Advertisement

ಯಕ್ಷ ವೈಭವ ಮಕ್ಕಳ ಮೇಳ:ಸಾಂಸ್ಕೃತಿಕ ಮತ್ತು ಸಮ್ಮಾನ  ಕಾರ್ಯಕ್ರಮ

04:45 PM Feb 07, 2018 | Team Udayavani |

ಮುಂಬಯಿ: ಸನಾತನ ಧರ್ಮಗಳ ಭವ್ಯ ಪರಂಪರೆ  ಯಕ್ಷಗಾನದಲ್ಲಿ  ಆಳವಾಗಿ ಬೇರೂರಿದೆ. ಇದರ  ಅಂತ: ಸತ್ವವನ್ನು  ವಿಶೇಷ ಅದ್ಯಾಯದೊಂದಿಗೆ  ವಿಶ್ವವ್ಯಾಪಿ ಪರಿಚಯಿಸಿದ  ಕೀರ್ತಿ ಕಲಾವಿದರಿಗೆ  ಸಲ್ಲುತ್ತದೆ.  ಪ್ರತಿಯೊಂದು  ಸಮಸ್ಯೆಗಳಿಗೂ ಪರಿಹಾರ  ಸೂಚಿಸುವ  ಪೌರಣಿಕ ಕಥೆಗಳ ಯಕ್ಷಗಾನ  ಬಯಲಾಟಗಳು  ಹಲವಾರು ವೈಶಿಷ್ಠಗಳ ಅಗರವಾಗಿದೆ ಎಂದು  ವಿಶ್ವ ಹಿಂದೂ  ಪರಿಷತ್‌ನ ಥಾಣೆಯ ಜಿಲ್ಲಾಧ್ಯಕ್ಷ  ಪೊಲ್ಯ ಉಮೇಶ್‌ ಶೆಟ್ಟಿ ನುಡಿದರು.

Advertisement

ಜ. 30 ರಂದು ಬೊರಿವಲಿ ಪಶ್ಚಿಮದ ಪ್ರಭೋಧನ್ಕರ್‌ ಠಾಕ್ರೆ  ಸಭಾಗೃಹದಲ್ಲಿ  ಯಕ್ಷ ವೈಭವ  ಮಕ್ಕಳ ಮೇಳ ಮುಂಬಯಿ ಇದರ  ಸಾಂಸ್ಕೃತಿಕ ಮತ್ತು ಸಮ್ಮಾನ  ಕಾರ್ಯಕ್ರಮದಲ್ಲಿ  ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬಯಿಯ ಬಾಲ ಕಲಾವಿದರು ಊರಿನ ಕಲಾವಿದರೊಟ್ಟಿಗೆ ಅಭಿನಯಿಸಿ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. ಸಂಸ್ಕೃತಿಯ  ಉಪಾಸನೆಯೊಂದಿಗೆ  ಸನ್ನಡತೆಯನ್ನು  ಭೇದಿಸುವ  ಮೇಳದ ರೂವಾರಿ ಭಾಗವತ ಎಳ್ಳಾರೆ ಶಂಕರ ನಾಯಕ್‌  ಅವರ ಕಾರ್ಯ ಸಾಧನೆ ಮತ್ತು ನಿಸ್ವಾರ್ಥ ಸೇವೆಗೆ ಸಂದ ಗೌರವ  ಇದಾಗಿದೆ ಎಂದರು. ಮೀರಾಗಾಂವ್‌ ಶ್ರೀ   ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ  ಸಾಂತಿಂಜ  ಜನಾರ್ಧನ ಭಟ್‌  ಅವರು ಮಾತನಾಡಿ, ವಾಟ್ಸಾಪ್‌, ಫೇಸ್‌ಬುಕ್‌ನ  ಈ ಕಾಲದಲ್ಲಿ  ಮಕ್ಕಳು ಯಕ್ಷಗಾನ  ಕಲೆಗೆ ಆಕರ್ಷಿತರಾಗುವುದು  ಅಶಾದಾಯಕ  ಬೆಳವಣಿಗೆಯಾಗಿದೆ. ಸಂಸ್ಕೃತಿ ಸಂಸ್ಕಾರಗಳು  ಉಳಿದರೆ ಮಾತ್ರ ನಮ್ಮ ಭಾಷೆ ಉಳಿಯಲು ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ಭಾಗವತ  ರಾಘವೇಂದ್ರ ಕೆ. ನಾಯಕ್‌,   ಕಲಾ ಪೋಷಕ  ಉದ್ಯಮಿ ಅಜಿತ್‌ ಶೆಟ್ಟಿ  ಬೆಳ್ಮಣ್‌  ಅವರನ್ನು  ವೇದಿಕೆಯ ಗಣ್ಯರು ಸಮ್ಮಾನಿಸಿದರು. ರಸಿಕಾ ಮೂಲ್ಯ  ಅತಿಥಿಗಳನ್ನು ಪರಿಚಯಿಸಿದರು. ಆರತಿ ಶೆಟ್ಟಿ  ಕಾರ್ಯಕ್ರಮ  ನಿರ್ವಹಿಸಿದರು. ಮೇಳದ  ಕಾರ್ಯ ಸಾಧನೆ  ಬಗ್ಗೆ  ಮೇಳದ  ಸಂಸ್ಥಾಪಕ  ಭಾಗವತ  ಎಳ್ಳಾರೆ  ಶಂಕರ ನಾಯಕ್‌ ವಿವರಿಸಿದರು.

ವೇದಿಕೆಯಲ್ಲಿ  ಕಲಾಪೋಷಕರಾದ  ಡಾ| ಹರೀಶ್‌ ಶೆಟ್ಟಿ,  ವೆಂಕಟೇಶ ಪೈ,  ಜಿ. ಟಿ.  ಆಚಾರ್ಯ, ನ್ಯಾಯವಾದಿ  ಸುರೇಶ್‌ ಆಚಾರ್ಯ,  ಸಂಜೀವ್‌ ಶೆಟ್ಟಿ, ಲಯನ್‌  ಶಂಕರ್‌  ಕೆ. ಟಿ.  ಗೋಪಾಲ ಕೃಷ್ಣ  ಗಾಣಿಗ,  ಸುಂದರ ಶೆಟ್ಟಿಗಾರ್‌, ರವಿ ಕೋಟ್ಯಾನ್‌  ಅಲೆವೂರು, ಶ್ರೀಧರ ಆಚಾರ್ಯ ಉಪಸ್ಥಿತರಿದ್ದರು.  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಸಾಯಿಯ ಸಚ್ಚಿದಾನಂದ  ಭಟ್‌ ಮತ್ತು ತಂಡದವರಿಂದ  ಭಕ್ತಿ  ರಸ ಮಂಜರಿ ಮತ್ತು ಯಕ್ಷ ವೈಭವ  ಮಕ್ಕಳ ಮೇಳ ಮುಂಬಯಿ  ಇದರ ಕಲಾವಿದರಿಂದ  ಪಾಪಣ್ಣ  ಗುಣಸುಂದರಿ  ಬಯಲಾಟ ಪ್ರದರ್ಶನಗೊಂಡಿತು.

 ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next