Advertisement

ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 32ನೇ ಕೃತಿ ಬಿಡುಗಡೆ

02:21 PM Mar 19, 2019 | |

ಮುಂಬಯಿ: ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ  32ನೇ ಕೃತಿ  ಮಂಗಳೂರು ಪತ್ರ ಅಂಕಣ ಬರಹಗಳ ಕೃತಿಯನ್ನು ಮಾ. 13ರಂದು ಮಂಗಳೂರಿನ ಶ್ರೀನಿವಾಸ್‌ ಹೊಟೇಲ್‌ ಕಿರು ಸಭಾಗೃಹದಲ್ಲಿ ಹಿರಿಯ ಲೇಖಕಿ, ಗಣಪತಿ ಜೂನಿಯರ್‌ ಕಾಲೇಜ್‌ನಮಾಜಿ ಪ್ರಾಂಶುಪಾಲರಾದ ಚಂದ್ರಕಲಾ ನಂದಾವರ ಅವರು ಬಿಡುಗಡೆಗೊಳಿಸಿದರು.

Advertisement

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಚಂದ್ರಕಲಾ ನಂದಾವರ ಅವರು , ಮುಂಬಯಿಗೆ ಹಲವು ಬಾರಿ ನಾನು ಕಾರ್ಯಕ್ರಮಗಳಿಗೆ ಹೋಗಿದ್ದೆ. ಮುಂಬಯಿಯ ಬಗ್ಗೆ ನಮಗೆ ಹಲವು ರೀತಿಯ ಭಯ ತರುವ ಕಲ್ಪನೆಗಳಿದ್ದುವು. ಅಂತಹ ಕಲ್ಪನೆಗಳನ್ನು ನನ್ನ ಶಿಷ್ಯ ಶ್ರೀನಿವಾಸ ಜೋಕಟ್ಟೆ ತನ್ನ ವಿಶಿಷ್ಟ ಶೈಲಿಯ ಲೇಖನಿಯ ಮೂಲಕ ದೂರ ಮಾಡಿದ್ದಾರೆ. ಜೋಕಟ್ಟೆಯವರ ಬರಹಗಳು ಸಮಾಜ ಮುಖೀಯಾಗಿದ್ದು ಜೀವನ ಪ್ರೀತಿಯಿಂದ ಕೂಡಿರುತ್ತದೆ. ಇಂತಹ ಶಿಷ್ಯನನ್ನು ಪಡೆದಿರುವ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಆಶಾವಾದದ ಹಣತೆಯಂತೆ ಗೋಚರಿಸುವ ಶ್ರೀನಿವಾಸ ಮುಂದೆಯೂ ಈ ಕ್ಷೇತ್ರದಲ್ಲಿ ಮತ್ತಷ್ಟು ಮಿಂಚಲಿ ಎಂದು ನುಡಿದು ಶುಭ ಹಾರೈಸಿದರು.

ಕೃತಿಯನ್ನು ಲೇಖಕಿ, ಉಪನ್ಯಾಸಕಿ ಡಾ| ನಾಗವೇಣಿ ಮಂಚಿ ಅವರು ಪರಿಚಯಿಸಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುವ ಶ್ರೀನಿವಾಸ ಜೋಕಟ್ಟೆ ಪ್ರವಾಸ ಸಾಹಿತ್ಯದ ಜತೆ ಕತೆ, ಕವನ, ಲೇಖನಗಳನ್ನು ಬರೆಯುತ್ತಾ ತನ್ನದೇ ಆದ ಛಾಪು ಮೂಡಿಸಿದ್ದಾರೆ. ವರದಿಯೊಂದಿಗೆ ನೀಡುವ ಅವರ ವಿವರಣೆಯಲ್ಲಿ ಪ್ರೀತಿ ತುಂಬಿರುತ್ತದೆ. ಸೌಂದರ್ಯ ಅಡಗಿದೆ. ವರದಿಗೆ ಪ್ರತಿಕ್ರಿಯಿಸುವ ಮತ್ತು ಪ್ರಶ್ನಿಸುವ ಗುಣ ಅವರ ಮಂಗಳೂರು ಪತ್ರ ಅಂಕಣ ಸಂಕಲನದ ಉದ್ದಕ್ಕೂ ಕಾಣಬಹುದಾಗಿದೆ. ಅಂದು ಜೋಕಟ್ಟೆಯವರು ಮಂಗಳೂರಲ್ಲಿದ್ದು ಮುಂಬಯಿಯ ಕರ್ನಾಟಕ ಮಲ್ಲ ಪತ್ರಿಕೆಗೆ ಬರೆದ ಈ ಅಂಕಣದ ಬಹುತೇಕ ಲೇಖನಗಳು ಅಭಿವೃದ್ಧಿ ಕುರಿತಾದ ಅಧ್ಯಯನಕ್ಕೆ ಯೋಗ್ಯವಾದುದು. ಆಕರ ಗ್ರಂಥವಾಗಿಯೂ ಈ ಕೃತಿ ಬಳಸಬಹುದಾಗಿದೆ. ಮಂಗಳೂರಿನ ಆರ್ಥಿಕ ಪಲ್ಲಟ ಮತ್ತು ಸಾಮಾಜಿಕ ಹೋರಾಟದ ಚಿತ್ರಣ ಈ ಕೃತಿಯಲ್ಲಿ ಅಡಕವಾಗಿದೆ ಎಂದು ನುಡಿದರು.

