Advertisement
ಗ್ರಾಹಕ ಸ್ನೇಹಿ ಸ್ಮಾರ್ಟ್ ಪೋನ್ ಎಂಬ ಪ್ರಖ್ಯಾತಿಗೆ ಪಾತ್ರವಾಗಿರುವ Mi ಸ್ಮಾರ್ಟ್ ಪೋನ್ ಕಳೆದ ವರ್ಷದ ಕೊನೆಯಲ್ಲಿ ಈ ಹೊಸ ಆವೃತ್ತಿಯ Mi 11 ಮೊಬೈಲ್ ಪೋನ್ ಅನ್ನು ಚೀನಾ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇದು ಸ್ನ್ಯಾಪ್ ಗ್ರ್ಯಾಗನ್ 888 SoC ಪ್ರೊಸೆಸರ್ ಅನ್ನು ಒಳಗೊಗೊಂಡಿದೆ.
Related Articles
Advertisement
Mi 11 ಮೊಬೈಲ್ ಪೋನಿನ ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮರಾಗಳಿರಲಿದ್ದು, 108 MP ಪ್ರಾಥಮಿಕ ಕ್ಯಾಮರಾ ಮತ್ತು 20MP ಸೆಲ್ಫೀ ಕ್ಯಾಮರಾವನ್ನು ಒಳಗೊಂಡಿರಲಿದೆ.
ಡಿಸ್ ಪ್ಲೇ
ಇದು ಆ್ಯಂಡ್ರಾಯಿಡ್ 10 ಜೊತೆಗೆ MIUI 12 ಅನ್ನು ಒಳಗೊಂಡಿರುವ ಈ ಮೊಬೈಲ್ ನಲ್ಲಿ 6.8 ಇಂಚಿನ ಅಮೋಲ್ಡ್ ಡಿಸ್ ಪ್ಲೇ ಇರಲಿದೆ. ಇದರ ಜೊತೆಗೆ ಇದರ ಡಿಸ್ ಪ್ಲೇ 2 k ವೀಡಿಯೊ ಪ್ಲೇ ಆಗುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ:“ಹೂ ಈಸ್ ಈಶ್ವರಪ್ಪ, ಐ ಡೋಂಟ್ ಕೇರ್ ಈಶ್ವರಪ್ಪ”: ತಿರುಗೇಟು ನೀಡಿದ ಸಿದ್ದರಾಮಯ್ಯ
ಸ್ಟೋರೇಜ್ ಮತ್ತು ಬೆಲೆ
Mi 11 ಒಟ್ಟು 2 ರೀತಿಯ ಸ್ಟೋರೇಜ್ ಮಾದರಿಯಲ್ಲಿ ಲಾಂಚ್ ಆಗಿದ್ದು, 8 GB RAM ಮತ್ತು 128 GB ಸ್ಟೋರೇಜ್ ಅನ್ನು ಒಳಗೊಂಡಿರುವ ಮೊಬೈಲ್ ಅಂದಾಜು 65,800 ರೂ.ಗಳಲ್ಲಿ ಲಭ್ಯವಿದೆ. ಇನ್ನು 8 GB RAM ಮತ್ತು 256 GB ಸ್ಟೋರೇಜ್ ಅನ್ನು ಒಳಗೊಂಡಿರುವ ಮೊಬೈಲ್ ಅಂದಾಜು 70,100 ರೂ. ಗಳಲ್ಲಿ ಬಳಕೆದಾರರಿಗೆ ಲಭ್ಯಗೊಳ್ಳಲಿದೆ.