Advertisement

ಯಾದಗಿರಿ ಜನಾಶೀರ್ವಾದ ಯಾತ್ರೆ ವೇಳೆ ಸುಡುಮದ್ದು ಸದ್ದು: ಪ್ರಕರಣ ದಾಖಲು

04:39 PM Aug 18, 2021 | Team Udayavani |

ಯಾದಗಿರಿ: ಭಾರತೀಯ ಜನತಾ ಪಕ್ಷದ ಜನಾಶೀರ್ವಾದ ಯಾತ್ರೆ ಮೆರವಣಿಗೆಯಲ್ಲಿ ಸಚಿವ ಭಗವಂತ ಖೂಬಾ ಸ್ವಾಗತಿಸುವ ವೇಳೆ ಸಿಡಿ ಮದ್ದು ಸಿಡಿಸಿರುವ ಹಿನ್ನೆಲೆ ಗಾಳಿಯಲ್ಲಿ ಗುಂಡು ಹಾರಿಸಿದ ಕುರಿತು ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

ಖುಬಾ ಅವರು ನಾಲವಾರ ದಿಂದ ಯರಗೋಳ ಮಾರ್ಗವಾಗಿ ಯಾದಗಿರಿಗೆ ಆಗಮಿಸುವ ವೇಳೆ ಭವ್ಯ ಸ್ವಾಗತ ಕೋರಲಾಯಿತು, ಜೆಸಿಬಿಯಿಂದ ಹೂಮಳೆಗೈಯಲಾಯಿತು ಇದೇ ವೇಳೆ ನೆರೆದವರು ಸಂಭ್ರಮ ದಲ್ಲಿ ನಾಡ ಬಂದೂಕಿನಿಂದ ಮದ್ದು ಸಿಡಿಸಿದ್ದಾರೆ.

ಘಟನೆ ಕುರಿತು ಸ್ಪಷ್ಟನೆ ನೀಡಿದ ಯಾದಗಿರಿ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ, ನಾಡ ಬಂದೂಕಿನಿಂದ ಗುಂಡು ಹಾರಿಸಿಲ್ಲ. ಅದು ಪಟಾಕಿಯಂತೆ ಶಬ್ದ ಬರುವ ಸಿಡಿ ಮದ್ದು ಎಂದರು. ಬಳಿಕ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡುವ ವೇಳೆ ಪಟಾಕಿಗಳಂತೆ ಶಬ್ದ ಬರಲು ಬಾಬುರಾವ ಚಿಂಚನಸೂರ ಅವರು ಬೆಂಬಲಿಗರು ಬಳಸಿದ್ದಾರೆ ಅದನ್ನು ಮಾಧ್ಯಮ ಗಳು ಸರಿಪಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ :ರಾಷ್ಟ್ರೀಯ ಶಿಕ್ಷಣ ನೀತಿ : ಆಗಸ್ಟ್ 23 ರಿಂದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next