Advertisement

ಮಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ತಾಯಿ

03:45 AM Apr 04, 2017 | Team Udayavani |

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪುರಸಭೆ ಅಧ್ಯಕ್ಷೆ ಆರತಿ ಮುಂಡೆ (40) ತಮ್ಮ ಮಗಳೊಂದಿಗೆ ಸೋಮವಾರ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಬರೆದಿದ್ದಾರೆ.

Advertisement

ಪುರಸಭೆ ಅಧ್ಯಕ್ಷರಾದ ಬಳಿಕ ಮೊಟಕುಗೊಂಡಿದ್ದ ಶಿಕ್ಷಣವನ್ನು ಮತ್ತೆ ಮುಂದುವರಿಸಲು ಇಚ್ಛಿಸಿ ತಮ್ಮ ಮಗಳ ಜತೆಯೇ ಪರೀಕ್ಷೆಗೆ ಸಿದಟಛಿತೆ ಮಾಡಿಕೊಂಡಿದ್ದರು. ಪಟ್ಟಣದ ಸಿಟಿಇ ಶಿಕ್ಷಣ ಸಂಸ್ಥೆಯ ಆರ್‌.ಡಿ. ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಎರಡನೇ ಪರೀಕ್ಷೆ ಬರೆದಿದ್ದಾರೆ. 1993ರಲ್ಲಿ ಹುಕ್ಕೇರಿ ತಾ.ಎಲಿಮುನ್ನೋಳ್ಳಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಾಗ ಎರಡು ವಿಷಯಗಳಲ್ಲಿ ಅವರು ಅನುತ್ತೀರ್ಣರಾಗಿದ್ದರು. ಮದುವೆ ಆದ ಬಳಿಕ ಶಿಕ್ಷಣ ಮೊಟಕುಗೊಂಡಿತ್ತು. ಮೂರು ಮಕ್ಕಳ ತಾಯಿಯಾಗಿರುವ ಆರತಿ ಅವರ ಪುತ್ರ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಾನೆ. ಪುತ್ರಿ ನೀತಾ ತನ್ನ ತಾಯಿಗೆ ನಿತ್ಯ ಪಠ್ಯ ವಿಷಯಗಳನ್ನು ಹೇಳಿಕೊಡುವ ಮೂಲಕ ಪರೀಕ್ಷೆಗೆ ಸಿದ್ಧಗೊಳಿಸಿದ್ದಾಳೆ.ಆಕೆಯೂ ಪಟ್ಟಣದ ಸಿಎಲ್‌ಇ ಸಂಸ್ಥೆಯ ಸಿಎಸ್‌ಎಸ್‌ ಪ್ರೌಢಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾಳೆ.

ಇಬ್ಬರು ಡಿಬಾರ್‌: ರಾಜ್ಯದ ವಿವಿಧೆಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ. ಸೋಮವಾರ ಗಣಿತ ಪರೀಕ್ಷೆ ನಡೆದಿದ್ದು, ಈ ಸಂದರ್ಭದಲ್ಲಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಕಲಬುರಗಿ ಹಾಗೂ ಬೀದರ್‌ನಲ್ಲಿ ತಲಾ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಲಾಗಿದೆ. ಮಾ.4ರಂದು ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಮಾ.5ರಂದು ದ್ವಿತೀಯ ಭಾಷೆ ಕನ್ನಡ ಮತ್ತು ಇಂಗ್ಲಿಷ್‌ ಪರೀಕ್ಷೆ ನಡೆಯಲಿದೆ.

ಪರೀಕ್ಷೆ ವಿಳಂಬ: ಉಪಖಜಾನೆ ಅಧಿಕಾರಿ ಬೇಜವಾಬ್ದಾರಿಯಿಂದ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಪರೀಕ್ಷೆ 15 ನಿಮಿಷ ವಿಳಂಬವಾಗಿ ಆರಂಭವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next