Advertisement
ಮಳೆಗಾಲದಲ್ಲಿ ಹೊಂಡ ಬೀಳುವುದು ಸಾಮಾನ್ಯ. ಆದರೆ ತಾತ್ಕಾಲಿಕ ಹೊಂಡ ಮುಚ್ಚಲೂ ಸಂಬಂಧಪಟ್ಟ ಸಂಸ್ಥೆ ಮುಂದಾಗಿಲ್ಲ. ಕಾರಿಡಾರ್ ಪ್ರದೇಶದ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿ ಸಣ್ಣ ವಾಹನಗಳು ಚಲಿಸಲಾಗದಂತಹ ಸ್ಥಿತಿ ಉಂಟಾಗಿದೆ.
ಬೃಹತ್ ಹೊಂಡ ತಪ್ಪಿಸುವ ಭರದಲ್ಲಿ ವಾಹನಗಳು ದಿಢೀರನೇ ತಿರುಗಿಸುವ ಕಾರಣ ಎಲ್ಲಿ ಅಪಘಾತವಾಗುದೋ ಎಂದು ಭೀತಿ ಪಡುವಂತಾಗಿದೆ. ಈ ಪ್ರದೇಶಗಳು ತಿರಿವಿನಿಂದ ಕೂಡಿದ್ದು, ಹೊಂಡದ ಅರಿವಿಲ್ಲದೆ ಅಪಾಯ ಮೈಮೇಲೆ ಎಳೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಸಂಬಂಧಪಟ್ಟವರು ತತ್‌ಕ್ಷಣ ಗಮನಿಸಿ ಕ್ರಮಕೈಗೊಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಫೆ. 8ರಂದು ಪ್ರತಿಭಟನೆ
ಈ ಕಾರಿಡಾರ್ ಮಾರ್ಗವಾಗಿ ಎಂಆರ್‌ಪಿಎಲ್, ಜೋಕಟ್ಟೆ, ಎಸ್‌ಇಝಡ್ ಕಾಲನಿಗೆ ನಿತ್ಯ ಸಾವಿರಾರು ಜನ ಓಡಾಟ ನಡೆಸುತ್ತಿದ್ದಾರೆ. ನೂರಾರು ವಾಹನಗಳ ಸಂಚರಿಸುತ್ತಿವೆ. ಅಭಿವೃದ್ಧಿಗಾಗಿ ಭೂಮಿ ತ್ಯಾಗ ಮಾಡಿದವರಿಗೆ ಎಸ್‌ಇಝಡ್ ಉತ್ತಮ ಸೌಲಭ್ಯ ಕಲ್ಪಿಸಬೇಕಾಗಿದೆ. ಸಂಬಂಧಪಟ್ಟ ಇಲಾಖೆಯ ಕಣ್ತೆರೆಸುವ ಸಲುವಾಗಿ ಫೆ. 8ರಂದು ಪ್ರತಿಭಟನೆ
ನಡೆಸಲಾಗುವುದು ಎಂದು ಪ್ರಜಾಸತ್ತಾತ್ಮಕ ಫೆಡರೇಶನ್ ಮುಖಂಡ ಇಮ್ತಿಯಾಝ್ ಹೇಳಿದ್ದಾರೆ.