Advertisement
ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ರವಿವಾರ ರಾಜಾಂಗಣದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಪ್ರಶಸ್ತಿ ಪ್ರಾಯೋಜಿಸಿರುವ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಕೃಷ್ಣ ಪ್ರಸಾದ ಅಡ್ಯಂತಾಯ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ಕಾರ್ಯ ದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಎಚ್.ಎನ್. ಶೃಂಗೇಶ್ವರ ವಂದಿಸಿದರು. ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.
ಗಂಗಾ ಸ್ಥಾನ-ಗಂಗಾ ಸ್ನಾನಪ್ರಶಸ್ತಿ ಪ್ರದಾನ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಜೀವಿತಾವಧಿಯಲ್ಲಿ ಅಗತ್ಯವಾಗಿ ತಿಳಿಯಬೇಕಾದದ್ದು ಭಗವಂತನನ್ನು. ಇದಕ್ಕೆ ಬೇರೆ ಬೇರೆ ವೇದಿಕೆಗಳನ್ನು ಸೃಷ್ಟಿಸಿದವರು ನಮ್ಮ ಪೂರ್ವಜರು. ಯಕ್ಷಗಾನ, ತಾಳಮದ್ದಲೆಗಳೂ ಇಂತಹ ವೇದಿಕೆಗಳು. ಸಾಮಾನ್ಯ ಜನರೂ ಇಂತಹ ವೇದಿಕೆಗಳಲ್ಲಿ ಸ್ವಲ್ಪ ಸಮಯ ಭಾಗವಹಿಸಿದರೂ ಲಾಭಕರವಾಗಿದೆ. ಕಲಾವಿದರು ಉತ್ತಮ ಸಮಾಜ ಕಟ್ಟುವ ಕೆಲಸಗಳಲ್ಲಿ ತೊಡಗಿದ್ದಾರೆ. ಹೃದಯ ಗಂಗೆಯಲ್ಲಿ ಗಂಗಾ ಸ್ನಾನ ಮಾಡಿಸುವ ಇವರ ಪರಿಶ್ರಮ ಅಮೂಲ್ಯ ಎಂದರು.