Advertisement

ಆ.13ರಂದು ಬಂಟರ ಭವನದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2017 

02:37 PM Aug 01, 2017 | |

ಮುಂಬಯಿ: ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಂಬಯಿ ಘಟಕದ ವತಿಯಿಂದ ಮುಂಬಯಿಯಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2017 ಸಮಾರಂಭವು ಆ. 13 ರಂದು ಅಪರಾಹ್ನ 2ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ಜರಗಲಿದೆ.

Advertisement

ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅವರ ಮಾರ್ಗದರ್ಶನದಲ್ಲಿ, ಉಪಾಧ್ಯಕ್ಷರುಗಳಾದ ಕೈರಬೆಟ್ಟು ವಿದ್ವಾನ್‌ ವಿಶ್ವನಾಥ್‌ ಭಟ್‌,  ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಅಶೋಕ್‌ ಪಕ್ಕಳ, ಸುರೇಶ್‌ ಬಿ. ಶೆಟ್ಟಿ ಮರಾಠ, ಸಂಚಾಲಕರುಗಳಾದ ಐಕಳ ಗಣೇಶ್‌ ಶೆಟ್ಟಿ, ಅಶೋಕ್‌ ಶೆಟ್ಟಿ ಪೆರ್ಮುದೆ, ಗೌರವ ಕಾರ್ಯದರ್ಶಿ ಕರ್ನೂರು ಮೋಹನ್‌ ರೈ, ಕೋಶಾಧಿಕಾರಿಗಳಾದ ಬಾಬು ಎನ್‌. ಶೆಟ್ಟಿ ಪೆರಾರ, ಸಿಎ ಸುರೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ  ಸಮಾರಂಭವು ಜರಗಲಿದೆ.

ಯಕ್ಷಧ್ರುವ ಪಟ್ಲ ಸಂಭ್ರಮ-2017 ಉದ್ಘಾಟನೆ 
ಅಪರಾಹ್ನ 2ಕ್ಕೆ  ಹೊಟೇಲ್‌ ದಿವ್ಯಾ ಇಂಟರ್‌ನ್ಯಾಷನಲ್‌ ಇದರ ಮುಖ್ಯ ಆಡಳಿತ ನಿರ್ದೇಶಕ ಶಾಂತಾರಾಮ್‌ ಶೆಟ್ಟಿ ಅವರು ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರು ಆಗಮಿಸಲಿದ್ದಾರೆ. ಪೊವಾಯಿಯ ಶ್ರೀ ರುಂಡ ಮಾಲಿನಿ ಕ್ಷೇತ್ರ ಪಂಚಕುಟೀರ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರು ಶುಭಾಶಂಸನೆಗೈಯಲಿದ್ದಾರೆ.

ಸಮಾರಂಭದಲ್ಲಿ ಗೌರವ ಅತಿಥಿಗಳ ಸಮಾಗಮ  
ಯಕ್ಷಧ್ರುವ ಪಟ್ಲ ಸಂಭ್ರಮದ ಅದ್ದೂರಿ ಉದ್ಘಾಟನ ಸಮಾರಂಭದಲ್ಲಿ ತುಂಗಾ ಇಂಟರ್‌ನ್ಯಾಷನಲ್‌ ಇದರ ಮುಖ್ಯ ಆಡಳಿತ ನಿರ್ದೇಶಕ ಸುಧಾಕರ ಎಸ್‌. ಹೆಗ್ಡೆ, ಹೊಟೇಲ್‌ ಅವೆನ್ಯೂ ಇದರ ರಘುರಾಮ ಶೆಟ್ಟಿ, ನವಿಮುಂಬಯಿ ಸುಪ್ರೀಂ ಹೆರಿಟೇಜ್‌ನ ಶಿವರಾಮ ಜಿ. ಶೆಟ್ಟಿ ಅಜೆಕಾರು, ಮಾತೃಭೂಮಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ, ಬಂಟರ ಸಂಘ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟರ ಸಂಘದ ಗೌರವ ಕೋಶಾಧಿಕಾರಿ ಸಿಎ ಐ. ಆರ್‌. ಶೆಟ್ಟಿ, ಬೊರಿವಲಿ ಸ್ವಾಗತ್‌ ಹೊಟೇಲ್‌ನ ಮುಂಡಪ್ಪ ಎಸ್‌. ಪಯ್ಯಡೆ, ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಇದರ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ, ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ವೆಲ್‌ಕಂ ಪ್ಯಾಕೇಜಿಂಗ್‌ ಇಂಡಸ್ಟಿÅàಸ್‌ನ ರವೀಂದ್ರನಾಥ ಭಂಡಾರಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಅಂಧೇರಿ ಕ್ಲಾಸಿಕ್‌ ಹೊಟೇಲ್‌ನ ಸುರೇಶ್‌ ಕಾಂಚನ್‌, ದಿವ್ಯ ಸಾಗರ್‌ ಗ್ರೂಪ್‌ ಆಫ್‌ನ ದಿವಾಕರ ಶೆಟ್ಟಿ ಮುದ್ರಾಡಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ಬಿಜೆಪಿ ಉತ್ತರ ವಲಯ ಮುಂಬಯಿ ಜಿಲ್ಲಾ ಕಾರ್ಯದರ್ಶಿ ವಸಂತ್‌ ಎಚ್‌. ಶೆಟ್ಟಿ, ಡೊಂಬಿವಲಿ ಹೊಟೇಲ್‌ ಮಂಗೇಶ್‌ ಇದರ ಸುಂದರ್‌ ಶೆಟ್ಟಿ, ವಿರಾರ್‌ನ ಹೊಟೇಲ್‌ ಎಂಎಂ ಇದರ ಹರೀಶ್‌ ಶೆಟ್ಟಿ ಗುರ್ಮೆ, ಬಂಟರ ಸಂಘ ಜೊತೆ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕುತ್ಯಾರ್‌, ಸಂತೋಷ್‌ ಕ್ಯಾಟರರ್ನ ರಾಘು ಪಿ. ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.

