Advertisement

ಖ್ಯಾತ ಸಾಹಿತಿ ಬಿ.ಎ. ಸನದಿ ವಿಧಿವಶ

11:36 PM Mar 31, 2019 | Vishnu Das |

ಕುಮಟಾ: “ಮಾನವ್ಯ ಕವಿ’ ಎಂದೇ ಖ್ಯಾತರಾಗಿದ್ದ ನಾಡಿನ ಹಿರಿಯ ಸಾಹಿತಿ, ಕವಿ ಡಾ| ಬಿ.ಎ.ಸನದಿ (86) ಅವರು ಹೆರವಟ್ಟಾದ ಸ್ವಗೃಹದಲ್ಲಿ ಭಾನುವಾರ ನಸುಕಿನ ಜಾವ ನಾಲ್ಕು ಗಂಟೆಗೆ ನಿಧನ ಹೊಂದಿದರು.

Advertisement

ಬೆಳಗಾವಿ ಜಿಲ್ಲೆ ಸಿಂಧೊಳ್ಳಿ ಗ್ರಾಮದಲ್ಲಿ 1933ರ ಆಗಸ್ಟ್‌ 18ರಂದು
ಜನಿಸಿದ್ದ ಅವರು, ಪತ್ನಿ, ಪುತ್ರ-ಪುತ್ರಿಯನ್ನು ಅಗಲಿದ್ದಾರೆ. ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಬಾಬಾ ಸಾಹೇಬ ಅಹಮದ್‌ ಸಾಹೇಬ ಸನದಿ
ಅವರು ಒಳ್ಳೆಯ ವಾಗ್ಮಿ, ಅನುವಾದಕಾರ, ಮಕ್ಕಳ ಸಾಹಿತ್ಯದಲ್ಲಿ ನಿಷ್ಣಾತರಾಗಿದ್ದರು. ನಾಟಕ ರಚನಾಕಾರ ಹಾಗೂ ನಿರ್ದೇಶಕರಾಗಿಯೂ
ಗುರುತಿಸಿಕೊಂಡಿದ್ದರು. ಮುಂಬೈ ಆಕಾಶವಾಣಿ ಹಿರಿಯ ಅ ಧಿಕಾರಿ ಯಾಗಿದ್ದಾಗ ನಾಟಕಗಳು, ಉಪನ್ಯಾಸಗಳು, ಸರಸ-ಸಂಭಾಷಣೆಗಳು,
ಯಕ್ಷಗಾನಗಳ ಪ್ರಸಾರದ ಜತೆಗೆ ಕರ್ನಾಟಕದಿಂದ ಮುಂಬೈಗೆ ಆಗಮಿಸುತ್ತಿದ್ದ ಸುಪ್ರಸಿದಟಛಿ ಕವಿಗಳ ಜತೆ ಕನ್ನಡ ಸಂವಾದ- ಸಂದರ್ಶ ನಗಳನ್ನು ಆಯೋಜಿಸುತ್ತಿದ್ದರು. ನಿವೃತ್ತಿ ನಂತರ ಉತ್ತರ ಕನ್ನಡ
ಜಿಲ್ಲೆಯ ಕುಮಟಾಕ್ಕೆ ಬಂದು ನೆಲೆಸಿದ್ದರು.

