Advertisement

ಐತಿಹಾಸಿಕ ಹಂಪಿಗೆ ಮೈಸೂರು ಮಹಾರಾಜ ಯದುವೀರ ಭೇಟಿ

09:36 AM Feb 04, 2019 | Team Udayavani |

ಹೊಸಪೇಟೆ: ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಶ್ರೀಕಂಠದತ್ತ ಒಡೆಯರ್‌ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಿಸಿದರು.

Advertisement

ಕಮಲಾಪುರ ಹಾಗೂ ತಳವಾರಗಟ್ಟ ರಸ್ತೆ ಮೂಲಕ ಬ್ಯಾಟರಿ ಚಾಲಿತ ವಾಹನ ನಿಲ್ದಾಣಕ್ಕೆ ಆಗಮಿಸಿದ ಒಡೆಯರ್‌ ಅವರು ನಂತರ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಠuಲ ಬಜಾರ್‌, ಪುಷ್ಕರಣಿ, ಪ್ರಸಿದ್ಧ ವಿಜಯವಿಠuಲ ದೇವಸ್ಥಾನದಲ್ಲಿನ ಕಲ್ಲಿನ ರಥ ಎಲ್ಲವನ್ನೂ ವೀಕ್ಷಿಸಿ ಫೋಟೋ ಕ್ಲಿಕ್ಕಿಸಿಕೊಂಡರು.

ನಂತರ ಸಂಗೀತ ಮಂಟಪಕ್ಕೆ ತೆರಳಿದ ಅವರು, ಸಪ್ತಸ್ವರ ಕಂಬಗಳಿಂದ ನಾದ ಆಲಿಸಿದರು. ತುಂಗಭದ್ರಾ ನದಿ ತೀರದಲ್ಲಿರುವ ಪುರಂದರ ಮಂಟಪ ವೀಕ್ಷಿಸಿದರು.

ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಸಿ.ಎಸ್‌. ವಾಸುದೇವನ್‌ ಮತ್ತಿತರರು ಇವರೊಂದಿಗಿದ್ದರು. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next