Advertisement

ದಾಳಿ ಸಾಧ್ಯತೆ; ಕೇರಳದ ಐವರು ಆರ್ ಎಸ್ಎಸ್ ನಾಯಕರಿಗೆ ‘ವೈ’ ಕೆಟಗರಿ ಭದ್ರತೆ

10:33 AM Oct 01, 2022 | Team Udayavani |

ಮುಂಬೈ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ (ಪಿಎಫ್‌ಐ) ಸಂಭವನೀಯ ಬೆದರಿಕೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ ನಂತರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಶನಿವಾರ ಕೇರಳದ ಐವರು ಆರ್‌ಎಸ್‌ಎಸ್ ನಾಯಕರಿಗೆ “ವೈ” ವರ್ಗದ ಭದ್ರತೆಯನ್ನು ನೀಡಿದೆ.

Advertisement

ಕೇಂದ್ರ ಸರ್ಕಾರವು ಪಿಎಫ್ಐ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿದ ಬಳಿಕ ಕೇರಳದ ಆರ್ ಎಸ್ಎಸ್ ನಾಯಕರ ಮೇಲೆ ಸಂಭವನೀಯ ದಾಳಿಯ ಕುರಿತು ಗೃಹ ಸಚಿವಾಲಯಕ್ಕೆ ಎನ್ಐಎ ಮಾಹಿತಿ ನೀಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಎನ್ಐಎ ಮತ್ತು ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಆಧರಿಸಿ ಗೃಹ ಸಚಿವಾಲಯವು ಕೇರಳದ ಐದು ಆರ್ ಎಸ್ಎಸ್ ನಾಯಕರಿಗೆ ವೈ ಕೆಟಗರಿ ಭದ್ರತೆ ನೀಡಲು ನಿರ್ಧರಿಸಿದೆ. ಆರ್‌ಎಸ್‌ಎಸ್ ನಾಯಕರ ಭದ್ರತೆಗೆ ಅರೆಸೇನಾ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗುವುದು. ಭದ್ರತೆಯನ್ನು ಒದಗಿಸಲು ಒಟ್ಟು 11 ಸಿಬ್ಬಂದಿಗಳು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ:ರ‍್ಯಾಲಿಗೆ ತೆರಳಿಯೂ ಭಾಷಣ ಮಾಡದ ಪ್ರಧಾನಿ ಮೋದಿ; ಜನರ ಬಳಿ ಕ್ಷಮೆ ಕೇಳಿದ್ದೇಕೆ?

ಎನ್‌ ಐಎ ತನ್ನ ದಾಳಿಯ ಸಮಯದಲ್ಲಿ ಕೇರಳದ ಪಿಎಫ್‌ ಐ ಸದಸ್ಯ ಮೊಹಮ್ಮದ್ ಬಶೀರ್ ಅವರ ಮನೆಯಿಂದ ಪಿಎಫ್‌ ಐ ರಾಡಾರ್‌ ನಲ್ಲಿ ಐವರು ಆರ್‌ ಎಸ್‌ಎಸ್ ಮುಖಂಡರ ಹೆಸರನ್ನು ಹೊಂದಿರುವ ಪಟ್ಟಿಯನ್ನು ಪತ್ತೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next