Advertisement

Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

08:07 PM Jan 07, 2025 | Team Udayavani |

ಬೆಂಗಳೂರು: ಚೆನ್ನಾಗಿ ಕಥೆ ಬರೆಯುತ್ತೀರಾ? ಒಳ್ಳೆ ಸಂಭಾಷಣೆಯ ಕಲೆ ನಿಮ್ಮಲ್ಲಿ ಇದೆಯಾ? ನೀವು ಬರಹಗಾರರಾಗಬೇಕೆ? ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೇ? ಡೋಂಟ್ ವರಿ. ಪ್ರತಿಭಾವಂತ ಬರಹಗಾರರಿಗೆ ಎಲ್ಲಿಯೂ ಸಿಗದ ಅವಕಾಶವನ್ನು ಜೀ ಕನ್ನಡ ವಾಹಿನಿ ನೀಡುತ್ತಿದೆ.

Advertisement

ನಿಮ್ಮೊಳಗಿರುವ ಕಥೆಗಾರ ಮತ್ತು ಸಂಭಾಷಣೆಕಾರರಿಗೆ ಜೀ ಕನ್ನಡ ವೇದಿಕೆ ನೀಡುತ್ತಿದ್ದು, ಜೀ ಕನ್ನಡ ‘ರೈಟರ್ಸ್ ಆಡಿಷನ್‘ ನಲ್ಲಿ ನಿಮ್ಮ  ಅತ್ಯುತ್ತಮ ಬರವಣಿಗೆ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ಅವಕಾಶವನ್ನು  ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುತ್ತಿದೆ.

ಇದೇ ಜನವರಿ 11 ರಂದು ಶನಿವಾರ ಬೆಳಗ್ಗೆ 9 ಗಂಟೆಗೆ 3 ಜಿಲ್ಲೆಗಳಲ್ಲಿ ಆಡಿಷನ್ ಶುರುವಾಗಲಿದೆ. ಶನಿವಾರದಂದು ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು, ಎಸ್. ಎಸ್, ಲೇಔಟ್ ಎ ಬ್ಲಾಕ್, ಎಸ್.ಎಸ್. ಲೇಔಟ್,  ಶಿವಮೊಗ್ಗದ ಬಸವೇಶ್ವರ ವಿದ್ಯಾಸಂಸ್ಥೆ, ತಾಲೂಕು ಕಚೇರಿ ರಸ್ತೆ, ಕಾರ್ಪೊರೇಷನ್ ಹತ್ತಿರ ಹಾಗೂ ಮಂಗಳೂರಿನ ಮನೆಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, MSNIM ಬೆಸೆಂಟ್ ಕ್ಯಾಂಪಸ್, ಬೊಂದೇಲ್ ನಲ್ಲಿ ನಡೆಯಲಿದೆ.

ಜನವರಿ 12 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರು, ಮೈಸೂರು ಮತ್ತು ತುಮಕೂರಿನಲ್ಲಿ ಆಡಿಷನ್ ನಡೆಯಲಿದೆ. ಬೆಂಗಳೂರಿನ ಸೈಂಟ್ ಸೋಫಿಯಾ ಕಾನ್ವೆಂಟ್ ಹೈಸ್ಕೂಲ್, ಸಿ ಎನ್ ನಂ.06, 10ನೇ ಬ್ಲಾಕ್, 2ನೇ ಫೇಸ್, ನಾಗರಭಾವಿ, ಮೈಸೂರಿನ ಶ್ರೀ ವಿವೇಕ ಬಾಲೋದ್ಯಾನ ಶಾಲೆ, 2ನೇ ಮುಖ್ಯರಸ್ತೆ, ಸರ್ಕಾರಿ ಪ್ರೌಢಶಾಲೆ ಎದುರು ಜಯನಗರ, ಕುವೆಂಪುನಗರದಲ್ಲಿ ಹಾಗು ತುಮಕೂರಿನ ಸೈಂಟ್ ಮೋಸಸ್ ಆಂಗ್ಲ ಶಾಲೆ ಆದರ್ಶನಗರ, ತುಡಾ ಕಚೇರಿ ಹತ್ತಿರ, ಬೆಳಗುಂಬು ರಸ್ತೆಯಲ್ಲಿ  ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next