ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ದೇಶ ವಿದೇಶಗಳಲ್ಲಿ 41 ಘಟಕಗಳನ್ನು ಹೊಂದಿದ್ದು, ಇದೀಗ ಉಡುಪಿ ಮಹಿಳಾ ವಿಭಾಗ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸನ್ನಿಧಿಯಲ್ಲಿ ಆರಂಭಗೊಳ್ಳಲಿದೆ.
ಉಡುಪಿಯ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ, ನ.14ರಂದು ಸಂಜೆ 5.30ಕ್ಕೆ ದೀಪ ಪ್ರಜ್ವಲಿಸಿ ಮಹಿಳಾ ಘಟಕವನ್ನು ಉದ್ಘಾಟಿಸಲಿದ್ದಾರೆ. ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಮುದ್ದಣ್ಣ ಶೆಟ್ಟಿ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಉದ್ಯಮಿಗಳಾದ ಪಿ. ಪುರುಷೋತ್ತಮ ಶೆಟ್ಟಿ ದಿವಾಕರ್ ಶೆಟ್ಟಿ ತೋಟದಮನೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, (ರಿ.) ಉಡುಪಿ ಘಟಕದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿ ಮಹಿಳಾ ವಿಭಾಗದ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಕಲಾ ವಿಮರ್ಶಕಿ ಪ್ರತಿಭಾ ಎಂ.ಎಲ್. ಸಾಮಗ ಉಪಸ್ಥಿತರಿರಲಿದ್ದಾರೆ.
ಇದೇ ಸಮಯದಲ್ಲಿ ತೆಂಕು ಬಡಗುತಿಟ್ಟಿನ ಹವ್ಯಾಸಿ ಯಕ್ಷಗಾನ ಕಲಾವಿದೆ ಕು. ವಿಂದ್ಯಾ ಆಚಾರ್ಯ ಉಡುಪಿ, ಯುವ ಮಹಿಳಾ ಯಕ್ಷಗಾನ ಭಾಗವತರು ಕು.ಸಿಂಚನಾ ಮೂಡುಕೋಡಿ ಅವರಿಗೆ ಸನ್ಮಾನ ಕಾರ್ಯ ನಡೆಯಲಿದೆ.
ಪ್ರೊ. ಪವನ್ ಕಿರಣಕೆರೆ ಅವರ ಅಭಿನಂದನೆಯೊಂದಿಗೆ ನೂತನ ಯಕ್ಷಗಾನ ಪ್ರಸಂಗ ‘ಭಾರತ ವರ್ಷಿಣಿ’ ಪಾವಂಜೆ ಮೇಳದ ಕಲಾವಿದರಿಂದ ಪ್ರಥಮ ಪ್ರಯೋಗವಾಗಿ ನಡೆಯಲಿದೆ.
ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಪ್ರತಿಭಾ ಎಂ.ಎಲ್. ಸಾಮಗ, ಅಧ್ಯಕ್ಷರು ನಿರುಪಮಾ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರು ಡಾ. ಅಂಜಲಿ ಸುನೀಲ್ ಮುಂಡ್ಕೂರು, ಪೂರ್ಣಿಮಾ ಸುರೇಶ್ ನಾಯಕ್, ಅಮಿತಾಂಜಲಿ ಕಿರಣ್, ಪದ್ಮಲತಾ ವಿಷ್ಣು ಭಟ್, ಸುಮಿತ್ರ ಕೆರೆಮಠ, ಕಾರ್ಯದರ್ಶಿ ಶಿಲ್ಪಾ ಜೋಷಿ, ಜೊತೆ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್, ಅಮಿತಾ ಕ್ರಮಧಾರಿ, ಲತಾ ಮಹೇಂದ್ರ ಆಚಾರ್ಯ, ಭಾರತಿ ಜಯಕರ್ ಆಚಾರ್ಯ, ಗೌರವ ಸಲಹೆಗಾರರು ಪ್ರಭಾವತಿ ವಿಶ್ವನಾಥ ಶೆಣೈ, ಪಮಿತಾ ಶೆಟ್ಟಿ, ತಾರಾ ಆಚಾರ್ಯ, ಭಾರತಿ ಕೆ. ಎಂ. ಪಣಿಯಾಡಿ, ವೇದಾವತಿ ಶೆಟ್ಟಿ, ಸ್ನೇಹ ಆಚಾರ್ಯ, ಆಶಾ ಪ್ರತಾಪ್, ರಕ್ಷಾಶೆಣೈ, ರೂಪಾಶ್ರೀ, ಅಮಿತಾ ಗಿರೀಶ್, ಸುಮಾ ಹೆಬ್ಬಾರ್; ಸದಸ್ಯರು ಅಮಿತಾ ಆಚಾರ್ಯ, ಸುಮನ ಆಚಾರ್ಯ, ಪ್ರತಿಮಾ ರೈ, ವಿದ್ಯಾ ಸರಸ್ವತಿ, ಸರೋಜ ಶೆಣೈ, ಸರೋಜ ಯಶವಂತ್, ಶ್ವೇತಾ ಶೆಟ್ಟಿ, ಜ್ಯೋತಿ ಎಸ್. ದೇವಾಡಿಗ, ವೇದಾವತಿ ಶೆಟ್ಟಿ ತಾರಾ ಸತೀಶ್, ಡಾ. ದಿವ್ಯಾ ಸತ್ರಾಜಿತ, ಸುಧಾ ಹೆಬ್ಬಾರ್ ಉಪಸ್ಥಿತರಿರಲಿದ್ದಾರೆ.