Advertisement

ಇತಿಹಾಸ ಸೃಷ್ಟಿ: ಕಾನೂನನ್ನೇ ಬದಲಿಸಿ ಸತತ 3ನೇ ಬಾರಿ ಚೀನಾ ಅಧ್ಯಕ್ಷರಾದ ಜಿನ್‌ಪಿಂಗ್‌

11:11 PM Mar 10, 2023 | Team Udayavani |

ಬೀಜಿಂಗ್‌: ಚೀನಾದ ಅತ್ಯಂತ ಪ್ರಭಾವಿ ರಾಜಕಾರಣಿ ಕ್ಷಿ ಜಿನ್‌ಪಿಂಗ್‌, ದೇಶದ ಇತಿಹಾಸದಲ್ಲೇ ಮೊದಲಬಾರಿಗೆ ಸತತ 3ನೇ ಬಾರಿ ಅಧ್ಯಕ್ಷ ಗಾದಿಗೆಯನ್ನೇರಿದ್ದಾರೆ. ರಬ್ಬರ್‌ ಸ್ಟಾಂಪ್‌ ಸಂಸತ್ತಾಗಿರುವ ನ್ಯಾಷನಲ್‌ ಪೀಪಲ್‌ ಕಾಂಗ್ರೆಸ್‌ನ 3 ಸಾವಿರ ಸದಸ್ಯರು ಮತ ಚಲಾಯಿಸುವ ಮೂಲಕ ಅವಿರೋಧವಾಗಿ ಕ್ಷಿ ಮತ್ತೆ ಅಧಿಕಾರ ಹಿಡಿದಿದ್ದಾರೆ.

Advertisement

ಮಾವೋ ಜೆಡಾಂಗ್‌ ಬಳಿಕ ದೇಶದ ಅತ್ಯಂತ ಪ್ರಭಾವಿ ರಾಜಕಾರಣಿ ಎನಿಸಿಕೊಂಡಿರುವ ಕ್ಷಿ, ಚೀನಾದಲ್ಲಿ ಅಧ್ಯಕ್ಷರಾಗಲು ಕೇವಲ 2 ಬಾರಿ ಅವಕಾಶವಿದ್ದ ಕಾನೂನನ್ನೇ ತಮ್ಮ ಅಧಿಕಾರ ಬಳಸಿಕೊಂಡು ಬದಲಿಸಿದ್ದ ವ್ಯಕ್ತಿ. ಈಗ ಮತ್ತೆ ಚೀನಾದ ಪಾರುಪತ್ಯ ಕ್ಸಿ ಕೈ ಸೇರುವ ಮೂಲಕ ಮತ್ತೆ ತಾನೊಬ್ಬ ಪ್ರಭಾವಿ ನಾಯಕ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ..

ಪ್ರತಿಭಟನೆಗಳಿಗೂ ಕುಗ್ಗಲಿಲ್ಲ: ಚೀನಾದಲ್ಲಿ ಸರ್ವಾಧಿಕಾರಿಯಂತೆಯೇ ವರ್ತಿಸುವ ಕ್ಷಿ, ಲಾಕ್‌ಡೌನ್‌ನಿಂದಾಗಿ ಆದ ಸಾವುನೋವುಗಳು, ಜೀರೋ ಕೋವಿಡ್‌ ನಿಯಮಗಳಂತ ವಿಚಾರದಿಂದ ಜನರ ಪ್ರತಿರೋಧ ಎದುರಿಸಬೇಕಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧ ಪ್ರತಿಧ್ವನಿಸಿದರೂ ಮತ್ತೆ 3ನೇ ಬಾರಿಗೆ ಅಧಿಕಾರಕ್ಕೇರಿದ್ದಾರೆ!

ಸೇನಾಬಲ ಹೆಚ್ಚಳ: ಭಾರತದೊಂದಿಗೆ ಗಡಿ ಬಿಕ್ಕಟ್ಟು ಎದುರಿಸುತ್ತಿರುವ ಚೀನಾ ಈಗಾಗಲೇ ತನ್ನ ಸೇನೆಯನ್ನು ಪ್ರಬಲಗೊಳಿಸುವ ಹಾಗೂ ಮೂಲಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಭಾರೀ ಕುತಂತ್ರಕ್ಕೆ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಕ್ಷಿ ಆಯ್ಕೆಯು ಚೀನಾ ಸೇನೆಯನ್ನು ಮತ್ತಷ್ಟು ಪ್ರಬಲಗೊಳಿಸಲಿದೆ. ತೈವಾನ್‌ ಮೇಲಿನ ಚೀನಾ ಆಕ್ರಮಣ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ ಎನ್ನುವುದು ಹಲವರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next