Advertisement
ಗುರುವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಶ್ರೀಕಾಂತ್ ಅವರು ತನ್ನ ದೇಶದವರೇ ಆದ ಆಯುಷ್ ಶೆಟ್ಟಿ ಅವರನ್ನು 21-13, 21-18 ಗೇಮ್‌ಗಳಿಂದ ಸೋಲಿಸಿದರು. ಮೇ ತಿಂಗಳಲ್ಲಿ ಗಾಯಗೊಂಡ ಬಳಿಕ ಇದೇ ಮೊದಲ ಕೂಟದಲ್ಲಿ ಆಡಿದ ಶ್ರೀಕಾಂತ್ ಇದೀಗ ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿ ಉಳಿದ ಏಕೈಕ ಸ್ಪರ್ಧಿಯಾಗಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಹಾಂಕಾಂಗ್‌ನ ದ್ವಿತೀಯ ಶ್ರೇಯಾಂಕದ ಎನ್‌ಜಿ ಕಾ ಲಾಂಗ್ ಆ್ಯಂಗಸ್ ಅವರನ್ನು ಎದುರಿಸಲಿದ್ದಾರೆ.
Advertisement
Macau Badminton: ಶ್ರೀಕಾಂತ್ ಕ್ವಾರ್ಟರ್ ಫೈನಲಿಗೆ
11:08 PM Sep 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.