Advertisement

ಯಾದಗಿರಿ ವಿಭಾಗ; 150 ಸಿಬ್ಬಂದಿ ಹಾಜರ್‌

06:56 PM Apr 16, 2021 | Team Udayavani |

ಯಾದಗಿರಿ: ವಿವಿಧ ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಗುರುವಾರಕ್ಕೆ 9 ದಿನ ಪೂರೈಸಿದ್ದು, ಈ ಮಧ್ಯೆಯೇ ಯಾದಗಿರಿ ವಿಭಾಗದಿಂದ 150 ಜನ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು ಇಂದು 58 ಸಾರಿಗೆ ವಾಹನಗಳು ಸಂಚಾರ ಆರಂಭಿಸಿವೆ ಎಂದು ಉನ್ನತ ಅ ಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

Advertisement

ನೌಕರರ ಮುಷ್ಕರದ ಲಾಭ ಪಡೆಯುತ್ತಿರುವ ಖಾಸಗಿ ವಾಹನಗಳು ಯಾದಗಿರಿಯಿಂದ ಬೆಂಗಳೂರು ಮಾರ್ಗಕ್ಕೆ ತೆರಳಲು 10ಕ್ಕೂ ಹೆಚ್ಚು ಐಷಾರಾಮಿ ಬಸ್‌ಗಳು ಕೇಂದ್ರ ಬಸ್‌ ನಿಲ್ದಾಣದಲ್ಲಿ ನಿಂತಿದ್ದವು. ಮುಷ್ಕರದಿಂದ ಸಾಕಷ್ಟು ಗ್ರಾಮೀಣ ಭಾಗದ ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದು, ಮುಷ್ಕರ ಇನ್ನೆಷ್ಟು ದಿನ ನಡೆಯುತ್ತದೆಯೋ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ಗುರುವಾರ ಯಾದಗಿರಿ ಘಟಕದ-26, ಗುರುಮಠಕಲ್‌ -5, ಶಹಾಪುರ-21 ಹಾಗೂ ಸುರಪುರ-6 ವಾಹನಗಳು ಸಂಚಾರ ಆರಂಭಿಸಿದ್ದು ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಸಂಚಾರ ನಿಯಂತ್ರಣಾಧಿ ಕಾರಿಗಳು ಸಾರಿಗೆ ಸಿಬ್ಬಂದಿಗಳ ಮನೆಗಳಿಗೆ ಭೇಟಿ ನೀಡಿ ಕರ್ತವ್ಯಕ್ಕೆ ಮರಳುವಂತೆ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದು ಗುರುವಾರ 25 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರುವ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next