Advertisement

ಯಾದಗಿರಿ: ಸೋಂಕಿತರ ಸಂಖ್ಯೆ 916ಕ್ಕೆ ಏರಿಕೆ

09:37 PM Jun 26, 2020 | Sriram |

ಯಾದಗಿರಿ: ಇಷ್ಟು ದಿನ ಮಹಾರಾಷ್ಟ್ರದ ಸಂಪರ್ಕದಿಂದ ಹರಡುತ್ತಿದ್ದ ಸೋಂಕು, ಇದೀಗ ಸೋಂಕಿತರ ಸಂಪರ್ಕದಿಂದಲೂ ಹಬ್ಬುತ್ತಿದೆ. ಜೂನ್‌ 19ರಂದು ಸುರಪುರ ಸಾರಿಗೆ ಘಟಕದ 31 ವರ್ಷದ ಚಾಲಕ ( ಪಿ-8228)ಗೆ ಆತನ ಪತ್ನಿಯಿಂದ ಸೋಂಕು ದೃಢವಾಗಿತ್ತು, ಅವರ ಸಂಪರ್ಕದಿಂದ ಈಗ ಸುರಪುರ ಸಾರಿಗೆ ಘಟಕದ ನಾಲ್ವರು ಸಿಬ್ಬಂದಿಗಳಲ್ಲಿ ಸೋಂಕು ಹರಡಿದೆ.

Advertisement

ಚಾಲಕನ ಸಂಪರ್ಕಕ್ಕೆ ಬಂದಿದ್ದ 8 ಜನರನ್ನು ಕ್ವಾರಂಟೈನ್‌ನಲ್ಲಿರಿಸಿ, ಘಟಕವನ್ನು ಸ್ಯಾನಿಟೈಸ್‌ ಮಾಡಲಾಗಿದ್ದು, ಇದೀಗ ಸುರಪುರ ಬಸ್‌ ಡಿಪೋದ 58 ವರ್ಷದ ಪುರುಷ (ಪಿ-10657), 54 ವರ್ಷದ ಪುರುಷ (ಪಿ-10658), 44 ವರ್ಷದ ಪುರುಷ (ಪಿ-10659) ಹಾಗೂ 50 ವರ್ಷದ ಪುರುಷ (ಪಿ-10660)ಗೆ ಸೋಂಕು ದೃಢವಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಇನ್ನು ಶಹಾಪುರ ತಾಲೂಕಿನ ಹೋತಪೇಟ ಗ್ರಾಮದ 35 ವರ್ಷದ ಪುರುಷ (ಪಿ-10655), ಸುರಪುರ ತಾಲೂಕಿನ  ಲಕ್ಷ್ಮೀ ದೇವಸ್ಥಾನ ಸಮೀಪದ 55 ವರ್ಷದ ಮಹಿಳೆ (ಪಿ-10656), ಹುಣಸಗಿ ಲಕ್ಷ್ಮೀ ದೇವಸ್ಥಾನ ಸಮೀಪದ 53 ವರ್ಷದ ಪುರುಷ (ಪಿ-10661) ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. ಪ್ರಕರಣ ಸಂಖ್ಯೆ ಪಿ-10655 ಮತ್ತು ಪಿ-10656ರ ವ್ಯಕ್ತಿಗಳು ಮಹಾರಾಷ್ಟ್ರದ ಪುಣೆ ಹಾಗೂ ಮುಂಬಯಿನಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ. ಪಿ-10661 ಐಎಲ್‌ಐ ಪ್ರಕರಣವಾಗಿದ್ದು ಒಟ್ಟು 7 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಸಂಖ್ಯೆ916ಕ್ಕೆ ಏರಿಕೆಯಾಗಿದೆ.

70 ಜನ ಗುಣಮುಖ: ಜಿಲ್ಲೆಯಲ್ಲಿ ಕೋವಿಡ್‌-19 ಖಚಿತಪಟ್ಟ 916 ವ್ಯಕ್ತಿಗಳ ಪೈಕಿ ಶುಕ್ರವಾರ ಮತ್ತೆ 70 ಜನ ಸೇರಿ ಈವರೆಗೆ ಒಟ್ಟು 785 ಜನ ಗುಣಮುಖರಾಗಿದ್ದು ಉಳಿದ 130 ಪ್ರಕರಣಗಳು ಸಕ್ರಿಯವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next