Advertisement

ಕ್ವಾರಂಟೈನ್‌ ಅವ್ಯವಸ್ಥೆ ಬಗ್ಗೆ ಎಚ್ಡಿಕೆಗೆ ಕಂದಕೂರ ಮನವರಿಕೆ

06:56 PM May 28, 2020 | Naveen |

ಯಾದಗಿರಿ: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕೋವಿಡ್‌-19 ಕುರಿತು ಜೆಡಿಎಸ್‌ ಪಕ್ಷದ ಶಾಸಕರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಜಿಲ್ಲೆಯ ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಅವರು ಜಿಲ್ಲೆಯ ಕ್ವಾರಂಟೈನ್‌ ಕೇಂದ್ರಗಳ ಅವ್ಯವಸ್ಥೆ ಬಗ್ಗೆ ಮತ್ತು ಗುರುಮಠಕಲ್‌ನಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ವಲಸೆ ಕಾರ್ಮಿಕರಲ್ಲಿ ಕಂಡು ಬಂದಿರುವ ಸೋಂಕಿನ ಕುರಿತು ಮಾಹಿತಿ ನೀಡಿದರು.

Advertisement

ತಮ್ಮ ಕ್ಷೇತ್ರದ ಗ್ರಾಮ ಮತ್ತು ತಾಂಡಾಗಳಲ್ಲಿ ಕಂಡು ಬಂದಿರುವ ಪಾಸಿಟಿವ್‌ ಪ್ರಕರಣಗಳಿಂದ ಗ್ರಾಮೀಣ ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದರೂ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ ಇದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಸೋಂಕಿತರ ಸಂಖ್ಯೆ ತೀವ್ರವಾಗಿ ಏರುತ್ತಲೇ ಇದೆ. ಜಿಲ್ಲಾಡಳಿತ ಆಯಾ ಕ್ಷೇತ್ರದ ಶಾಸಕರಿಗೆ ಕ್ವಾರಂಟೈನ್‌ ಕೇಂದ್ರಗಳ ಜವಾಬ್ದಾರಿ ನೀಡಿ ಮೇಲಿಂದ ಮೇಲೆ ಈ ಬಗ್ಗೆ ಚರ್ಚಿಸುವ ಮೂಲಕ ಸಲಹೆಗಳನ್ನು ಪಡೆದುಕೊಳ್ಳುವ ಅಗತ್ಯವಿದೆ ಎಂದರು.

ಶಾಸಕರ ಸಲಹೆ ಮತ್ತು ಸಮಸ್ಯೆಗಳನ್ನು ಆಲಿಸಿದ ಕುಮಾರಸ್ವಾಮಿ ಅವರು, ಇಲ್ಲಿನ ಸಮಸ್ಯೆ ಮತ್ತು ಆಗಬೇಕಿರುವ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next