Advertisement

ಬುಮ್ರಾ ಬೌಲಿಂಗ್‌ ಎದುರಿಸಬೇಕು: ಗರ್ಗ್‌

08:20 AM May 09, 2020 | Sriram |

ಹೊಸದಿಲ್ಲಿ: ಭಾರತದ ಅಂಡರ್‌-19 ವಿಶ್ವಕಪ್‌ ತಂಡದ ನಾಯಕ ಪ್ರಿಯಂ ಗರ್ಗ್‌ ತಮ್ಮ ಬಯಕೆಯೊಂದನ್ನು ತೋಡಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅವರಿಗೆ ಜಸ್‌ಪ್ರೀತ್‌ ಬುಮ್ರಾ ಎಸೆತಗಳನ್ನು ಎದುರಿಸಬೇಕಂತೆ!

Advertisement

ಈ ಸಲ ಐಪಿಎಲ್‌ ನಡೆಯುತ್ತದೋ ಇಲ್ಲವೋ ಎಂಬುದು ಬೇರೆ ಮಾತು. ಆದರೆ ಪ್ರಿಯಂ ಗರ್ಗ್‌ ಅವರನ್ನು ಸನ್‌ರೈಸರ್ ಹೈದರಾಬಾದ್‌ 1.9 ಕೋಟಿ ರೂ.ಗೆ ಖರೀದಿಸಿದೆ. ಇನ್ನೊಂದೆಡೆ ಜಸ್‌ಪ್ರೀತ್‌ ಬುಮ್ರಾ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದಾರೆ. ಹೀಗಾಗಿ ಇವರಿಬ್ಬರ ಮುಖಾಮುಖೀ ಆಗುವ ಸಾಧ್ಯತೆ ಇದ್ದೇ ಇದೆ.

“ಬುಮ್ರಾ ಓರ್ವ ಅದ್ಭುತ ಬೌಲರ್‌. ಅವರ ಯಾರ್ಕರ್ ಘಾತಕ. ಬುಮ್ರಾ ಬೌಲಿಂಗ್‌ ಎದುರಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣಬಹುದು ಎಂಬುದು ನನ್ನ ನಂಬಿಕೆ’ ಎಂದು ಗರ್ಗ್‌ ಹೇಳಿದರು.

ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ ತನಕ ಕೊಂಡೊಯ್ದ ಪ್ರಿಯಂ ಗರ್ಗ್‌ ಬ್ಯಾಟಿಂಗ್‌ ಮೂಲಕ ಸುದ್ದಿಯಾಗಿರಲಿಲ್ಲ. 22.66ರ ಸರಾಸರಿಯಲ್ಲಿ ಗಳಿಸಿದ್ದು 68 ರನ್‌ ಮಾತ್ರ. ಆದ್ದರಿಂದ ಅವರು ಐಪಿಎಲ್‌ ಪಂದ್ಯಾವಳಿಯನ್ನು ಎದುರು ನೋಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next