ವಿಜಯ ಕರ್ನಾಟಕದ ಸ್ಥಾನೀಯ ಸಂಪಾದಕ ಯು. ಕೆ. ಕುಮಾರನಾಥ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬಯಿಯಲ್ಲಿ ತಾನಿದ್ದ  ಆ ದಿನ
ಗಳನ್ನು ನೆನೆಪಿಸಿಕೊಂಡರು. 

1992ರ ಕೋಮುಗಲಭೆ, 1993ರ ಸರಣಿ ಬಾಂಬ್‌ ನ್ಪೋಟದ ದಿನಗಳಲ್ಲಿ ತಾನೂ ಮುಂಬಯಿಯಲ್ಲಿ ಪತ್ರಕರ್ತ ನಾಗಿದ್ದೆ. ಅಂದಿನಿಂದಲೂ ಶ್ರೀನಿವಾಸ ಜೋಕಟ್ಟೆ ನನ್ನ ಜತೆ ಚರ್ಚಿಸುತ್ತಾ ಬಂದವರು. ಕತೆ, ಪ್ರವಾಸ ಬರಹಗಳನ್ನು ಪರಿಣಾಮಕಾರಿಯಾಗಿ ಅವರು ಬರೆಯುತ್ತಾರೆ. ಅವರ ಈ ಅಂಕಣ ಕೃತಿಯೂ ಗಮನ ಸೆಳೆಯುತ್ತದೆ. ಈಗ ಪತ್ರಕರ್ತರು ಈವೆಂಟ್‌ ಮ್ಯಾನೇಜ್‌ಮೆಂಟ್‌ ಮಾಡಬೇಕಾಗುತ್ತದೆ. ಆದರೆ ಇಂದಿಗೂ ಜೋಕಟ್ಟೆ ಅತ್ಛ ಪತ್ರಕರ್ತರಾಗಿಯೇ ಉಳಿದಿದ್ದಾರೆ ಎಂದರು.

Advertisement

ಕೃತಿಕಾರ ಶ್ರೀನಿವಾಸ ಜೋಕಟ್ಟೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ, ತಾನು 2000 – 2004ರಲ್ಲಿ ಅನಿವಾರ್ಯವಾಗಿ ಮುಂಬಯಿ ತ್ಯಜಿಸಿ ಮಂಗಳೂರಲ್ಲಿದ್ದಾಗ ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರು ಮಂಗಳೂರು ಪತ್ರ ಎಂಬ ಅಂಕಣ ಬರೆಸಿದ್ದಾರೆ. ವರದಿ ಆಧಾರಿತ ಈ ಬರಹಗಳು ಆ 
ಕಾಲದ ಮಂಗಳೂರು – ಉಡುಪಿ  ಕರಾವಳಿ ಜಿಲ್ಲೆಗಳ ಅಂದಿನ ದೃಶ್ಯ
ಗಳನ್ನು ತೆರೆದಿಡುತ್ತದೆ. ಇನ್ನೂರಕ್ಕೂ ಹೆಚ್ಚಿನ ಬರಹಗಳಲ್ಲಿ ಐವತ್ತೆರಡನ್ನು ಆಯ್ಕೆ ಮಾಡಿರುವೆ ಎಂದರು.

ಹಿರಿಯ ಪತ್ರಕರ್ತ ಚಿದಂಬರ ಬೆ„ಕಂಪಾಡಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ,  ತಾನು ಜೋಕಟ್ಟೆಯವರ ಕಥಾ ಸಂಕಲನವನ್ನು 2003ರಲ್ಲಿ ಬಿಡುಗಡೆಗೊಳಿಸಿದ್ದನ್ನು ನೆನಪಿಸಿಕೊಂಡರು. ಅಂದಿನಿಂದಲೂ ಅವರ ಆತ್ಮೀಯ ಬರಹಗಳನ್ನು ನಿರಂತರವಾಗಿ ಗಮನಿಸುತ್ತಿದ್ದೇನೆ ಎಂದರು.

ಸಭಾ ಕಾರ್ಯಕ್ರಮವನ್ನು ಲೇಖಕಿ, ಸಂಘಟಕಿ ರೇಶ್ಮಾ ಉಳ್ಳಾಲ್‌ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ| ವಾಮನ ನಂದಾವರ, ಪೇಜಾವರ ಹರಿಯಪ್ಪ, ವಾರ್ತಾ ಭಾರತಿಯ ಹಂಝ ಮಲ್ಹಾರ್‌, ಜಯ ಕಿರಣದ ಜಗನ್ನಾಥ ಶೆಟ್ಟಿ ಬಾಳ, ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ, ಮಂಗಳ ಪತ್ರಿಕೆಯ ಟಿ.ಕೆ. ಸುನೀಲ್‌ ಕುಮಾರ್‌, ಸಂಯುಕ್ತ ಕರ್ನಾಟಕದ ಆರ್‌. ರಾಮಕೃಷ್ಟ, ವಿಶ್ವವಾಣಿಯ ಜಿತೇಂದ್ರ ಕುಂದೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಎಸ್‌. ಜಯರಾಮ್‌ ಮತ್ತು ರಾಮಕೃಷ್ಣ ಆರ್‌.  ಕಾರ್ಯಕ್ರಮ ಆಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next