Advertisement

ಲ್ಯಾಪ್‌ಟಾಪ್ ಕ್ಷೇತ್ರಕ್ಕೂ ಲಗ್ಗೆಯಿಟ್ಟ ಶಿಯೋಮಿ: ಎರಡು ಹೊಸ ಲ್ಯಾಪ್‌ಟಾಪ್ ಬಿಡುಗಡೆ

06:56 PM Jun 13, 2020 | keerthan |

ಭಾರತದ ಸ್ಮಾರ್ಟ್ ಫೋನ್ ಮತ್ತು ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ನಂ. 1 ಸ್ಥಾನದಲ್ಲಿರುವ ಶಿಯೋಮಿ ಕಂಪೆನಿ ಈಗ ಲ್ಯಾಪ್‌ಟಾಪ್ ಕ್ಷೇತ್ರಕ್ಕೂ ಲಗ್ಗೆಯಿಟ್ಟಿದೆ.

Advertisement

ಮಿ ನೋಟ್ ಬುಕ್ 14 ಮತ್ತು ಮಿ ನೋಟ್ ಬುಕ್ 14 ಹಾರಿಝೋನ್ ಎಡಿಷನ್ ಎಂಬ ಎರಡು ನೋಟ್ ಬುಕ್‌ಗಳನ್ನು ಇದೀಗ ಭಾರತದಲ್ಲಿ ಬಿಡುಗಡೆ ಮಾಡಿದೆ. ಎರಡೂ ಲ್ಯಾಪ್‌ಟಾಪ್‌ಗಳು ಮ್ಯಾಗ್ನಿಷಿಯಂ ಅಲ್ಯೂಮಿನಿಯಂ ದೇಹ ಹೊಂದಿವೆ. ಕೇವಲ 1.5 ಕೆಜಿ ಮಾತ್ರ ತೂಕವಿದ್ದು, 14 ಇಂಚಿನ ಪರದೆ ಹೊಂದಿವೆ. ಲ್ಯಾಪ್‌ಟಾಪ್‌ ನ ಗಾತ್ರ ಎ4 ಅಳತೆಯ ಕಾಗದದಷ್ಟಿದೆ.

10ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ 8 ಜಿಬಿ ರ್ಯಾಮ್ ಹಾಗೂ 10 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿವೆ. ಲ್ಯಾಪ್‌ ಟ್ಯಾಪ್‌ ನೊಂದಿಗೇ ವಿಂಡೋಸ್ 10 ಹೋಮ್ ಎಡಿಷನ್ ಇದ್ದು, ಡಿಟಿಎಸ್ ಆಡಿಯೋ ಸೌಲಭ್ಯ ಹೊಂದಿವೆ.  ಮಿ ಕ್ವಿಕ್ ಶೇರ್ ಮೂಲಕ ಅಂಡ್ರಾಯ್‌ಡ್ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ನಡುವೆ ಫೈಲ್‌ಗಳನ್ನು ಹಂಚಿಕೊಳ್ಳಬಹುದಾಗಿದೆ. ಈ ಎರಡೂ ಲ್ಯಾಪ್‌ಟಾಪ್‌ಗಳ ವಿಶೇಷತೆಗಳು ಹೀಗಿದೆ.

