ್ರಕಟವಾಗಿದ್ದು, ಖ್ಯಾತ ಪ್ರಸಂಗಕರ್ತ, ಛಂದೋಬದ್ಧ ಸಾಹಿತಿ ಕೊಲೆಕಾಡಿ ಗಣೇಶ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ತೆಂಕುತಿಟ್ಟಿನ ಖ್ಯಾತ ಭಾಗವತರಾದ ರಘುರಾಮ ಹೊಳ್ಳ,ಸತೀಶ್ ಶೆಟ್ಟಿ ಪಟ್ಲರಿಗೆ, ಬಡಗುತಿಟ್ಟಿನ ಹಿರಿಯ ಭಾಗವತರಾದ ಕೆ.ಪಿ.ಹೆಗಡೆ, ಉಮೇಶ್ ಭಟ್ ಬಾಡ ಮತ್ತು ತುಮಕೂರಿನ ಮೂಡಲಪಾಯ ಭಾಗವತರಾದ ಚಂದಯ್ಯ ಅವರಿಗೆ ಗೌರವ ಪ್ರಶಸ್ತಿ ನೀಡಲಾಗುತ್ತಿದೆ.
ಮಹಾರಾಷ್ಟ್ರದ ಕೊಲ್ಯಾರು ರಾಜು ಶೆಟ್ಟಿ, ಕೃಷ್ಣ ಗಾಣಿಗ ಕೋಡಿ, ಮಾವಿನಕೊಪ್ಪದ ಕೃಷ್ಣ ನಾಯ್ಕ ಬೇಡ್ಕಣಿ, ಮಂಜೇಶ್ವರದ ಶುಭಾನಂದ ಶೆಟ್ಟಿ, ಪ್ರಸಾದನ ಕಲಾವಿದ ಹಂದಾಡಿ ಬಾಲಕೃಷ್ಣ ನಾಯಕ್, ಕವ್ವಾಳೆ ಗಣಪತಿ ಭಾಗವತ್, ಕೊಲ್ಲೂರು ಕೊಗ್ಗ ಆಚಾರ್ಯ, ಅಜಿತ್ ಕುಮಾರ್ ಜೈನ್, ಮೂಡಲಪಾಯ ಕಲಾವಿದರಾದ ಸಾದೇನಹಳ್ಳಿಯ ಎಸ್. ಪಿ. ಅಪ್ಪಯ್ಯ, ತುಮಕೂರಿನ ಡಿ.ಭೀಮಯ್ಯ ಅವರಿಗೆ ಯಕ್ಷಸಿರಿ ಪ್ರಶಸ್ತಿ ನೀಡಲಾಗುತ್ತಿದೆ.
ಉತ್ತರಕನ್ನಡದ ಹುಕ್ಕಲಮಟ್ಟಿ ಕಮಲಾಕರ ಹೆಗಡೆ ಅವರಿಗೆ ದತ್ತಿನಿದಿ ಪ್ರಶಸ್ತಿಯಾದ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪೊಳಲಿ ನಿತ್ಯಾನಂದ ಕಾರಂತ್, ಬೆಳಗಾವಿಯ ಎಸ್ .ಎಲ್. ಶಾಸ್ತ್ರಿ, ಬೆಂಗಳೂರಿನ ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ 2021 ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ನೀಡಲಾಗುತ್ತಿದೆ.