Advertisement

ಸಭೆಗೆ ನಿಮ್ಮನ್ನು ಆಹ್ವಾನಿಸಿರಲಿಲ್ಲವೇ?

09:49 AM May 12, 2020 | Lakshmi GovindaRaj |

ಮೈಸೂರು: ನಗರದ ಸೀವೇಜ್‌ ಫಾರ್ಮ್ನಲ್ಲಿನ ತ್ಯಾಜ್ಯ ವಿಲೇವಾರಿ ಹೊಸ ಯೋಜನೆಗೆ ಶಾಸಕ ಎಸ್‌.ಎ.ರಾಮದಾಸ್‌ ಎತ್ತಿರುವ ಅಪಸ್ವರಕ್ಕೆ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದು, ಯೋಜನೆ ಜಾರಿಗೂ ಮುನ್ನ ಸಾರ್ವಜನಿಕ ಅಭಿಪ್ರಾಯ  ಸಂಗ್ರಹಿಸಬೇಕು ಎಂದು ಶಾಸಕರು ಹೇಳುತ್ತಾರೆ. ಆದರೆ, ಹಿಂದಿನ ಉಸ್ತುವಾರಿ ಸಚಿವರು ನಡೆಸಿದ್ದ ಸಭೆಗೆ ಶಾಸಕ ಜಿಟಿಡಿ, ಎಲ್.ನಾಗೇಂದ್ರ ಬಂದಿದ್ದರ ಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Advertisement

ಸೀವೇಜ್‌ ಫಾರ್ಮ್ನಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಕರೆಯುವ ಹಂತ ಬಾಕಿಯಲ್ಲಿದ್ದು, ಈ ವೇಳೆ ಶಾಸಕ ರಾಮದಾಸ್‌, ಈ ಬಗ್ಗೆ ನನಗೇನು ಗೊತ್ತಿಲ್ಲ. ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಯೋಜನೆ ಜಾರಿಯಾಗುವ ಮುನ್ನ ಜನರಿಗೆ ಏನೆಂಬುದು ತಿಳಿಯಬೇಕು ಎಂದು ಅಪಸ್ವರ ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್‌ ಸಿಂಹ, ಸೀವೇಜ್‌ ಫಾರ್ಮ್ಗೆ ಆಗಿನ ಉಸ್ತುವಾರಿ ಸಚಿವ ಸೋಮಣ್ಣನವರ ಮುಂದಾಳತ್ವದಲ್ಲಿ 2019 ನ.5ರಂದು ಭೇಟಿ ನೀಡಲಾಗಿತ್ತು.

ಈ ವೇಳೆ ಶಾಸಕ ರಾಮದಾಸ್‌ ಅವರಿಗೆ ಸೋಮಣ್ಣನವರು ಖು¨ªಾಗಿ ಆಹ್ವಾನಿಸಿದ್ದರು. ಆದರೆ ಅವರು ಬರಲಿಲ್ಲ. ಬಳಿಕ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಸೋಮಣ್ಣನವರು ಸ್ಥಳದಲ್ಲೇ ಡೀಸಿ ಅಭಿರಾಮ್‌ ಶಂಕರ್‌  ನೇತೃತ್ವದಲ್ಲಿ ಜನಪ್ರತಿನಿಧಿಗಳ ನ್ನೊಳಗೊಂಡ ಸಮಿತಿ ರಚನೆ ಮಾಡಿ, ನ.25ರೊಳಗೆ ವರದಿ ನೀಡುವಂತೆ ಸೂಚಿಸಿದರು.

ತದನಂತರ 2020 ಜ.3ರಂದು ನಡೆಯುವ ಕೆಡಿಪಿ ಸಭೆಯೊಳಗೆ ಅಂತಿಮ ತೀರ್ಮಾನ ವಾಗಬೇಕು. ಅಷ್ಟರಲ್ಲಿ  ಪ್ಲಾಂಟ್‌ಗೆ ಪ್ರತ್ಯಕ್ಷ ಭೇಟಿ ನೀಡಿ ಅಭಿಪ್ರಾಯ ತಿಳಿಸಬೇಕು ಎಂದು ಸೋಮಣ್ಣನವರು ಹೇಳಿದಾಗ, ಮೇಯರ್‌, ಡೀಸಿ, ಪಾಲಿಕೆ ಆಯುಕ್ತರ ತಂಡ ಡಿ.31ರಂದು ನಾಗ್ಪುರ ಪ್ಲಾಂಟ್‌ಗೆ ಹೋಗಿ ಜ.3ರ ಸಭೆಯಲ್ಲಿ ಸಕಾರಾತ್ಮಕ  ಅಭಿಪ್ರಾಯಕೊಟ್ಟಿದ್ದರು. ಅಂದು ನಡೆದ ಕೆಡಿಪಿ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಜಿ.ಟಿ.ದೇವೇಗೌಡ ಇದೇ ಸೂಕ್ತ ಯೋಜನೆ, ವಿಳಂಬ ಮಾಡದೇ ಮುಂದುವರಿಯಿರಿ. ಜನಕ್ಕೆ ದುರ್ವಾಸನೆ ಯಿಂದ ಕೂಡಲೇ ಮುಕ್ತಿಕೊಡಬೇಕು,

ನಾನೂ  ನಿಮ್ಮೊಂದಿ  ಗಿದ್ದೇನೆ ಎಂದು ಬೆಂಬಲಿಸಿದ್ದರು. ಜೊತೆಗೆ ಚಾಮರಾಜ ಕ್ಷೇತ್ರದ ಶಾಸಕ ಎಲ…. ನಾಗೇಂದ್ರ ಅವರೂ ಬೆಂಬಲಿಸಿದ್ದರು. ತದನಂತರ 3 ತಿಂಗಳ ಕಾಲ ಸತತವಾಗಿ ನಗರಾಭಿವೃದಿಟಛಿ ಖಾತೆ, ಹಣಕಾಸು ಇಲಾಖೆಗೆ ಅಲೆದು  ಕಾಮಗಾರಿ ಆರಂಭ ಹಂತಕ್ಕೆ ತಂದಿದ್ದೇವೆ. ಐದೇ ತಿಂಗಳಲ್ಲಿ ಸಮಸ್ಯೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಕ್ಕೆ ಶಾಸಕರು ನಮಗೇನು ತಿಳಿದಿಲ್ಲ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next