ಸಿರಿಕಲಾಮೇಳ ಸಂಸ್ಥೆಯ ವತಿಯಿಂದ “ಯಕ್ಷ ರಥ’ ಕಾರ್ಯಕ್ರಮ ಆಯೋಜನೆಯಾಗಿದೆ.ಇದು ಯಕ್ಷರಥ ತರಗತಿಯ ವಿದ್ಯಾರ್ಥಿಗಳ ರಂಗಪ್ರವೇಶ ಕಾರ್ಯಕ್ರಮವಾಗಿದ್ದು, ಪೂರ್ವರಂಗ ಹಾಗೂ ಜಾಂಬವತಿ ಕಲ್ಯಾಣ ಪ್ರಸಂಗಗಳು ಪ್ರದರ್ಶನ ಕಾಣಲಿವೆ. ಕರಾವಳಿಯವರಲ್ಲದ ಬಹುತೇಕರು ಆಸಕ್ತಿಯಿಂದ ಯಕ್ಷಗಾನ ಕಲಿತು ಪ್ರದರ್ಶನ ನೀಡುತ್ತಿರುವುದು ಮತ್ತೂಂದು ವಿಶೇಷ. ಮುಖ್ಯ ಅತಿಥಿಗಳಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಆರಾಧ್ಯ, ಕರುಣಾಳು ಟ್ರಸ್ಟ್‌ನ ಸಂಸ್ಥಾಪಕ ಆನಗಳ್ಳಿ ಕರುಣಾಕರ ಹೆಗ್ಡೆ, ಉದ್ಯಮಿ ಅಂಪಾರು ದಿನೇಶ ವೈದ್ಯ, ಯಕ್ಷಗುರು ಕೃಷ್ಣಮೂರ್ತಿ ತುಂಗ, ಮದ್ದಳೆವಾದಕ ಎ.ಪಿ.ಪಾಠಕ್, ಕಲಾಧರ ಯಕ್ಷಬಳಗದ ವಿದ್ಯಾಧರ ರಾವ್ ಜಲವಳ್ಳಿ, ಯಕ್ಷಕಲಾವಿದೆ ಅರ್ಪಿತಾ ಹೆಗಡೆ ಭಾಗವಹಿಸಲಿದ್ದಾರೆ.
ಎಲ್ಲಿ?: ನಯನ ಸಭಾಂಗಣ, ಜೆ.ಸಿ.ರಸ್ತೆ
ಯಾವಾಗ?: ಜೂ.16, ಶನಿವಾರ ಸಂಜೆ 5.30