ಕೆ.ಆರ್.ಪುರ: ಚುನಾವಣೆ ದೃಷ್ಟಿಯಿಂದ ಮತದಾರರನ್ನು ಸಳೆಯಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಬಿಜೆಪಿ ಪಕ್ಷದವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಬೈರತಿ ಬಸವರಾಜ ಹೇಳಿದರು.
ಕ್ಷೇತ್ರದ ಎ.ನಾರಾಯಣಪುರ ವಾರ್ಡ್‌ನ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ನಡೆಸಿ ಬಿಜೆಪಿ ಅಭ್ಯರ್ಥಿ
ನಂದೀಶ್ ರೆಡ್ಡಿಯವರ ಆರೋಪಗಳಿಗೆ ತೀರುಗೇಟು ನೀಡಿದ ಅವರು, ಕ್ಷೇತ್ರದಲ್ಲಿ ನಡೆದ ಅಪರಾಧ ಪ್ರಕರಣಗಳಿಗೆ
ಶಾಸಕರೇ ಹೊಣೆ ಎಂದು ತಲೆ ಬುಡವಿಲ್ಲದ ಆರೋಪ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಸಂಭವಿಸಿರುವ ಅಪರಾಧಗಳಿಗೆ ನನ್ನನ್ನು ಹೊಣೆ ವಾಡುವ ಬಿಜೆಪಿ ಅಭ್ಯರ್ಥಿ, ದೇಶದಲ್ಲಾಗುವ ಅಪರಾಧ ಪ್ರಕರಣಗಳಿಗೆ ಪ್ರಧಾನಿ ಮೋದಿ ಅವರನ್ನು ಹೊಣೆ ಮಾಡುವರೇ ಎಂದು ಪ್ರಶ್ನಿಸಿದರು.
ಬಿಜೆಪಿ ಅವಧಿಯಲ್ಲಿ ಹೆಚ್ಚು ಅಪರಾಧಗಳು ನಡೆದಿವೆ. ಸರ್ಕಾರದಿಂದ ಬಂದ ಅನುದಾನವನ್ನು ಸಂಪೂರ್ಣವಾಗಿ ಬಳಸಿ ಮೂಲ ಸೌಕರ್ಯ ಒದಗಿಸಲು ಶ್ರಮಿಸಿದ್ದೇನೆ. ಕ್ಷೇತ್ರಕ್ಕೆ 1500 ಕೋಟಿ ರೂ. ಅನುದಾನ ಬಂದಿದೆ ಎಂದು ಒಮ್ಮೆ, ಮತ್ತೂಮ್ಮೆ 1300 ಕೋಟಿ ರೂ. ಬಂದಿದೆ ಎನ್ನುತ್ತಾ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಅನುಸರಿ ಸಿದ್ದು, ಕ್ಷೇತ್ರಕ್ಕೆ ಸರ್ಕಾರ ದಿಂದ ಎಷ್ಟು ಅನುದಾನ ಬಂದಿದೆ, ಯಾವ ಕಾಮಗಾರಿ ಗಳಿಗೆ ಎಷ್ಟು ಬಳಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ನಮ್ಮ ವೈಬ್‌ಸೈಟ್ ನಲ್ಲಿದೆ. ಅನುಮಾನವಿದ್ದರೆ ಅದನ್ನು ನೋಡಿ ಎಂದು ಸಲಹೆ ನೀಡಿದರು.
ಬಿಜೆಪಿಯವರ ಅರ್ಥವಿಲ್ಲದ ಟೀಕೆಗಳಿಗೆ ನಾನು ಕಿವಿಕೊಡುವುದಿಲ್ಲ. ಇಂತಹ ಕೀಳುಮಟ್ಟದ ರಾಜಕೀಯ
ಮಾಡುವುದು ನಮಗೆ ಬರುವುದಿಲ್ಲ. ಅದು ಕಾಂಗ್ರೆಸ್ ಸಂಸ್ಕೃತಿಯೂ ಅಲ್ಲ. ಸಿಕ್ಕ ಅವಕಾಶವನ್ನು ಜನರ ಸೇವೆ, ಹಿತಕ್ಕೆ ಬಳಸಿಕೊಂಡಿದ್ದೇನೆ. ಕ್ಷೇತ್ರದ ವಿವಿಧಡೆ ಸುತ್ತಾಡುತ್ತಿದ್ದೇನೆ, ಕ್ಷೇತ್ರದ ಮತದಾರ ರು ಮತ್ತೂಮ್ಮೆ ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.