Advertisement
ವರ್ಷಾರಂಭ, ವಿವಿಧ ಸೀಸನ್‌ಗಳು ಇರುವ ಈ ಸಂದರ್ಭದಲ್ಲಿ ಕರ್ಫ್ಯೂ, ಲಾಕ್‌ಡೌನ್ ವಿಧಿಸಿದರೆ ಜನಸಾಮಾನ್ಯರ ಆದಾಯಕ್ಕೆ ಬಹುದೊಡ್ಡ ಹೊಡೆತ ಬೀಳುತ್ತದೆ. ಈ ಬಗ್ಗೆ ಸರಕಾರಕ್ಕೂ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು.ಕರಾವಳಿಯಲ್ಲಿ ಈ ಸಮಯದಲ್ಲಿ ಮುಖ್ಯವಾಗಿ ನೇಮ, ಯಕ್ಷಗಾನ, ದೈವಾ ರಾಧನೆ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯುವುದು ವಾಡಿಕೆ. ಕಳೆದ 2 ವರ್ಷಗಳಿಂದ ಸರಿಯಾಗಿ ಯಾವುದನ್ನೂ ನೆರವೇರಿಸಲಾಗದೆ ಜನರು ಆತಂಕದಲ್ಲಿದ್ದರು. ಈಗ ಎಲ್ಲ ಆಚರಣೆ ನಡೆಸಲು ಸರಕಾರ ಅಧಿಕೃತ ಅನುಮತಿ ನೀಡಿರುವು ದರಿಂದ ಸಂತಸಗೊಂಡಿದ್ದಾರೆ.
Related Articles
ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಿದ್ದುದರಿಂದ ಕುರ್ಚಿ, ಶಾಮಿಯಾನಗಳು ಕಡಿಮೆ ಸಂಖ್ಯೆಯಲ್ಲಿ ಬಾಡಿಗೆಗೆ ಹೋಗುತ್ತಿದ್ದವು. ಮುಂದಿನ ದಿನಗಳಲ್ಲಿಯಾದರೂ ಈ ಹಿಂದಿನಂತೆ ಬೇಡಿಕೆ ಬಂದರೆ ಇದನ್ನು ನಂಬಿ ಜೀವನ ನಡೆಸುವವರಿಗೆ ನೆಮ್ಮದಿ ಸಿಗಲಿದೆ. ಸೀಮಿತ ಸಂಖ್ಯೆಯಲ್ಲಿ ಜನರು ಸೇರಿ ಸರಳವಾಗಿ ಸಮಾರಂಭ ಆಯೋಜಿಸುತ್ತಿದ್ದುದರಿಂದ ಸಬಾಭವನಗಳಿಗೆ ನಷ್ಟ ಉಂಟಾಗಿತ್ತು ಎನ್ನುತ್ತಾರೆ ಉಡುಪಿ ಜಿಲ್ಲಾ ಸಭಾಭವನಗಳ ಒಕ್ಕೂಟದ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ.
Advertisement
ದೈವಾರಾಧಕರಿಗೂ ನೆಮ್ಮದಿನಮಗೆ ಡಿಸೆಂಬರ್‌ನಿಂದ ಮೇ ತನಕ ಸೀಸನ್. ಇದುವರೆಗೆ ಸೀಮಿತ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎನ್ನುವ ನಿಯಮ ಇದ್ದುದರಿಂದ ಕೆಲವರು ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದರು. ಇದರಿಂದ ದೈವಾರಾಧಕರಿಗೆ ತೊಂದರೆ ಉಂಟಾಗಿತ್ತು. ಈಗ ಸರಕಾರ ಅನುಮತಿ ಕೊಟ್ಟಿರುವುದರಿಂದ ಈ ಹಿಂದಿನಂತೆ ಸಂಪ್ರ ದಾಯವನ್ನು ಮುಂದುವರಿಸಿಕೊಂಡು ಹೋಗಬಹುದಾಗಿದೆ ಎಂದು ಅಖೀಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಕಾರ್ಯದರ್ಶಿ ವಿನೋದ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.