Advertisement
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಯೋಧ ಹಾಗೂ ವನವಾಸಿ ಕಲ್ಯಾಣ ಸಮಿತಿಯ ಪ್ರಚಾರಕ್ ಕೃಷ್ಣಮೂರ್ತಿ ಕೆ., ಸೈನಿಕರನ್ನು ಅವಮಾನಿಸುವ ಕೆಲಸ ಮಾಡಿರುವ ಬರಗೂರು ಅವರ ಬರಹ ಖಂಡನೀಯ. ಸೈನಿಕರು ತಮ್ಮ ಕುಟುಂಬವರ್ಗವನ್ನು ಬಿಟ್ಟು ಗಡಿಯನ್ನು ದೇಶ ಕಾಯುತ್ತಿರುವುದರಿಂದಲೇ ದೇಶವಾಸಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಅಂತಹ ಸೈನಿಕರನ್ನು, ಅವರ ಕುಟುಂಬವನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು, ಪಠ್ಯಗಳಲ್ಲಿ ಅವರ ಕುರಿತು ಅವಹೇಳನೆಯಾಗಿ ಬರೆಯುವುದು ಅಕ್ಷಮ್ಯ ಅಪರಾಧ ಎಂದು ದೂರಿದರು.
Related Articles
ಯುದೊದ್ಯಮ ಎಂದು ಉಲ್ಲೇಖೀಸುವ ಮೂಲಕ ತಮ್ಮ ಕೀಳುಮಟ್ಟದ ಸಾಹಿತ್ಯಬುದ್ಧಿಯನ್ನು ಪ್ರದರ್ಶಿಸಿದ್ದಾರೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.
Advertisement
ಟ್ರಸ್ಟ್ ಅಧ್ಯಕ್ಷ ರಂಗರಾಜು ಬಾಳೆಗುಂಡಿ ಮಾತನಾಡಿ, ಬರವಣಿಗೆಯಿಂದ ಸಮಸ್ತ ಸೈನಿಕರಿಗೆ ಅವಮಾನವಾಗಿದೆ. ಇಂತಹ ಅವಹೇಳನಕಾರಿ ವಿಷಯವನ್ನು ವಿಶ್ವವಿದ್ಯಾಲಯದ ಪಠ್ಯ ವಿಷಯದಲ್ಲಿ ಪ್ರಕಟಿಸಲು ಭಾಗಿಯಾದ ಪಠ್ಯ ಸಮಿತಿಯ ಮುಖ್ಯಸ್ಥರನ್ನು ಮತ್ತು ಸದಸ್ಯರನ್ನು ಈ ಕೂಡಲೇವಜಾಗೊಳಿಸಿ, ಶಿಸ್ತುಕ್ರಮ ಜರುಗಿಸಬೇಕು. ಅವರಿಗೆ ನೀಡಿರುವ ಸರ್ಕಾರಿ ಸವಲತ್ತುಗಳನ್ನು ಹಿಂದಕ್ಕೆ ಪಡೆಯಬೇಕು. ಮುಂದಿನ ದಿನಗಳಲ್ಲಿ ಸೈನಿಕರ ಕುರಿತ ಅಸತ್ಯ ಸಂಗತಿಗಳನ್ನು ಯಾವುದೇ ಪುಸ್ತಕದಲ್ಲಿ ಪ್ರಕಟಿಸದಂತೆ ಸರ್ಕಾರ ನಿಗಾವಹಿಸಬೇಕು ಎಂದು ಆಗ್ರಹಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ವಿಷ್ಣು ಹೆಗಡೆ, ಉಪಾಧ್ಯಕ್ಷ ಈಶ್ವರಪ್ಪ, ಕೃಷ್ಣಮೂರ್ತಿ, ವೆಂಕಟೇಶ್, ದಿನೇಶ್ ಜೆ.ವಿ. ಗಂಗಾಧರ ಟಿ., ಅಣ್ಣಪ್ಪ ಡಿ.ಕೆ., ಮಮತಾ ಭಾಸ್ಕರ, ನೇತ್ರಾವತಿ ನಾರಾಯಣ, ಗಿರಿಜಾ ಇನ್ನಿತರರು ಇದ್ದರು.