Advertisement

ಕೋವಿಡ್ ಜನ್ಮ ಭೂಮಿಯಲ್ಲಿ ಇದೀಗ ‘ಮದುವೆ ಟ್ರಾಫಿಕ್‌’

03:45 AM Apr 11, 2020 | Hari Prasad |

ಕೋವಿಡ್ 19 ವೈರಸ್ ಜನ್ಮತಾಳಿದ ವುಹಾನ್‌ನಲ್ಲಿ ಕೊನೆಗೂ ಸಂತಸ ಕ್ಷಣಗಳು ಮರಳುತ್ತಿವೆ. ಸಾವಿನ ಸದ್ದು ಕ್ಷೀಣವಾಗಿ, ಲಾಕ್‌ ಡೌನ್‌ ತೆರವುಗೊಂಡ ಬೆನ್ನಲ್ಲೇ, ಅಲ್ಲಿ ‘ಮದುವೆ ಟ್ರಾಫಿಕ್‌’ ಏರ್ಪಟ್ಟಿದೆ. ಹೊಸ ಬಾಳಿಗೆ ಕಾಲಿಡಲು ಇಷ್ಟು ದಿನ ಕಾತರಿಸುತ್ತಿದ್ದ ಜೋಡಿಗಳು ಈಗ ಒಂದೇಸಮನೆ, ಮ್ಯಾರೇಜ್‌ ಆ್ಯಪ್‌ ಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುತಿದ್ದಾರೆ!

Advertisement

ಅಲಿಪೇ ಎನ್ನುವ ವಿವಾಹ ಸೇತುವಾಗಿ ಕೆಲಸ ಮಾಡುವ ಆ್ಯಪ್‌ನಲ್ಲಿ ಶೇ.300ರಷ್ಟು ನೋಂದಣಿ ಹೆಚ್ಚಾಗಿದೆ. ಈ ವರ್ಷದ ಆರಂಭದಲ್ಲೇ (ಜ.23) ಲಾಕ್‌ಡೌ ನ್‌ಗೆ ಗುರಿಯಾಗಿದ್ದ ವುಹಾನ್‌ನಲ್ಲಿ ಸತತ 76 ದಿನಗಳ ಕಾಲ ಕರ್ಫ್ಯೂ ವಾತಾವರಣವಿತ್ತು. ಕಳೆದ ಮಂಗಳವಾರ (ಏ.7) ಚೀನ, ‘ಕೋವಿಡ್ ಸಾವುಗಳಲ್ಲಿದ ದಿನ’ ಅಂತಲೇ ಆಚರಿಸಿದೆ.

ಇನ್ನೊಂದೆಡೆ ಆರೋಗ್ಯ ಅಧಿಕಾರಿಗಳು, ಜನರು ಮನೆಯಿಂದ ಹೊರಗೆ ಬರವುದು, ಸುತ್ತಾಡುವುದನ್ನು ಕಡಿಮೆ ಮಾಡುವಂತೆ ಆದೇಶಿಸುತ್ತಿದ್ದಾರೆ. ಕೋವಿಡ್ ಮರು ಅಪ್ಪಳಿಸುವಿಕೆಯ ಭೀತಿಯ ನಡುವೆಯೂ ವುಹಾನ್‌, ಹೊಸ ಬದುಕು ಕಟ್ಟಿಕೊಳ್ಳಲು ಮುಂದಡಿಯಿಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next