ನಿರ್ದೇಶಕರಿಗೆ ಅಚಾನಕ್ ಆಗಿ ಒಂದು ಕಥೆ ಹೊಳೆದಿದೆ. ಆ ಕಥೆ ಹೊಳೆದಿದ್ದೇ ತಡ, ಅದೇ ಸ್ಪೀಡ್‌ನಲ್ಲಿ ಆ ಕಥೆಗೊಂದು ಚಿತ್ರಕಥೆ ಸಿದ್ಧಪಡಿಸಿ, ಮಾತುಗಳನ್ನು ಪೋಣಿಸಿ ಚಿತ್ರವನ್ನೂ ಶುರುಮಾಡಿ ಮುಗಿಸಿದ್ದಾರೆ. ಹಾಗೆ ಹುಟ್ಟಿಕೊಂಡ ಅಚಾನಕ್ ಕಥೆಗೊಂದು ಚಿತ್ರ ಮಾಡಿದ ನಿರ್ದೇಶಕರ ಹೆಸರು ಚಂದ್ರು. ಈ ಹಿಂದೆ “ರಾಂಗ್‌ಕಾಲ್’ ಚಿತ್ರಕ್ಕೆ ಹೀರೋ ಆಗಿದ್ದ ಚಂದ್ರು ಈಗ ಹೆಸರಿನ ಮುಂದೆ “ರಾಂಗ್‌ಕಾಲ್’ ಸೇರಿಸಿಕೊಂಡು ಆ ಹೆಸರ ಮೂಲಕ “ಪಂಚಮುಖಿ’ ಚಿತ್ರ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿದೆ. ಒಂದು ಹಾಡು, ಕೆಲ ದೃಶ್ಯ ಹಾಗು ಫೈಟು ಚಿತ್ರೀಕರಿಸಿದರೆ ಚಿತ್ರೀಕರಣ ಮುಗಿಯಲಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ “ರಾಂಗ್‌ಕಾಲ್’ ಚಂದ್ರು, “ಇಲ್ಲಿ “ಪಂಚಮುಖಿ’ ಅನ್ನೋದು ಒಂದು ಮನೆಯ ಹೆಸರು. ನಾಯಕನಿಗೆ ಪ್ರತಿ ದಿನ ಕನಸಿನಲ್ಲಿ ಒಂದು ಮನೆ ಕಾಣಿಸಿಕೊಳ್ಳುತ್ತಿರುತ್ತದೆ. ಅದನ್ನು ಹುಡುಕಿಕೊಂಡು ಹೋದ ಬಳಿಕ ಅಲ್ಲಿ ಪೂರ್ವಜನ್ಮದ ಘಟನೆಗಳು ನೆನಪಾಗುತ್ತವೆ. ಅಲ್ಲೊಂದಷ್ಟು ಹಾರರ್ ಸ್ಪರ್ಶ ಕೊಟ್ಟು ಚಿತ್ರಕ್ಕೊಂದು ತಿರುವು ಕೊಡಲಾಗಿದೆ. ಅದೇ ಚಿತ್ರದ ಸಸ್ಪೆನ್ಸ್’ ಎನ್ನುತ್ತಾರೆ ನಿರ್ದೇಶಕರು.
ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದು, ನಾಲ್ಕು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರಂತೆ. ಕಾರ್ತಿಕ್ ನಾಗಲಾಪುರ, ಸೈಯದ್ ಇಮ್ರಾನ್, ಪ್ರವೀಣ್ ಶ್ರೀನಿವಾಸ್ ಅವರು ಹಾಡಿದ್ದಾರೆ. ಎರಡು ಮೆಲೋಡಿ, ಒಂದು ಪ್ಯಾಥೋ ಮತ್ತೂಂದು ಹಾರರ್ ಫೀಲ್ ಇರುವ ಹಾಡಿಗೆ ಧ್ವನಿಯಾಗಿದ್ದಾರೆ ಎಂಬುದು ಸಂಗೀತ ನಿರ್ದೇಶಕರ ಮಾತು.
“ಪಂಚಮುಖೀ’ ಚಿತ್ರದ ಆಡಿಯೋ ಹಕ್ಕನ್ನು ಸಿರಿ ಮ್ಯೂಸಿಕ್ ಪಡೆದುಕೊಂಡಿದೆ. ನಟ ಮಿತ್ರ ಅಂದಿನ ಅತಿಥಿ. “ಸಂಗೀತ ನಿರ್ದೇಶಕರು ಕಡಿಮೆ ಬಜೆಟ್‌ನಲ್ಲಿ ಎಲ್ಲವನ್ನೂ ಮಾಡುವಂತಹ ಸ್ಟುಡಿಯೋ ನಿರ್ಮಾಣ ಮಾಡಿಕೊಂಡಿರುವುದು ಸಣ್ಣ ನಿರ್ಮಾಪಕರಿಗೆ ಅನುಕೂಲವಾಗುತ್ತದೆ. ನಿರ್ದೇಶಕರ ಹೆಸರಲ್ಲೇ “ರಾಂಗ್’ ಇದೆ. ಆದರೆ, ಅದು ನಿರ್ಮಾಪಕರಿಗೆ “ರೈಟ್’ ಆಗಲಿ, ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು ಮಿತ್ರ. ನಾಯಕಿಯರಾದ ಗೌತಮಿ, ಸ್ಪೂರ್ತಿ, ಸೈಕೋ ವಿಲನ್ ಸಂದೇಶ್ ಶೆಟ್ಟಿ ಹಾಗು ಅಫ¤ಬ್‌ಖಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರ ಸಹೋದರ ಅಭಿಷೇಕ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದೇ ವೇಳೆ ಚಿತ್ರತಂಡ ಆತ್ಮೀಯರನ್ನು ಗೌರವಿಸಿತು.