ಲಂಡನ್: ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾವನ್ನು ಭಾರತ ತಂಡ 469 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಎರಡನೇ ದಿನದಾಟದಲ್ಲಿ ಭಾರತ ಬೌಲಿಂಗ್ ಸಾಮರ್ಥ್ಯ ತೋರಿ ಭಾರಿ ಮೊತ್ತ ದಾಖಲಿಸದಂತೆ ತಡೆಯಿತು. ಮೊದಲ ದಿನದ ಆಟದ ಅಂತ್ಯಕ್ಕೆ 3 ವಿಕೆಟಿಗೆ 327 ರನ್ ಗಳಿಸಿದ್ದ ಆಸೀಸ್ ಆಟ ಮುಂದುವರಿಸಿತು. 95 ರನ್ ಗಳಿಸಿದ್ದ ಸ್ಮಿತ್ ಅಮೋಘ ಶತಕ ದಾಖಲಿಸಿದರು. 121 ರನ್ ಗಳಿಸಿ ನಿರ್ಗಮಿಸಿದರು. ಶಾರ್ದೂಲ್ ಠಾಕೂರ್ ಅವರು ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು.
ಮೊದಲ ದಿನ 146 ರನ್ ಗಳಿಸಿ ಆಟ ಮುಂದುವರಿಸಿದ ಟ್ರ್ಯಾವಿಸ್ ಹೆಡ್ 163 ರನ್ ಗಳಿಸಿದ್ದ ವೇಳೆ ಸಿರಾಜ್ ಎಸೆದ ಚೆಂಡನ್ನು ವಿಕೆಟ್ ಕೀಪರ್ ಶ್ರೀಕರ್ ಭರತ್ ಅವರ ಕೈಗಿತ್ತು ಪೆವಿಲಿಯನ್ ಗೆ ಮರಳಿದರು. ಆ ಬಳಿಕ ಅಲೆಕ್ಸ್ ಕ್ಯಾರಿ 48 ರನ್ ಗಳಿಸಿದ್ದು ಹೊರತು ಪಡಿಸಿದರೆ ಉಳಿದ ಆಟಗಾರರನ್ನು ಎರಡಂಕಿ ದಾಟಲು ಭಾರತದ ವೇಗಿಗಳು ಅವಕಾಶ ಮಾಡಿ ಕೊಡಲಿಲ್ಲ.
ಕ್ಯಾಮರೂನ್ ಗ್ರೀನ್ 6, ಸ್ಟಾರ್ಕ್ 5(ರನ್ ಔಟ್), ಪ್ಯಾಟ್ ಕಮಿನ್ಸ್ 9, ನಾಥನ್ ಲಿಯಾನ್ 9, ಸ್ಕಾಟ್ ಬೋಲ್ಯಾಂಡ್ ಔಟಾಗದೆ 1 ರನ್ ಗಳಿಸಿತು.
ಸಿರಾಜ್ 4 ವಿಕೆಟ್, ಶಮಿ, ಶಾರ್ದೂಲ್ ತಲಾ 2 ವಿಕೆಟ್ ಪಡೆದರೆ, ಜಡೇಜಾ 1 ವಿಕೆಟ್ ಪಡೆದರು.