Advertisement

ವನಿತಾ ಪ್ರೀಮಿಯರ್‌ ಲೀಗ್‌: ಯುಪಿ ವಾರಿಯರ್ಸ್‌ಗೆ ರೋಚಕ ಗೆಲುವು

11:48 PM Mar 05, 2023 | Team Udayavani |

ಮುಂಬೈ: ಕಿರನ್‌ ನಾವ್‌ಗಿರೆ ಮತ್ತು ಗ್ರೇಸ್‌ ಹ್ಯಾರೀಸ್‌ ಅವರ ಅತ್ಯಮೂಲ್ಯ ಅರ್ಧಶತಕದ ನೆರವಿನಿಂದ ಯುಪಿ ವಾರಿಯರ್ಸ್‌ ತಂಡ, ಗುಜರಾತ್‌ ಜೈಂಟ್ಸ್‌ ವಿರುದ್ಧ 3 ವಿಕೆಟ್‌ಗಳ ಗೆಲುವು ಸಾಧಿಸಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ್ದ ಗುಜರಾತ್‌ ಜೈಂಟ್ಸ್‌ ತಂಡ ಹಾರ್ಲೀನ್‌ ಡಿಯೋಲ್‌ ಅವರ 46 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 169 ರನ್‌ಗಳಿಸಿತು. ಈ ಮೊತ್ತ ಬೆನ್ನತ್ತಿದ ಯುಪಿ ವಾರಿಯರ್ಸ್‌ ತಂಡ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.
ತಂಡದ ಸೋಲಿನಲ್ಲೂ ಅತ್ಯದ್ಭುತ ಪ್ರದರ್ಶನ ನೀಡಿದವರು ಗುಜರಾತ್‌ ತಂಡದ ಬೌಲರ್‌ ಕಿಮ್‌ಗ್ರಾತ್‌. ಇವರು 36 ರನ್‌ಗೆ 5 ವಿಕೆಟ್‌ ಪಡೆದು ಯುಪಿ ವಾರಿಯರ್ಸ್‌ಗೆ ಆತಂಕ ಹುಟ್ಟಿಸಿದ್ದರು. ಅಲ್ಲದೆ, ಯುಪಿ ಪರ ನಾವ್‌ಗಿರೆ ಮತ್ತು ಹ್ಯಾರೀಸ್‌ ಅವರಿಬ್ಬರೇ ಉತ್ತಮವಾಗಿ ಆಡಿದ್ದು. ಅದರಲ್ಲೂ ಹ್ಯಾರೀಸ್‌ ಅವರು ಕೇವಲ 26 ಎಸೆತಗಳಲ್ಲಿ 59 ರನ್‌ ಬಾರಿಸಿ ಗೆಲುವಿಗೆ ನೆರವಾದರು.

Advertisement

Udayavani is now on Telegram. Click here to join our channel and stay updated with the latest news.

Next