Advertisement

ಕುಂಭಮೇಳದಲ್ಲಿ ಸರಯೂ ಯಕ್ಷವೈಭವ 

12:30 AM Feb 08, 2019 | |

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸರಯೂ ಮಕ್ಕಳ ಮೇಳದ “ಗುರುದಕ್ಷಿಣೆ’ ಎಂಬ ಯಕ್ಷಗಾನವು ದೇಶ ವಿದೇಶಗಳ ಭಕ್ತರ ಮನಸೂರೆಗೊಂಡಿತು. ಕರ್ನಾಟಕದ ನಾನಾ ಕಲಾಪ್ರಕಾರಗಳೂ ಕುಂಭಮೇಳದ ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಈ ದೇಶದ ಬಹುರೂಪದ ಕಲೆಗಳು ಕುಂಭಮೇಳದಲ್ಲಿ ಮೇಳೈಸಿಕೊಂಡು ದೇಶದ ಸಾಂಸ್ಕೃತಿಕ ವೈಭವವನ್ನು ಸಂಪನ್ನಗೊಳಿಸಿದವು. ಇನ್ನೂ ಬಹು ದಿನಗಳ ಕಾಲ ನಡೆಯುವ ಅತ್ಯಂತ ವೈಭವದ ಕುಂಭಮೇಳದಲ್ಲಿ ಯಕ್ಷಗಾನ ಪ್ರದರ್ಶಿಸಲು ಅವಕಾಶ ಸಿಕ್ಕಿದ್ದು ಮಕ್ಕಳ ಮೇಳದ ಭಾಗ್ಯ. ಗಂಗಾನದೀ ತೀರದಲ್ಲಿ, ತ್ರಿವೇಣಿ ಸಂಗಮದಲ್ಲಿ ನಮ್ಮ ಕಲೆಯ ಪ್ರದರ್ಶನದ ಭಾಗ್ಯ ಪಡೆದ ಚಿಣ್ಣರು ಉಲಿದರು, ನಲಿದರು, ಕುಣಿದರು. 

Advertisement

ಸಂಸ್ಕಾರ ಭಾರತಿಯ ಚಂದ್ರಶೇಖರ ಶೆಟ್ಟಿಯವರ ನೇತೃತ್ವದಲ್ಲಿ ಸರಯೂ ತಂಡವು “ಗುರುದಕ್ಷಿಣೆ’ ಎಂಬ ಕಥಾ ಭಾಗವನ್ನು ಪ್ರದರ್ಶಿಸಿತು. ಕೃಷ್ಣ ಬಲರಾಮರು ಗುರು ಸಾಂದೀಪನಿ ಮಹರ್ಷಿಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, 64 ದಿನಗಳಲ್ಲಿ ಶಿಕ್ಷಣ ಪಡೆದು ಊರಿಗೆ ತೆರಳಲು ಸಿದ್ಧರಾದಾಗ, ಗುರುದಕ್ಷಿಣೆಯ ಬಗ್ಗೆ ಪ್ರಸ್ತಾಪಿಸುತ್ತಾರೆ. 

ಗುರು ಪತ್ನಿಯ ಮೂಲಕ ತಿಳಿದು ಬಂದ ವಿಚಾರದಂತೆ ಕಳೆದ ಗುರು ಪುತ್ರನನ್ನು ಮರಳಿ ಪಡೆಯುವುದಕ್ಕಾಗಿ ಗುರುವಿನ ಆಶೀರ್ವಾದ ಪಡೆದು ತೆರಳುತ್ತಾರೆ. ಪ್ರಭಾಸ ಕ್ಷೇತ್ರದಲ್ಲಿ ವಾರಣಾಸಿಯ ಸಂಗಮ ಕ್ಷೇತ್ರಕ್ಕೆ ಬಂದು, ವರುಣದೇವನಲ್ಲಿ ವಿಚಾರಿಸುತ್ತಾರೆ. ಅವನು ಸಮುದ್ರಗಳ್ಳ ಪಂಚಜನನ ಬಗ್ಗೆ ತಿಳಿಸುತ್ತಾನೆ. ಕೃಷ್ಣನು ಪಂಚಜನನನ್ನು ಕೊಂದು, ಅವನ ಕೊನೆಯಾಸೆಯಂತೆ ಆತನ ಬೆನ್ನುಮೂಳೆಯಿಂದ ಶಂಖವೊಂದನ್ನು ರಚಿಸಿ, ಅದಕ್ಕೆ “ಪಾಂಚಜನ್ಯ’ ಎಂದು ಹೆಸರಿಟ್ಟು ತನ್ನ ಕೈಯಾಯುಧ ಭೂಷಣವಾಗಿ ಸ್ವೀಕರಿಸುತ್ತಾನೆ. ನಂತರ ಯಮಲೋಕಕ್ಕೆ ಬಂದು, ಗುರುಪುತ್ರನ ಬಗ್ಗೆ ಕೇಳಿದ. 

ಯಮ ನಿರಾಕರಿಸಿದಾಗ ಅವನಿಗೆ ವಿಶ್ವರೂಪವನ್ನು ತೋರುತ್ತಾನೆ. ಆಗ ಯಮಧರ್ಮನು ನಿಜ ಸಂಗತಿಯನ್ನರಿತು ಆತ್ಮಸ್ವರೂಪದಲ್ಲಿ ಗುರು ಪುತ್ರನನ್ನು ನೀಡಿ ಕಳುಹಿಸುತ್ತಾನೆ. ಕೃಷ್ಣ ಬಲರಾಮರು ಬಂದು ಗುರು ದಕ್ಷಿಣೆಯಾಗಿ ನೀಡುವುದೇ ಈ ಕಥೆಯ ಸಾರಾಂಶ. ವಾರಣಾಸಿಯಲ್ಲೇ ಈ ಕಥೆ ಜರುಗಿದ್ದುದ್ದರಿಂದ ಜನರಲ್ಲಿ ವಾಸ್ತವಿಕತೆಯನ್ನು ತಂದಿತು. 

ರವಿ ಅಲೆವೂರಾಯರ ನಿರ್ದೇಶನದ ಈ ತಂಡದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಸಂಜೀವ ಕಜೆಪದವು, ಚೆಂಡೆಯಲ್ಲಿ ಪ್ರಜ್ಞೆàಶ ಭಟ್‌ ಮದ್ದಳೆಯಲ್ಲಿ ಕೃಷ್ಣಯ್ಯ ಆಚಾರ್ಯ ಸಹಕರಿಸಿದರು. ಮುಮ್ಮೇಳದಲ್ಲಿ ರವಿ ಅಲೆವೂರಾಯ ವರ್ಕಾಡಿ, ಹರ್ಷಿತ್‌ ಶೆಟ್ಟಿ, ಅಶ್ವಿ‌ತ್‌ ಶೆಟ್ಟಿ, ಅಕ್ಷಯ್‌ ಸಿ.ಪೂಜಾರಿ, ನಿಖೀಲ್‌ ಕೋಟ್ಯಾನ್‌, ವಿಜಯಲಕ್ಷ್ಮೀ ಎಲ….ನಿಡ್ವಣ್ಣಾಯ, ಮಲ್ಲಿಕಾ ಜೀವನ್‌ ಸಹಕರಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next