Advertisement

cocaine Seized: ವಿದೇಶಿ ಪ್ರಜೆಯಿಂದ 30 ಕೋಟಿ ಮೌಲ್ಯದ 3 ಕೆ.ಜಿ. ಕೊಕೇನ್‌ ವಶ

12:13 PM Jul 15, 2024 | Team Udayavani |

ಬೆಂಗಳೂರು: ಕಂದಾಯ ನಿರ್ದೇಶನಾಲಯದ ಗುಪ್ತಚರ(ಡಿಆರ್‌ಐ)ದ ಬೆಂಗಳೂರು ವಿಭಾಗದ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿದೇಶದಿಂದ ಅಕ್ರಮವಾಗಿ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಕೀನ್ಯಾ ಮೂಲದ ಪ್ರಜೆಯನ್ನು ಬಂಧಿಸಿದ್ದು, ಆತನಿಂದ ಬರೋಬರಿ 30 ಕೋಟಿ ರೂ. ಮೌಲ್ಯದ 3 ಕೆ.ಜಿ. ಕೋಕೇನ್‌ ಜಪ್ತಿ ಮಾಡಿದ್ದಾರೆ. ಇದು ಈ ವರ್ಷದಲ್ಲಿ ಡಿಆರ್‌ಐ ಅಧಿಕಾರಿಗಳು ಮಾಡಿರುವ ಬಹುದೊಡ್ಡ ಕಾರ್ಯಾಚರಣೆ ಎಂಬುದು ತಿಳಿದು ಬಂದಿದೆ.

Advertisement

ಕೀನ್ಯಾದ ಒದಿಹಾಂಬೋ ಮಾರ್ಗನ್‌ ಬೈರನ್‌(24) ಬಂಧಿತ. ಕಳೆದ ಶುಕ್ರವಾರ ಆರೋಪಿ ಕತಾರ್‌ನ ದೋಹಾದಿಂದ ಇಂಡಿಗೋ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಪ್ರವಾಸಿಗರ ಲಗೇಜ್‌ ಚೆಕ್‌ ಮಾಡಲಾಗುತ್ತಿತ್ತು. ಈ ವೇಳೆ ಆರೋಪಿಯ ಲಗೇಜ್‌ ಬ್ಯಾಗ್‌ನ ಕೆಳ ಭಾಗ ಉದಿಕೊಂಡಿತ್ತು. ಆಗ ಅನುಮಾನಗೊಂಡ ಡಿಆರ್‌ಐ ಅಧಿಕಾರಿಗಳು, ಲಗೇಜ್‌ ಬ್ಯಾಗ್‌ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ ಪೇಸ್ಟ್‌ ಮತ್ತು ಪೌಡರ್‌ ಮಾದರಿಯಲ್ಲಿ ಸಣ್ಣ ಸಣ್ಣ ನಾಲ್ಕೈದು ಪ್ಯಾಕೆಟ್‌ಗಳು ಕಂಡು ಬಂದಿದೆ.

ಅದನ್ನು ಪರೀಕ್ಷಾಲಯದಲ್ಲಿ ಪರೀಕ್ಷಿಸಿದಾಗ ಕೋಕೇನ್‌ ಎಂಬುದು ಗೊತ್ತಾಗಿದೆ. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ ಈ ಬಗ್ಗೆ ತಿಳಿದಿಲ್ಲ ಎಂದೆಲ್ಲ ನಾಟಕವಾಡಿದ್ದ. ಬಳಿಕ ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಕಳ್ಳ ಸಾಗಾಣಿಕೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯು ವಿದೇಶದಿಂದ ಅಕ್ರಮವಾಗಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಆದರೆ, ಈತ ನೇರವಾದ ಪೆಡ್ಲರ್‌ ಅಲ್ಲ. ಈತನ ಹಿಂದೆ ದೊಡ್ಡ ಜಾಲವೇ ಇದೆ. ಈತ ಬೆಂಗಳೂರಿನಲ್ಲಿ ಯಾರಿಗೆ ತಲುಪಿಸಲು ಬಂದಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ. ಆದರಿಂದ ಈತನ ಬಗ್ಗೆ ಎಫ್ಆರ್‌ಆರ್‌ಒ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿನ ವಿದೇಶಿಗರಿಗೆ ಮಾರಾಟಕ್ಕೆ ತಂದಿದ್ದ?:

Advertisement

ನೈಜಿರಿಯಾ, ಕೀನ್ಯಾ ದಕ್ಷಿಣ ಆಫ್ರಿಕಾದ ಕೆಲ ದೇಶದಿಂದ ಪ್ರವಾಸಿ, ವಿದ್ಯಾರ್ಥಿ, ವ್ಯವಹಾರಿಕಾ ವೀಸಾ ನೆಪದಲ್ಲಿ ಬೆಂಗಳೂರಿಗೆ ಬಂದು ಮಾದಕ ವಸ್ತು ಮಾರಾಟ ದಂಧೆಯಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಬಂಧನಕ್ಕೊಳಗಾಗಿರುವ ಕೀನ್ಯಾ ಪ್ರಜೆ ನಗರದಲ್ಲಿರುವ ವಿದೇಶಿ ಪ್ರಜೆಗಳಿಗೆ ಡ್ರಗ್ಸ್‌ ಪೂರೈಕೆ ಮಾಡಲು ಬಂದಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಆರ್‌ಐ ಮೂಲ ಗಳು ತಿಳಿಸಿವೆ. ಇದೇ ಜು.5ರಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ತಮಿಳುನಾಡಿನ ಇಬ್ಬರು ಮಹಿಳಾ ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಈ ಮಹಿಳೆಯರ ವ್ಯಾನಿಟಿ ಬ್ಯಾಗ್‌ಗಳ ಪರಿಶೀಲಿಸಿದಾಗ 3 ಕೋಟಿ ರೂ. ಮೌಲ್ಯದ 3 ಕೆ.ಜಿ. ಹೈಡ್ರೋಪೋನಿಕ್‌ ಎಂಬ ಮಾದಕ ವಸ್ತುವಿನ ಕಚ್ಚಾ ಪದಾರ್ಥ ಪತ್ತೆಯಾ ಗಿತ್ತು. ಈ ಮಹಿಳೆಯರ ವಿಚಾರಣೆಯಲ್ಲಿ ಅಪರಿ ಚಿತನೊಬ್ಬ, ಮೀಸಾ ಪಾಸ್‌ ಪೋರ್ಟ್‌, ವಸತಿ ಹೊರತುಪಡಿಸಿ ತಲಾ 25 ಸಾವಿರ ರೂ. ನೀಡಿ ದ್ದಾಗಿ ಹೇಳಿದ್ದಾರೆ. ಸದ್ಯ ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದು,  ಪೆಡ್ಲರ್‌ನ ಮಾಹಿತಿ ಪಡೆಯಲಾಗುತ್ತೆಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next