ಮಿ ನೋಟ್ ಬುಕ್ 14 ಹಾರಿಝೋನ್

10ನೇ ತಲೆಮಾರಿನ ಇಂಟೆಲ್ ಕೋರ್ ಐ7 ಪ್ರೊಸೆಸರ್. ಎನ್‌ವಿಡಿಯಾ ಎಂಎಕ್‌ಸ್ 350 ಗ್ರಾಫಿಕ್ಸ್ ಚಿಪ್ ಹೊಂದಿದೆ. 8 ಜಿಬಿ ರ್ಯಾಮ್, 14 ಇಂಚಿನ ಪರದೆ. ಶೇ.91ರಷ್ಟು ಪರದೆ ಮತ್ತು ದೇಹದ ಅನುಪಾತ ಹೊಂದಿದೆ. ಆಂಟಿಗ್ಲೇರ್ ಎಫ್‌ಎಚ್‌ಡಿ ಡಿಸ್‌ಪ್ಲೇ. 512 ಜಿಬಿ ಎಸ್‌ಎಸ್‌ಡಿ. ಕೇವಲ 15 ಸೆಕೆಂಡಿನಲ್ಲಿ ಲ್ಯಾಪ್‌ಟಾಪ್ ಆನ್ ಆಗಲಿದೆ. ಬ್ಯಾಟರಿ 10 ಗಂಟೆ ಬರಲಿದ್ದು, 65 ವ್ಯಾಟ್ ವೇಗದ ಚಾರ್ಜರ್ ಮೂಲಕ 30 ನಿಮಿಷಗಳಲ್ಲಿ ಶೇ. 50ರಷ್ಟು ಚಾರ್ಜ್ ಆಗಲಿದೆ ಎಂದು ಕಂಪೆನಿ ತಿಳಿಸಿದೆ.

Advertisement

ಇದರ ದರ 55 ಸಾವಿರ ರೂ. ಆಗಿದ್ದು,  ಮಿ.ಕಾಮ್, ಮಿ ಹೋಮ್‌ಸ್, ಅಮೆಜಾನ್.ಕಾಮ್ ಮತ್ತು ರೀಟೇಲ್ ಅಂಗಡಿಗಳಲ್ಲಿ ದೊರಕುತ್ತದೆ.

ಮಿ ನೋಟ್ ಬುಕ್ 14

ಇದರಲ್ಲಿ 10ನೇ ತಲೆಮಾರಿನ ಇಂಟೆಲ್ ಐ5 ಪ್ರೊಸೆಸರ್ ಇದೆ. 8 ಜಿಬಿ ರ್ಯಾಮ್ ಮತ್ತು512 ಜಿಬಿ ಎಸ್‌ಎಸ್‌ಡಿ ಸಂಗ್ರಹ ಇದೆ. ಎನ್‌ವಿಡಿಯಾ ಎಂಎಕ್‌ಸ್ 250 ಗ್ರಾಫಿಕ್ ಕಾರ್ಡ್ ಇದೆ. 14 ಇಂಚಿನ ಪರದೆ, ಫುಲ್‌ಎಚ್‌ಡಿ ಆಂಟಿ ಗ್ಲೇರ್ ಡಿಸ್‌ಪ್ಲೆ ಹೊಂದಿದೆ. ಇದರ ಪರದೆ ಮತ್ತು ದೇಹದ ಅನುಪಾತ ಶೇ. 81.2ರಷ್ಟಿದೆ. ಇದು ಸಹ 65 ವ್ಯಾಟ್ ವೇಗದ ಚಾರ್ಜರ್ ಹೊಂದಿದೆ. ಇದರ ದರ 42 ಸಾವಿರ ರೂ. ಇದು ಸಹ ಮಿ.ಕಾಮ್, ಅಮೆಜಾನ್ ಮತ್ತು ರೀಟೇಲ್ ಅಂಗಡಿಗಳಲ್ಲಿ ಲಭ್ಯ.

ಜೂನ್ 17 ರಿಂದ ಈ ಎರಡೂ ಲ್ಯಾಪ್‌ಟಾಪ್‌ಗಳು ಲಭ್ಯವಾಗಲಿದ್ದು, ಜುಲೈ 16 ರವರೆಗೂ ಎಚ್‌ಡಿಎಫ್‌ಸಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2000 ರೂ.ವರೆಗೂ ರಿಯಾಯಿತಿ ದೊರಕಲಿದೆ. ಅಲ್ಲದೇ ಬಡ್ಡಿ ರಹಿತ 9 ಕಂತುಗಳ ಇಎಂಐ ಕೂಡ ದೊರಕುತ್ತದೆ ಎಂದು ಕಂಪೆನಿ ತಿಳಿಸಿದೆ.

-ಕೆ.ಎಸ್‍. ಬನಶಂಕರ  ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next