Advertisement

ತಹಬದಿಗೆ ಮರಳಿದ ಕೋವಿಡ್ -19 ವೈರಸ್ ಕೇಂದ್ರಬಿಂದು ಚೀನಾದ ವುಹಾನ್ ಪ್ರಾಂತ್ಯ

01:24 AM Mar 21, 2020 | Mithun PG |

ಚೀನಾ: ಕೋವಿಡ್ -19ವೈರಸ್ ನ ಕೇಂದ್ರ ಬಿಂದುವಾದ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಸೋಂಕು ತಹಬದಿಗೆ ಬಂದಿದ್ದು ಬುಧವಾರ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆ ಮೂಲಕ 2019 ರ ಡಿಸೆಂಬರ್  ನಿಂದ ಹಲವಾರು ವ್ಯಕ್ತಿಗಳ ಸಾವಿಗೆ ಕಾರಣವಾಗಿದ್ದ ಮಹಾಮಾರಿ ಕೋವಿಡ್ 19 ನ ವಿರುದ್ಧ ಜನರು ನಿಟ್ಟುಸಿರು ಬಿಡುವಂತಾಗಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

Advertisement

ಆದರೇ ಚೀನಾದ ಬೀಜಿಂಗ್ ನಲ್ಲಿ ಸೋಂಕು ಹಬ್ಬುವ ಸಾಧ್ಯತೆ ದಟ್ಟವಾಗಿದ್ದು ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿದೆ. ಮಾತ್ರವಲ್ಲದೆ ಪ್ರತಿಯೊಬ್ಬರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬುಧವಾರ ಒಂದೇ ದಿನ 34 ಹೊಸ ಪ್ರಕರಣಗಳು ಇಲ್ಲಿ ದಾಖಲಾಗಿವೆ. ಆ ಮೂಲಕ ಸೋಂಕು ಪೀಡಿತರ ಪ್ರಮಾಣ 80,928ಕ್ಕೆ ಏರಿಕೆಯಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ

ಒಟ್ಟಾರೆಯಾಗಿ ಚೀನಾದಲ್ಲಿ ಈ ಮಹಾಮಾರಿ ಸೋಂಕಿಗೆ ಬಲಿಯಾದ ಸಂಖ್ಯೆ 3,245ಕ್ಕೆ ತಲುಪಿದೆ. ಹುಬೈ ಪ್ರಾಂತ್ಯದಲ್ಲಿ ಬುಧವಾರ 8 ಜನರು, ಮತ್ತು ವುಹಾನ್ ನಲ್ಲಿ ಸೋಂಕು ಪೀಡಿತರಾಗಿದ್ದ 6 ಜನರು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next