Advertisement

ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ

06:51 PM Sep 16, 2019 | Naveen |

ಯಾದಗಿರಿ: ಗ್ರಾಮೀಣ ಭಾಗದಲ್ಲಿ ಅಡಗಿರುವ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಹೆಡಗಿಮದ್ರಾ ಶಾಂತ ಶಿವಯೋಗಿ ಮಠದ ಪೀಠಾಧಿಪತಿ ಪೂಜ್ಯ ಶಾಂತಮಲ್ಲಿಕಾರ್ಜುನ ಪಂಡಿತರಾಧ್ಯ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಹೆಡಗಿಮದ್ರಾ ಎಸ್‌.ಎಸ್‌. ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಹೆಡಗಿಮದ್ರಾ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ಶಾಲೆಗಳತ್ತ ಸೆಳೆಯುವುದರ ಜೊತೆಗೆ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿವುದು ಮುಖ್ಯವಾಗಿದ್ದು, ಇದರಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಸರ್ಕಾರ ಆಯೋಜನೆ ಮಾಡಿದ್ದು, ಇದರ ಸದ್ಭಳಕೆಯಾಗಿ ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಹೊರ ತರಬೇಕಾಗಿದೆ ಎಂದು ಹೇಳಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿದರು. ಸ್ಥಳೀಯ ಕಸ್ಲರ್‌ ಸಿ.ಆರ್‌.ಪಿ ಸಾಬಯ್ಯ ತಾಂಡೂರಕರ್‌ ಪ್ರಾಸ್ತಾವಿಕ ಮಾತನಾಡಿದರು. ಯರಗೋಳ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾಬಾಯಿ ರಾಠೊಡ ಭಾಗವಹಿಸಿದ್ದರು. ಯರಗೋಳ ವಲಯದ ಶಿಕ್ಷಣ ಸಂಯೋಜಕ ಶ್ರೀನಿವಾಸ ಕರ್ಲಿ, ಕೊಂಕಲ್ ವಲಯದ ಇ.ಸಿ.ಒ. ಮರೆಪ್ಪ ಮ್ಯಾಗೇರಿ, ಶರಣಗೌಡ, ಯರಗೋಳ ವಲಯದ ಬಿ.ಆರ್‌.ಪಿ. ಶ್ರೀಕಾಂತ, ಅಲ್ಲಿಪೂರ ಸಿ.ಆರ್‌.ಪಿ. ಮಲ್ಲಪ್ಪ ಮ್ಯಾಗೇರಿ, ಹನುಮ ನಾಯಕ ಮತ್ತು ಶಿಕ್ಷಕರಾದ ಶರಣಪ್ಪ ಮುಂಬಾ, ಸಿದ್ಲಿಂಗರೆಡ್ಡಿ, ಚಂದ್ರಮಪ್ಪ ಕ್ಯಾತೆ, ಮಲ್ಲಯ್ಯ ಮೊಗ್ಗ, ವಿಶ್ವನಾಥರೆಡ್ಡಿ, ಮಲ್ಲಿಕಾರ್ಜುನ ಕುರಕುಂದಿ, ರವಿ, ರಮೇಶ ಇದ್ದರು. ವಿವಿಧ ಶಾಲೆ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next