Advertisement

ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್‌:  ಸಾಹಾ ಹೊರಕ್ಕೆ

06:00 AM May 30, 2018 | Team Udayavani |

ಹೊಸದಿಲ್ಲಿ: ಅಫ್ಘಾನಿಸ್ಥಾನ ತಂಡದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐತಿಹಾಸಿಕ ಟೆಸ್ಟ್‌ ಪಂದ್ಯಕ್ಕೆ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹಾ ಅಲಭ್ಯರಾಗಲಿದ್ದಾರೆ. 

Advertisement

ಸಾಹಾ ಪ್ರಸ್ತುತ ಗಾಯದಿಂದ ಬಳಲುತ್ತಿದ್ದು ಅವರಿಗೆ ವಿಶ್ರಾಂತಿ ಅಗತ್ಯತೆ ಇದೆ ಎಂದು ಬಿಸಿಸಿಐ ಪ್ರಕಟನೆಯಲ್ಲಿ ತಿಳಿಸಿದೆ. ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಸಾಹಾ ಪ್ರತಿನಿಧಿಸಿದ್ದರು. 

ಇವರು ಕೋಲ್ಕತಾ ನೈಟ್‌ ರೈಡರ್ ತಂಡದ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್‌ ನಡೆಸುತ್ತಿದ್ದಾಗ ಶಿವಂ ಮಾವಿ ಎಸೆತದಲ್ಲಿ ಇವರ ಹೆಬ್ಬೆರಳಿಗೆ ಚೆಂಡು ಬಡಿದು ಗಾಯವಾಗಿತ್ತು. ಗಾಯದಿಂದ ಚೇತರಿಸಿಕೊಳ್ಳಲು ಮುಂದಿನ 5-6 ವಾರಗಳ ಆವಶ್ಯಕತೆ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next