Advertisement
ಡೈರಿಯನ್ನು ಏಕೆ ಬರೆಯಬೇಕು ?ನಿಜಕ್ಕೂ ಆಧುನಿಕ ಯುಗದ ಭರಾಟೆಯಲ್ಲಿರುವ ಪ್ರತಿಯೊಬ್ಬರಿಗೂ ಅನಿಸುವ ಮಾತಿದು, “ಫೇಸ್‌ಬುಕ್, ವಾಟ್ಸಾಪ್‌ನಲ್ಲಿಯು ಬರೆಯುತ್ತೇವೆ ತಾನೆ? ಮತ್ತೇಕೆ ಈ ಡೈರಿಯನ್ನು ಬರೆಯಬೇಕು’ ಏನ್ನುವರು. ಆದರೆ ಡೈರಿ ಬರೆಯುವುವಿಕೆ ಲಾಭ ಬಲ್ಲವರೆ ಬಲ್ಲರು.
ಮನೋವೈದ್ಯರ ಪ್ರಕಾರ ಮನುಷ್ಯನ ಹಲವು ಕಾಯಿಲೆಗಳಿಗೆ ಮಾನಸಿಕ ಒತ್ತಡಗಳೇ ಕಾರಣ. ಮುಂಜಾನೆಯಿಂದ ಸಂಜೆಯವರೆಗೂ ಒತ್ತಡಗಳ ಮಧ್ಯೆ ನಮ್ಮ ಜೀವನ ಸಾಗಿರುತ್ತದೆ. ರಾತ್ರಿ ಮಲಗುವ ಮುನ್ನ ನೀವು ಅದೇ ಫೇಸುºಕ್, ವಾಟ್ಸಾಪ್‌ನಲ್ಲಿ ಮುಳುಗಿದರೆ ನಿಮ್ಮ ಮನಸ್ಸು ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತದೆ. ನೀವು ರಾತ್ರಿ ಪುನಃ ಒತ್ತಡದಲ್ಲಿ ಇರಬೇಕಾಗುತ್ತದೆ. ಇದರ ಬದಲು ನೀವು ರಾತ್ರಿ ಡೈರಿ ಬರೆಯಿರಿ. ಅದರಲ್ಲಿ ನಿಮ್ಮ ನಿತ್ಯ ಜೀವನದಲ್ಲಿ ನಡೆದ ಎಲ್ಲಾ
ಘಟನೆಯನ್ನು ಬರೆಯಿರಿ. ನೀವು ನಿಮ್ಮ ಮನಸ್ಸಿನಲ್ಲಿ ಮುಚ್ಚಿಟ್ಟ ಎಲ್ಲಾ ಭಾವನೆಗಳು, ಮಾತುಗಳು ಅಕ್ಷರ ರೂಪ ಪಡೆಯಲಿ. ಇದರಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ. ಯಾವುದೇ ಒತ್ತಡವಿಲ್ಲದೆ ನೀವು ನೆಮ್ಮದಿಯಿಂದ ಬದುಕಬಹುದು. ಅಲ್ಲದೆ, ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗುವುದರಿಂದ ಮಾನಸಿಕ ಕಾಯಿಲೆಗಳು ನಿಮ್ಮಿಂದ ದೂರವಾಗುತ್ತವೆ. ಬರವಣಿಗೆಯ ಕೌಶಲ ವೃದ್ಧಿಗಾಗಿ…
ಬರವಣಿಗೆ ನಮ್ಮ ಸಂಪತ್ತು. ಆದರೆ, ಫೇಸುºಕ್, ವಾಟ್ಸಾಪ್ ನಮ್ಮ ಬರವಣಿಗೆಯಲ್ಲ , ಇದರಲ್ಲಿ ಬರೆದ ಬರವಣಿಗೆಯಿಂದ ನೀವು ಯಾವ ಅನುಕೂಲವನ್ನೂ ಪಡೆಯಲಾರಿರಿ. ಡೈರಿ ಬರೆಯುವುದರಿಂದ ನಿಮ್ಮ ಬರವಣಿಗೆಯ ಕೌಶಲ ವೃದ್ಧಿಸುವ ಜೊತೆಗೆ ಅಕ್ಷರದ ಮತ್ತು ಪದ ಸಂಪತ್ತು ಹೆಚ್ಚಾಗುತ್ತದೆ. ನಿರಂತರ ಬರವಣಿಗೆಯಿಂದ ನಮ್ಮ ಬರವಣಿಗೆಯ ವೇಗ ಹೆಚ್ಚುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
Related Articles
ನೀವು ಡೈರಿ ಬರೆಯುತ್ತೀರಿ ಎಂದಾದರೆ ನಿಮಗೆ ಏಕಾಗ್ರತೆ ಒಲಿದಿದೆ ಎಂದೆ ತಿಳಿಯಿರಿ. ನೀವು ರಾತ್ರಿ ಮಲಗುವ ಮುನ್ನ ಡೈರಿ ಬರೆಯುವಾಗ ನಿಮ್ಮ ಮನಸ್ಸು ಶಾಂತಸ್ಥಿತಿಯನ್ನು ಹೊಂದಿರುತ್ತದೆ. ನಿಮ್ಮ ಮನಸ್ಸಿನ ಒತ್ತಡಗಳೆಲ್ಲ ಅಲ್ಲಿ ಮಾಯವಾಗಿ ಬೀಡುತ್ತದೆ. ನೀವು ಏಂಕಾತದಲ್ಲಿ ಡೈರಿ ಬರೆಯುವುದರಿಂದ ನಿಮ್ಮ ಮನಸ್ಸು ಏಕಾಗ್ರತೆ ಯನ್ನು ಹೊಂದುತ್ತದೆ. ಇದರಿಂದ ನೀವು ನಿತ್ಯವೂ ಹಸನ್ಮುಖೀಯಾಗಿ ಶಾಂತರೀತಿಯಲ್ಲಿ ಕೆಲಸ ಮಾಡಬಹುದು.