ಸಾಹಿತ್ಯ ಸೇವೆ: 1949ರಲ್ಲಿ ಸನದಿಯವರ ಪ್ರಥಮ ಕವನ “ಜಯ ಕರ್ನಾಟಕ’ವು “ನವಯುಗ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರು 16
ವರ್ಷದವರಿದ್ದಾಗ ರಚಿಸಿದ “ಪತಿವ್ರತಾ ಪ್ರಭಾವ’ ನಾಟಕವನ್ನು ಅವರ ಹುಟ್ಟೂರು ಸಿಂಧೊಳ್ಳಿಯಲ್ಲಿ ಪ್ರದರ್ಶಿಸಲಾಯಿತು. 1952ರಲ್ಲಿ ಸನದಿಯವರು ಲಿಂಗರಾಜ ಕಾಲೇಜಿನಲ್ಲಿ ಕಲಿಯುತ್ತಿರುವಾಗ
ಬರಹಗಾರರ ಬಳಗದ ಕಾರ್ಯದರ್ಶಿ ಹಾಗೂ ಬೆಳಗಾವಿ ಯುವ ಕಲಾ ಕಲಾವೃಂದದ ಕಾರ್ಯದರ್ಶಿ ಮತ್ತು ಶೋಭಾ ಗ್ರಂಥಮಾಲೆ ಸಂಚಾಲಕರಾಗಿದ್ದರು. 1955ರಲ್ಲಿ ಶಮನೇವಾಡಿಯಲ್ಲಿ ಸ್ಥಳೀಯ ಐವರು ಕವಿಗಳನ್ನು ಸೇರಿಸಿಕೊಂಡು ಸ್ನೇಹ ಪ್ರಕಾಶನವನ್ನು ಪ್ರಾರಂಭಿಸಿ,
“ಐದಳ ಮಲ್ಲಿಗೆ’ಯನ್ನು ಪ್ರಕಟಿಸಿದರು. ಮುಂದೆ ಅದೇ ಪ್ರಕಾಶನದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಅಲ್ಲದೆ, ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯ ಮಾಡಿದರು.

ಪುರಸ್ಕಾರಗಳು: 1962ರಲ್ಲಿ ತಾಜ್‌ಮಹಲ್‌ ಕವನ ಸಂಗ್ರಹಕ್ಕೆ ರಾಜ್ಯ ಸರಕಾರದ ಪ್ರಶಸ್ತಿ, 1967ರಲ್ಲಿ ಪ್ರತಿಬಿಂಬ ಕವನ ಸಂಗ್ರಹಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1969ರಲ್ಲಿ ಧ್ರುವಬಿಂದು ಕವನ ಸಂಗ್ರಹಕ್ಕೆ ಕೇಂದ್ರ ಸರಕಾರದ ಪ್ರಶಸ್ತಿ, 1984ರಲ್ಲಿ ಇಲ್ಲಿ ಸಲ್ಲುವರು (ವಚನ ವಿಮರ್ಶೆ)ಗೆ ಕಾವ್ಯಾನಂದ ಪುರಸ್ಕಾರ ಹಾಗೂ ಇಳಕಲ್ಲದ ಚಿತ್ತರಗಿ ಸಂಸ್ಥಾನ ಮಠದ ವೀರಶೈವ ಸಾಹಿತ್ಯ ಪ್ರಶಸ್ತಿ, 1992ರಲ್ಲಿ ಸಮಗ್ರ
ಸಾಹಿತ್ಯಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಸಾಪ ಸನ್ಮಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1991ರಲ್ಲಿ ದೆಹಲಿ ಕನ್ನಡಿಗ ಪರವಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿಗೆ ಪಾತ್ರರಾಗಿದ್ದರು.

ಡಾ| ಗೌರೀಶ ಕಾಯ್ಕಿಣಿಯವರಿಂದ “ಮಾನವ್ಯ ಕವಿ’ ಎಂದೂ ಬಿರುದಾಂಕಿತರಾಗಿದ್ದರು. ಮುಂಬೈಯ ಶ್ರೀ ನಾರಾಯಣ ಗುರು ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ. ಭೂಸನೂರ ಮಠ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್‌,
ಸಿರಿಗನ್ನಡ ಗೌರವ ಪ್ರಶಸ್ತಿ. ಸಾಧನ ಶಿಖರ ಪ್ರಶಸ್ತಿ, 2015ನೇ ಸಾಲಿನ ಪಂಪ ಪ್ರಶಸ್ತಿ…ಹೀಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಸಂದಿವೆ.

Advertisement

ಸನದಿ ನಿಧನಕ್ಕೆ ಕಂಬನಿ: ಹಿರಿಯ ಸಾಹಿತಿ ಡಾ.ಬಿ.ಎ.ಸನದಿ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕಂಬನಿ ಮಿಡಿದಿದೆ. ಡಾ.ಬಿ.ಎ.ಸನದಿ ಅವರು
ಅನುವಾದಕರಾಗಿ ಮತ್ತು ನಾಟಕ ರಚನಕಾರರಾಗಿಕನ್ನ ಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್‌
ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next