Advertisement
ಗೆಲ್ಲಲು 195 ರನ್ ಗಳಿಸುವ ಕಠಿನ ಗುರಿ ಪಡೆದ ಆರ್‌ಸಿಬಿ ತಂಡವು ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ಹೋರಾಟದ ಅರ್ಧಶತಕದ ಬಳಿಕ ಕುಸಿತ ಕಂಡಿದ್ದರಿಂದ ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟಿಗೆ 169 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಈ ಮೊದಲು ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ವಿಕೆಟಿಗೆ 194 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
Related Articles
ಈ ಮೊದಲು ಶಫಾಲಿ ವರ್ಮ ಅವರ ಅರ್ಧಶತಕ ಮತ್ತು ಅಲಿಸ್ ಕ್ಯಾಪ್ಸೆ ಅವರ 46 ರನ್ ನೆರವಿನಿಂದ ಡೆಲ್ಲಿ ತಂಡವು ಉತ್ತಮ ಮೊತ್ತ ಪೇರಿಸುವಂತಾಯಿತು. ಶಫಾಲಿ ಮತ್ತು ಕ್ಯಾಪ್ಸೆ ಅವರು ದ್ವಿತೀಯ ವಿಕೆಟಿಗೆ 82 ರನ್ನುಗಳ ಜತೆಯಾಟ ನಡೆಸಿದ್ದರು. ಇನ್ನಿಂಗ್ಸ್‌ನ ಅಂತ್ಯದಲ್ಲಿ ಮಾರಿಜಾನೆ ಕ್ಯಾಪ್ ಮತ್ತು ಜೆಸ್ ಜೋನಾಸೆನ್ ಬಿರುಸಿನ ಆಟವಾಡಿ ಐದನೇ ವಿಕೆಟಿಗೆ 58 ರನ್ ಪೇರಿಸಿದ್ದರು.
Advertisement
ಯುಪಿಗೆ ಗುಜರಾತ್ ಸವಾಲುಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಶುಕ್ರವಾರ ಚಿನ್ನಸ್ವಾಮಿಯಲ್ಲಿ ಮುಖಾಮುಖೀಯಾಗಲಿವೆ. ಪ್ರಸಕ್ತ ಕೂಟದಲ್ಲಿ ಎರಡೂ ತಂಡಗಳು ಮೊದಲ ಬಾರಿ ಹೋರಾಡುತ್ತಿವೆ. ಕಳೆದ ಬಾರಿಯ ಕೂಟದಲ್ಲಿ ಗುಜರಾತ್ ವಿರುದ್ಧ ಯುಪಿ ಮೇಲುಗೈ ಹೊಂದಿತ್ತು. ಪ್ರಸ್ತುತ ಕೂಟದಲ್ಲಿ ಯುಪಿ ಒಟ್ಟು ಮೂರು ಪಂದ್ಯಗಳನ್ನಾಡಿ 1 ಜಯ ಸಾಧಿಸಿ, 2 ಪಂದ್ಯಗಳಲ್ಲಿ ಸೋತಿದೆ. ಗುಜರಾತ್ ಎರಡು ಪಂದ್ಯಗಳನ್ನಾಡಿ ಎರಡರಲ್ಲೂ ಸೋತಿದೆ. ಗುಜರಾತ್ ಪರ ಹರ್ಲೀನ್ ದೇವಲ್ ಕಳೆದ 10 ಪಂದ್ಯಗಳಲ್ಲಿ 232 ರನ್, ಆಶ್ಲೇ ಗಾರ್ಡನರ್ 10 ಪಂದ್ಯಗಳಲ್ಲಿ 226 ರನ್ ಗಳಿಸಿದ್ದಾರೆ. ತಂಡದ ಪರ ಗಾರ್ಡನರ್ ಬೌಲಿಂಗ್‌ನಲ್ಲೂ ಮಿಂಚಿ 11 ವಿಕೆಟ್ ಪಡೆದಿದ್ದಾರೆ. ತನುಜಾ ಕನ್ವರ್ 8 ವಿಕೆಟ್ ಗಳಿಸಿದ್ದಾರೆ.