Advertisement
ಚೀನಾ ಮೂಲದ ಶಿಯೋಮಿ ಈಗಾಗಲೇ ಹಲವು ಬಗೆಯ ಕಡಿಮೆ ದರದ ಮೊಬೈಲ್‍ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಮೊಬೈಲ್ ಉತ್ಪಾದನೆಯೆಲ್ಲಿ ಮೆಲುಗೈ ಸಾಧಿಸಿರುವ ಶಿಯೋಮಿ ಇದೀಗ ಎಲೆಕ್ಟ್ರಿಕಲ್ ವಾಹನಗಳ ಮಾರುಕಟ್ಟೆಗೂ ದಾಂಗುಡಿ ಇಡಲು ಹೊರಟಿದೆ.
Related Articles
Advertisement
ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆಯಾದ ಶಿಯೋಮಿ, ಗ್ರೇಟ್ ವಾಲ್ ಜತೆಗೆ ಮಾತುಕತೆ ನಡೆಸುತ್ತಿದೆ. ಗ್ರೇಟ್ ವಾಲ್ ಫ್ಯಾಕ್ಟರಿ ಸಹಾಯದಿಂದ, ಅದರ ಮೂಲಕ ತನ್ನದೇ ಸ್ವಂತ ಬ್ರ್ಯಾಂಡ್ ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಶಿಯೋಮಿ ಹೊಂದಿದೆ. ಈ ಯೋಜನೆಗೆ ಗ್ರೇಟ್ ವಾಲ್ ಎಂಜಿನಿಯರ್, ತಾಂತ್ರಿಕ ಸಹಕಾರ ನೀಡಲಿದೆ. ಆದರೆ ಈ ಬಗ್ಗೆ ಉಭಯ ಕಂಪನಿಗಳಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಶಿಯೋಮಿಯ ವಿದ್ಯುತ್ ಚಾಲಿತ ವಾಹನಗಳು 2023ರ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿವೆ.