Advertisement
ಉಪ ಚುನಾವಣೆ ಹಿನ್ನೆಲೆ ಮಂಗಳವಾರ ನಂಜನ ಗೂಡು ಕ್ಷೇತ್ರ ವ್ಯಾಪ್ತಿಯ ದೇಬೂರು, ಹೆಗ್ಗಡಹಳ್ಳಿ, ಬೆಳೆಲೆ, ಶಿರಮಳ್ಳಿ, ಕುರಿಹುಂಡಿ, ತರಗನಹಳ್ಳಿ, ಕಪ್ಪಸೋಗೆ, ನೆಲ್ಲಿತಾಳಪುರ, ಬಸಾಪುರ, ಕಾಟೂರು, ಇಟಾjಲಾ, ಹರದನಹಳ್ಳಿ, ಕಣ್ಣೇನೂರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರ ಮತಯಾಚನೆ ಮಾಡಿದರು.
Related Articles
Advertisement
ಈ ಉಪ ಚುನಾವಣೆಯಲ್ಲಿ ನಾವು ಮಾಡಿದ ಕೆಲಸಕ್ಕೆ ಕೂಲಿ ಕೇಳಲು ಬಂದಿದ್ದೇವೆ. ನೀವು ಗೆಯ್ಯೋ ಎತ್ತಿಗೆ ಹುಲ್ಲು ಹಾಕಿ, ಕಳ್ಳ ಎತ್ತಿಗೆ ಹುಲ್ಲು ಹಾಕಬೇಡಿ, ನಂಜನಗೂಡು ತಾಲೂಕಿನ ಅಭಿವೃದ್ಧಿ ಪರ್ವ ಶುರುವಾಗಿದೆ, ಅದನ್ನು ಮುಂದುವರಿಸಲು ಹಸ್ತಕ್ಕೆ ಮತ ನೀಡಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯನ್ನು ಗೆಲ್ಲಿಸಿಕೊಡಿ ಎಂದರು.
ಈ ಗ್ರಾಮದಲ್ಲಿ 3 ಸಾವಿರ ವೋಟ್ ಇದೆ. ಏ.9ನೇ ತಾರೀಖು ಸತ್ತವರು, ಊರಲ್ಲಿ ಇಲ್ಲದವರನ್ನು ಬಿಟ್ಟು ಎಲ್ಲರೂ ಬಂದು ವೋಟು ಹಾಕಿ ಎಂದು ಚಟಾಕಿ ಹಾರಿಸಿದರು. ಅಲ್ಲಿಂದ ಮುಂದೆ ಬಂದ ಮುಖ್ಯಮಂತ್ರಿಗೆ ಗ್ರಾಮದ ಮತ್ತೂಂದು ಗುಂಪು ಮೈಸೂರು ಪೇಟ ತೊಡಸಿ, ಹಾರ ಹಾಕಿ ಸಂಭ್ರಮಿಸಿತು. ವಾದ್ಯವೃಂದದ ಜತೆಗೆ ಇಡೀ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಮುಖ್ಯಮಂತ್ರಿಯನ್ನು ಗ್ರಾಮದ ಕೊನೆಯವರೆಗೆ ಬಂದು ಗ್ರಾಮಸ್ಥರು ಬಿಳ್ಕೊಟ್ಟರು.
ಅಲ್ಲಿಂದ ಮುಂದೆ ಬೆಳಲೆ ಮತ್ತು ಶಿರಮಳ್ಳಿಯ ಗ್ರಾಮಸ್ಥರು ಮುಖ್ಯಮಂತ್ರಿಯ ಆಗಮನಕ್ಕಾಗಿ ಕಾದು ನಿಂತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಬರುತ್ತಿದ್ದಂತೆ ಜೈಕಾರ ಕೂಗಿ, ಪಟಾಕಿ ಸಿಡಿಸಿ ಗ್ರಾಮಕ್ಕೆ ಬರಮಾಡಿಕೊಂಡರು.
* ಗಿರೀಶ್ ಹುಣಸೂರು