Advertisement
ತಪ್ಪುಗಳನ್ನು ಅರಿಯಲು…ನೀವು ಬರೆದ ಡೈರಿಯನ್ನು ಒಮ್ಮೆ ಫ್ರೀ ಟೈಮ್‌ನಲ್ಲಿ ಓದಿ ಆಗ ನಿಮಗಾಗುವ ಅನುಭವ ಅದ್ಭುತ ಎನ್ನಬಹುದು. ಡೈರಿ ಬರೆಯುವಾಗ ನೀವು ಎಲ್ಲಾ ವಿಷಯವನ್ನು ಬರೆದಿಡುತ್ತೀರಿ. ಈ ವಿಷಯವನ್ನು ನೀವು ಓದಿದಾಗ ನಿಮ್ಮ ತಪ್ಪುಗಳು ನಿಮಗೆ ತಿಳಿಯುತ್ತವೆ. ಮುಂದೆ ಜೀವನದಲ್ಲಿ ಈ ತಪ್ಪುಗಳನ್ನು ಎಂದೂ ಮಾಡುವುದಿಲ್ಲ ಅಲ್ಲದೆ, ಕೆಲವೊಂದು ಘಟನೆಗಳು ನಮ್ಮ ಜೀವನದಲ್ಲಿ ಪದೇ ಪದೇ ನಡೆಯುತ್ತಿರುತ್ತವೆ. ಆದರೆ, ಇದರ ಮೂಲ ನಮಗೆ ತಿಳಿಯುವುದಿಲ್ಲ. ಈ ರೀತಿ ಡೈರಿ ಬರೆದು ಓದುವುದರಿಂದ ನಮ್ಮ ಜೀವನದಲ್ಲಿ ತಪ್ಪುಗಳನ್ನು ತಡೆಯಬಹುದು. ನೆನಪುಗಳ ಜೀವಂತಿಕೆಗೆ…
ಡೈರಿಯಲ್ಲಿ ನೀವು ನಿತ್ಯವು ಬರೆದ ಘಟನೆಗಳನ್ನು ಮುಂದೆ ಓದಿದಾಗ ನಿಮಗೆ ಒಂದು ಸುಂದರ ಅನುಭವ ಸಿಗುತ್ತದೆ. ಕೆಲವೊಂದು ಘಟನೆಗಳನ್ನು ಮತ್ತು ಕೆಲವೊಂದು ವ್ಯಕ್ತಿಗಳನ್ನು ಮರೆಯುತ್ತಿರುತ್ತೇವೆ. ಆದರೆ ಡೈರಿಯಲ್ಲಿ ಅಕ್ಷರ ರೂಪ ಪಡೆದ ಇಂತಹ ಘಟನೆಗಳು ಮತ್ತು ವ್ಯಕ್ತಿಗಳನ್ನು ನಾವು ಮರೆಯುವುದಿಲ್ಲ. ಇಂತಹ ಸಂದರ್ಭಗಳನ್ನು ನಾವು ಬಿಡುವಿನ ವೇಳೆಯಲ್ಲಿ ಓದಿದಾಗ ನಾವು ಹಳೆಯ ನೆನಪುಗಳಿಗೆ ಹೋಗುತ್ತೇವೆ. ಅಕ್ಷರಗಳು ನೀಡುವ ಅನುಭವವೇ ಅದ್ಭುತ ಅಲ್ಲವೆ? ಏಕಾಂಗಿತನದ ನಿವಾರಣೆಗಾಗಿ…
ನೀವು ಏಕಾಂಗಿ ಎಂದು ಕೊರಗುತ್ತಿದ್ದರೆ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ . ಏಕೆಂದರೆ, ಏಕಾಂಗಿ, ಒಂಟಿಜೀವ ಎಂಬ ಭಾವನೆಯಲ್ಲಿ ಕೊರಗುತ್ತಿದ್ದರೆ ಹಲವು ಮಾನಸಿಕ ಖಾಯಿಲೆ ಖಜಾನೆಯನ್ನೇ ಹೊತ್ತು ತರುತ್ತದೆ. ಈ ಸಮಸ್ಯೆಯಿಂದ ನೀವು ದೂರವಾಗಲು ಡೈರಿ ಸಹಾಯಕವಾಗುತ್ತದೆ. ರಾತ್ರಿ ಮಲಗುವ ಮುನ್ನ ಡೈರಿಯಲ್ಲಿ ನಿಮ್ಮ ಆ ದಿನದ ಅನುಭವ ಮತ್ತು ಹೇಳದೆ ಉಳಿದ ಮಾತುಗಳನ್ನು ಬರೆಯಿರಿ ಡೈರಿಯು ನಿಮಗೆ ಒಬ್ಬ ಸ್ನೇಹಿತನಾಗುತ್ತಾನೆ. ನಿಮ್ಮ ಮಾನಸಿಕ ಭಾವನೆಗಳು ಅಕ್ಷರ ರೂಪದಲ್ಲಿ ಹೊರಹೊಮ್ಮುವುದರಿಂದ ನೀವು ಫುಲ್ ರಿಲ್ಯಾಕ್ಸ್Õ ಅಗುತ್ತೀರಿ. ಇದರಿಂದ ನಿಮ್ಮ ಏಕಾಂಗಿಯ ಭಾವನೆ ದೂರವಾಗಲು ಸಾಧ್ಯವಾಗುತ್ತದೆ. – ಕಾವ್ಯಾ ಎಚ್. ಎನ್.