Advertisement

ಯಾದಗಿರಿ ಜಿಲ್ಲಾ ವಿಕಲಚೇತನರ ಕುಂದು-ಕೊರತೆ ಸಭೆಗೆ ಒತ್ತಾಯ

04:47 PM Feb 05, 2021 | Team Udayavani |

ಯಾದಗಿರಿ: ವಿಕಲಚೇತನರ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯ ವಿಕಲಚೇತನರ ಹಕ್ಕುಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ
ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಜಿಲ್ಲೆಯ ವಿಕಲಚೇತನರು ಮನವಿ ಸಲ್ಲಿಸಿ ಬೇಡಿಕೆ ತಕ್ಷಣ ಇಡೇರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಸಂಗನಗೌಡ ಧನರಡ್ಡಿ, ವಿಕಲಚೇತನರ ಕುಂದು-ಕೊರತೆಗಳು ಸಭೆ ನಡೆಸದಿರುವುಕ್ಕೆ ಅಸಮಾಧಾನ ವ್ಯಕ್ತಪಡಿಸಿ ತಕ್ಷಣ ಸಭೆ ನಡೆಸುವಂತೆ ಒತ್ತಾಯಿಸಿದರು.

Advertisement

ಜಿಲ್ಲೆಯ ಗ್ರಾಪಂ ಮಟ್ಟದಲ್ಲಿ ಶೇ.5ರಷ್ಟು ಅನುದಾನ ಕಡ್ಡಾಯವಾಗಿ ಬಳಕೆ ಮಾಡಿರುವುದಿಲ್ಲ ಹಾಗೂ ಅರ್ಹ ವಿಕಲಚೇತನರಿಗೆ ಮನೆಗಳು ಸಹ ನೀಡಿರುವುದಿಲ್ಲ. ವಿಕಲಚೇತನರಿಗೆ ಗುರುತಿನ ಚೀಟಿ ನೀಡುವತ್ತ ಪ್ರತಿ ತಾಲೂಕು ಮಟ್ಟದಲ್ಲಿ ತಿಂಗಳಿಗೊಂದು ಸಲವಾದರೂ ಎಲ್ಲ ರೀತಿಯ ವಿಕಲಚೇತನರು ಜಿಲ್ಲಾಮಟ್ಟಕ್ಕೆ
ಬರುವುದಕ್ಕೆ ತುಂಬಾ ಅನಾನುಕೂಲವಾಗುವ ಹಿನ್ನೆಲೆಯಲ್ಲಿ ವಿಕಲಚೇತನರಿಗೆ ಯುಡಿ ಐಡಿ ಕಾರ್ಡ್‌ಗಳನ್ನು ಎಲ್ಲ ತಾಲೂಕು ಮಟ್ಟದಲ್ಲಿ ವೈದ್ಯಾಧಿಕಾರಿಗಳು ಬಂದು ಅಂಗವಿಕಲರ ಮೂಲಕ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆರ್‌. ವಿಶ್ವನಾಥರೆಡ್ಡಿ ಅಬ್ಬೆತುಮಕೂರು, ನಾಗೇಂದ್ರ ದೊರಿ, ಶರಣಯ್ಯ ಸ್ವಾಮಿ ಹಿರೇಮಠ, ದೇವಿಂದ್ರಪ್ಪ ಬಾಚಿಮಟ್ಟಿ, ಸೋಮಣ್ಣ ಆಲ್ದಾಳ, ಸುರೇಶ ಬಡಿಗೇರ, ರಮೇಶ ಕೂಡ್ಲೂರು, ಭಾಗಪ್ಪ ಬೈರಿಮರಡಿ, ಬಸವರಾಜ ರಾಜನಕೊಳ್ಳೂರು, ಹುಸೇನಪ್ಪ ದೇವಾಪುರ, ಕಾಶಪ್ಪ ಕುಂಬಾರ, ದೇವಿಂದ್ರಪ್ಪ ಶೆಟ್ಟಿಗೇರಿ, ಮಾಳಪ್ಪ ಪೂಜಾರಿ, ನಾಗರಾಜ ಶಹಾಪೂರ, ಭೀಮರಾಯ ಯಾದಗಿರಿ, ನಿಂಗಣ್ಣ ತಡಿಬಿಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next