Advertisement
ಇನ್ನು, ನಾಳೆ(ಬುಧವಾರ, ಜುಲೈ 28) ಕಾಂಗ್ರಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಹಾಗೂ ಗುರುವಾರ (ಜುಲೈ 29) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡುತ್ತಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
Related Articles
Advertisement
ಮಾಧ‍್ಯಮಗಳೊಂದಿಗೆ ಮಾತನಾಡಿದ ದೀದ ಆಪ್ತ ವಲಯದ ಒಬ್ಬರು, ಪ್ರಧಾನಿಯವರಿಗೆ ಯಾಸ್ ಚಂಡ ಮಾರುತ ದರಾಜ್ಯ ಸರ್ಕಾರದ ವರದಿಯನ್ನು ಹಸ್ತಾಂತರಿಸಿದರು. ಡಿಜಿಪಿ ನೇಮಕಾತಿ ಬಗ್ಗೆ, ಯಾಸ್ ಚಂಡ ಮಾರುತದಿಂದ ಆದ ನಷ್ಟಕ್ಕೆ ಆರ್ಥಿಕ ನೆರವು ಹಾಗೂ ಕೋವಿಡ್ ಲಸಿಕಗಳ ಪೂರೈಕೆಯನ್ನು ಹೆಚ್ಚಿಸುವುದರ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಹೇಳಿದ್ದಾರೆ. ಇನ್ನು, ಇಂಧನ ಬೆಲ ಗಳೇರಿಕೆಯ ಬಗ್ಗೆಯೂ ಕೂಡ ಚರ್ಚೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿದವೆ.
ಈ ಸಭೆಯ ಮೊದಲು ಬಂಗಾಳ ಸಿಎಂ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಮತ್ತು ಆನಂದ್ ಶರ್ಮಾ ಅವರನ್ನು ಇಂದು ಭೇಟಿಯಾದರು. ಸಂಜೆ 6.30 ಕ್ಕೆ ಮುಖ್ಯಮಂತ್ರಿ ಹಿರಿಯ ವಕೀಲ ಮತ್ತು ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಅಭಿಷೇಕ್ ಮನು ಸಿಂಗ್ವಿ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇನ್ನು, ನಾಳೆ (ಬುಧವಾರ, ಜುಲೈ 28) ಮಧ್ಯಾಹ್ನ 3 ಗಂಟೆಗೆ ಮಮತಾ ಎನ್ನಲಾಗಿದ್ದುಬಹುಶಃ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ಮನೆಯಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಟೀ ಪಾರ್ಟಿ ಮಾಡುವ ಸಾದ್ಯತೆ ಇದೆ ಎನ್ನಲಾಗಗಿದೆ.
ಟೀ ಪಾರ್ಟಿಗಯಲ್ಲಿ ಇದು ಕಾಂಗ್ರೆಸ್, ಡಿಎಂಕೆ, ಟಿಆರ್ ಎಸ್ ನಿಂದ ಆರ್ ಜೆ ಡಿ ಮತ್ತು ಅಕಾಲಿ ದಳ, ಎಎಪಿ ಪಕ್ಷಗಳ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನು, ಜುಲೈ 21 ರಂದು ದೆಹಲಿಯಲ್ಲಿ ಮಾಡಿದ ಭಾಷಣದಲ್ಲಿ ಮಮತಾ, ಎಲ್ಲಾ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಬೇಕು ಎಂದು ಕರೆ ನೀಡಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ ನ ಪಿ.ಚಿದಂಬರಂ ಮತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಉನ್ನತ ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ : ಒಂದು ಸಮಾಜವನ್ನು ಓಲೈಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ: ಕುಮಾರಸ್ವಾಮಿ