ಗಾನವೈಭವ-ನಾಟ್ಯ ವೈಭವ 
ಉದ್ಘಾಟನಾ ಸಮಾರಂಭದ ಬಳಿಕ ತೆಂಕು-ಬಡಗು ತಿಟ್ಟಿನ ಖ್ಯಾತ ಭಾಗವತರುಗಳಿಂದ ಗಾನವೈಭವ ಜರಗಲಿದೆ. ಭಾಗವತರುಗಳಾಗಿ ಗಾನ ಗಂಧರ್ವ ಸತೀಶ್‌ ಶೆಟ್ಟಿ ಪಟ್ಲ, ಸತ್ಯನಾರಾಯಣ ಪುಣಿಂಚಿತ್ತಾಯ, ಸುರೇಶ್‌ ಶೆಟ್ಟಿ, ಶಂಕರನಾರಾಯಣ, ಕು| ಕಾವ್ಯಶ್ರೀ ಅಜೇರು, ಕು| ಅಮೃತಾ ಅಡಿಗ ಅವರು ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಚೆಂಡೆ-ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ, ಗುರುಪ್ರಸಾದ್‌ ಬೊಳಿಂಜಡ್ಕ, ಪ್ರಶಾಂತ್‌ ಶೆಟ್ಟಿ ವಗೆನಾಡು, ಮಹೇಶ್‌ ಮಂದರ್ತಿ ಅವರು ಸಹಕರಿಸಲಿದ್ದಾರೆ.

Advertisement

ಕಲಾಭಿಮಾನಿಗಳನ್ನು ರಂಜಿಸಲಿರುವ ನಾಟ್ಯವೈಭವ 
ನಾಟ್ಯ ವೈಭವದಲ್ಲಿ ಪ್ರಸಿದ್ಧ ಸ್ತಿÅàವೇಷಧಾರಿಗಳಾದ ಪ್ರಶಾಂತ್‌ ಶೆಟ್ಟಿ ನೆಲ್ಯಾಡಿ, ಅಕ್ಷಯ ಕುಮಾರ್‌ ಮಾರ್ನಡ್‌, ರಕ್ಷಿತ್‌ ಶೆಟ್ಟಿ ಪಡ್ರೆ, ಲೋಕೇಶ್‌ ಮುಚ್ಚಾರು ಮೊದಲಾದವರು ಭಾಗವಹಿಸಲಿದ್ದಾರೆ. ಉಜಿರೆ ಅಶೋಕ್‌ ಭಟ್‌ ಅವರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಆನಂತರ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಶಸ್ತಿ ಪ್ರಧಾನ, ಗೌರವಾರ್ಪಣೆ ಜರಗಲಿದೆ. ಕೊನೆಯಲ್ಲಿ ವಿರೋಚನ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಕೇಂದ್ರ ಸಲಹಾ ಮಂಡಳಿಯ ಮಾರ್ಗದರ್ಶಕ ಪಟ್ಲಗುತ್ತು ಮಹಾಬಲ ಶೆಟ್ಟಿ, ಗೌರವಾಧ್ಯಕ್ಷ ಕಲ್ಲಾಡಿ ದೇವಿ ಪ್ರಸಾದ್‌ ಶೆಟ್ಟಿ, ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಉಪಾಧ್ಯಕ್ಷರುಗಳಾದ ಡಾ| ಮನು ರಾವ್‌, ಐಕಳ ಗಣೇಶ್‌ ಶೆಟ್ಟಿ, ಅಶೋಕ್‌ ಶೆಟ್ಟಿ ಪೆರ್ಮುದೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್‌ ಕುಮಾರ್‌ ರೈ ಮಂಗಳೂರು, ಜತೆ ಕಾರ್ಯದರ್ಶಿಗಳಾದ ಉದಯ್‌ ಕುಮಾರ್‌ ಶೆಟ್ಟಿ ಕುಂದಾಪುರ, ರಾಜೀವ ಪೂಜಾರಿ ಕೈಕಂಬ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ್‌ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳಾ, ಯೋಜನಾ ನಿರ್ದೇಶಕರುಗಳಾದ ಡಾ| ಸತೀಶ್‌ ಭಂಡಾರಿ, ಡಾ| ಪದ್ಮನಾಭ ಕಾಮತ್‌ ಅವರು ಪಾಲ್ಗೊಳ್ಳಲಿದ್ದಾರೆ. ಕಲಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಇದರ ಮುಂಬಯಿ ಘಟಕದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next