ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್ ಜೀವನದ ಜತೆಗೆ ಸ್ಮಾರ್ಟ್ ಆದ ತಂತ್ರಜ್ಞಾನಗಳ ಸಾಲು ಸಾಲು ರಾಶಿಗಳು ನಮ್ಮ ಕಣ್ಣಮುಂದೆ ಬರುತ್ತಿವೆ. ಇವುಗಳು ಹೊಸ ಹೊಸ ಪ್ರಪಂಚವನ್ನು ಪರಿಚಯಿಸುತ್ತವೆ. ಜ್ಞಾನದ ಪರಿಧಿಯನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿಯೂ ಸ್ಮಾರ್ಟ್ ಫೋನ್‌ಗಳು ಕಾರ್ಯ ನಿರ್ವಹಿಸುತ್ತಿವೆ.
ವಿವಿಧ ಕಂಪೆನಿಗಳು ಸೃಷ್ಟಿಯಾಗಿ, ಮಾರುಕಟ್ಟೆಯಲ್ಲಿ ಹೊಸದಾದ ಅಲೆಗಳನ್ನು ಮೂಡಿಸುತ್ತಿವೆ. ಇವುಗಳಲ್ಲಿ ಮೈಕ್ರೋ ಮೇಕ್ಸ್, ವೀವೋ, ಸ್ಯಾಮ್‌ಸಾಂಗ್ ಹೀಗೆ ಇನ್ನಿತರ ಕಂಪೆನಿಗಳು ಹೊಸ ಹೊಸ ಫೀಚರ್ಸ್ ಗಳಿಂದ ಕಣ್ಣ ಮುಂದೆ ಬರುತ್ತಿವೆ. ಸೂಕ್ತ ಬೆಲೆಗಳಲ್ಲಿ ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಗಳಲ್ಲಿ ಲಭ್ಯವಾಗುತ್ತಿವೆ.
ಇಂಡಿಯಾದಲ್ಲಿ ಕ್ಸಿಯೋಮೀ ಮಿ ಪ್ಯಾಡ್ 4 ಪ್ಲಸ್ 11,490 ರೂ. ಬೆಲೆ ಬಾಳುವ ಟ್ಯಾಬ್ಲೆಟ್ ಅನ್ನು ಸೆಪ್ಟಂಬರ್ 26 ರಂದು ಬಿಡುಗಡೆಗೊಳಿಸಲು ಕ್ಸಿಯೋಮೀ ಕಂಪನಿಯು ಸಿದ್ಧವಾಗಿದೆ ಎಂದು ಇತ್ತೀಚೆಗೆ ಅಫೀಶಿಯಲ್ ವೆಬ್‌ಸೈಟ್ ನಲ್ಲಿ ತಿಳಿಸಲಾಗಿದೆ. ಇದರಲ್ಲಿ ಯಾವುದೇ ವಾಯ್ಸ ಕಾಲಿಂಗ್ ಆಗುವುದಿಲ್ಲ. ಆದರೆ ಗ್ರಾಹಕರಿಗೆ ಉತ್ತಮವಾದ ಫೀಚರ್ಸ್ ಗಳನ್ನು ನೀಡುವುದರಲ್ಲಿ ಯಶಸ್ವಿಯಾಗುವ ನಿರೀಕ್ಷೆಯಿದೆ. ಹೆಚ್ಚಿನ ಹಾಡು, ವೀಡಿಯೋಗಳನ್ನು ಸೇವ್ ಮಾಡಿಕೊಳ್ಳಲು ಈ ಟ್ಯಾಬ್ಲೆಟ್ ಉತ್ತಮವಾಗಿದೆ. ಅನ್ ಲಾಕ್ ಕೆಪಾಸಿಟಿಯಿಂದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದರ ಎತ್ತರವು 200.2 ಎಂಎಂ, ಬಾರವು 342. 5 ಗ್ರಾಂ, ಅಗಲವು 120.3 ಎಂಎಂ, ಥಿಕ್‌ನೆಸ್ 7.3 ಎಂಎಂ ಆಗಿದೆ.
ಇದೇ ಆಗಸ್ಟ್ ತಿಂಗಳಲ್ಲಿ ಕ್ಸಿಯೋಮೀ ಮಿ ಪ್ಯಾಡ್ 4 ಪ್ಲಸ್ ಎಂಬ ಫೋನ್ ಬಿಡುಗಡೆಯಾಗಲಿದೆ. ಕ್ಸಿಯೋಮೀ ಎಂಬ ಕಂಪೆನಿಯು ಹಲವಾರು ವಿನ್ಯಾಸಗಳಲ್ಲಿ ಟ್ಯಾಬ್ಲೆಟ್‌ಗಳನ್ನು ತಯಾರಿಸಿದೆ. ಇದೊಂದು ಅತ್ಯುತ್ತಮವಾದ ಆ್ಯಂಡ್ರಾಯ್ಡ ವರ್ಷನ್ ಆಗಿ ಗ್ರಾಹಕರ ಮನ ಗೆಲ್ಲಲು ತಯಾರಾಗಿದೆ.
ಇದರ ಡಿಸ್ಪ್ಲೇಯು 10.10 ಇಂಚುವಿದ್ದು, ಕೆಮರಾವು 5 ಮೆಗಾಫಿಕ್ಸಲ್ ಹೊಂದಿದೆ. 1200×1920 ಫಿಕ್ಸಲ್ ರೆಸೊಲ್ಯೂಷನ್ ಅನ್ನು ಹೊಂದಿದೆ. 4 ಜಿಬಿ ರ್ಯಾಮ್ ಇದೆ. ಇದು ಒಎಸ್ ಆ್ಯಂಡ್ರಾಯ್ಡ 8.1 ಓರಿಯೋ ಆಗಿದೆ. 64 ಜಿಬಿ ಸ್ಟೋರೇಜ್ ಸೌಲಭ್ಯವಿದೆ. ಫ್ರಂಟ್ ಕೆಮರಾವು 13 ಮೆಗಾಫಿಕ್ಸಲ್ ಆಗಿದೆ. 8620 ಎಂಎಚ್ ಬ್ಯಾಟರಿ ಕೆಪಾಸಿಟಿಯಿಂದ ಕಪ್ಪು, ಗೋಲ್ಡ್ ಬಣ್ಣಗಳಿಂದ ಗ್ರಾಹಕರಿಗೆ ಲಭ್ಯವಾಗುತ್ತದೆ. ಇದರಲ್ಲಿ ವೈಫೈ, ಜಿಪಿಎಸ್, ಬ್ಲೂಟೂತ್ ವರ್ಷನ್‌ಗಳನ್ನೂ ಕನೆಕ್ಟ್ ಮಾಡಿಕೊಳ್ಳಬಹುದು.