Advertisement

ಹದಗೆಟ್ಟ  ದೇವರಗುಂಡಿ ರಸ್ತೆ 

12:28 PM Jun 25, 2018 | Team Udayavani |

ಮಡಂತ್ಯಾರು: ಹಲವು ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸರಕಾರಕ್ಕೆ ಬೇಡಿಕೆ ಇಡಲಾಗಿದೆ. ಸರಕಾರಕ್ಕೆ ಕೊಟ್ಟ ವಿವರದಲ್ಲಿ ಉಲ್ಲೇಖೀಸಿರುವ ರಸ್ತೆಯಲ್ಲಿ ಮಚ್ಚಿನ-ನಾಳ ಸಂಪರ್ಕ ರಸ್ತೆ ಕೂಡ ಒಂದಾಗಿದೆ. ದೇವರಗುಂಡಿ ನಾಳ ರಸ್ತೆ ಇದುವರೆಗೆ ಅಭಿವೃದ್ಧಿಯಾಗದೆ ಜನ ಮಣ್ಣಿನ ರಸ್ತೆಯನ್ನೇ
ಬಳಸುತ್ತಿದ್ದಾರೆ. ಬೇಸಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು. ಈ ಭಾಗದ ಜನರು ವರ್ಷಪೂರ್ತಿ ಕಷ್ಟ ಅನುಭವಿಸುತ್ತಿದ್ದಾರೆ.

Advertisement

ತಾಲೂಕು ಕಚೇರಿಗೆ ಸಮೀಪ ರಸ್ತೆ
ಮಚ್ಚಿನ ಗ್ರಾಮ ಮತ್ತು ಒಡಿಳ್ನಾಳ ಗ್ರಾಮಗಳ ನಡುವೆ ಇರುವ ರಸ್ತೆ ಜನರ ನಿತ್ಯ ಓಡಾಟಕ್ಕೆ ಹೆಚ್ಚು ಅನುಕೂಲವಾಗಿದೆ. ಮಣ್ಣಿನ ರಸ್ತೆಯಾಗಿದ್ದರೂ ಜನ ಹೆಚ್ಚಾಗಿ ಈ ರಸ್ತೆಯ ಮೂಲಕ ಮಚ್ಚಿನ ಮೂಲಕ ಮಡಂತ್ಯಾರು, ಪುಂಜಾಲಕಟ್ಟೆ ತೆರಳುತ್ತಾರೆ. ಹಾಗೆಯೆ ಮಚ್ಚಿನ ಜನತೆಗೆ ಬೆಳ್ತಂಗಡಿ ತಾ| ಕಚೇರಿಗೆ ತೆರಳಲು ಇದು ಸಮೀಪ ರಸ್ತೆಯಾಗಿದೆ.

50ಕ್ಕೂ ಹೆಚ್ಚು ಮನೆಗಳಿಗೆ ಮುಖ್ಯ ರಸ್ತೆ
ದೇವರಗುಂಡಿ ರಸ್ತೆ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಮುಖ್ಯ ರಸ್ತೆಯಾಗಿದೆ. ಶಾಲಾ ಮಕ್ಕಳೂ ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. ಮಚ್ಚಿನ ಬ್ಯಾಂಕ್‌, ಹಾಲಿನ ಡೈರಿ, ಗ್ರಾ.ಪಂ., ಸೊಸೈಟಿಗೆ ಮಚ್ಚಿನಕ್ಕೆ ಬರಬೇಕು. ಸಮರ್ಪಕ ರಸ್ತೆ ಇಲ್ಲದೆ ಆಟೋ ಚಾಲಕರು ಕೂಡ ಬರಲು ಕೇಳದೆ ಸೊಸೈಟಿಯಿಂದ ಪಡಿತರವನ್ನು ಹೊತ್ತುಕೊಂಡೇ ಬರಬೇಕಾಗಿದೆ ಎನ್ನುತ್ತಾರೆ ಆ ಭಾಗದ ಜನರು

ತುರ್ತು ಕಾಮಗಾರಿ ಅವಶ್ಯ
ಪ್ರತೀ ಮಳೆಗಾಲಕ್ಕೂ ಇಲ್ಲಿಯ ಜನರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿಯಂತಾಗಿದೆ. ಪಂಚಾಯತ್‌ಗೆ ಮನವಿ ನೀಡಲಾಗಿದೆ. ಮೇಲ್ದರ್ಜೆಗೇರುವ ಭರವಸೆ ಇದೆ. ಜನರ ಓಡಾಟಕ್ಕಾಗಿ ತುರ್ತು ತಾತ್ಕಾಲಿಕ ಕಾಮಗಾರಿ ಅವಶ್ಯವಾಗಿದೆ ಎಂದು ಸ್ಥಳೀಯರಾದ ಶೈಲೇಶ್‌ ಪೆರ್ನಡ್ಕ ಆಗ್ರಹಿಸಿದ್ದಾರೆ.

ಬೇಕಿದೆ ಡಾಮರು ರಸ್ತೆ 
ಮಚ್ಚಿನದಿಂದ ನಾಳಕ್ಕೆ 7 ಕಿ.ಮೀ. ದೂರವಿದ್ದು, ಮಚ್ಚಿನದಿಂದ ದೇವರಗುಂಡಿ ವರೆಗೆ ಡಾಮರು ಇದೆ. ಅನಂತರ ಸುಮಾರು 3 ಕಿ.ಮೀ. ಮಣ್ಣಿನ ರಸ್ತೆ. ದೇವರಗುಂಡಿ ಕಟ್ಟೆ ಎಂಬಲ್ಲಿ ಮಣ್ಣಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಡೆದು ಹೋಗಲೂ ಆಗದ ಸ್ಥಿತಿಯಲ್ಲಿದೆ. ವಾಹನ ಸವಾರರು, ಪಾದಚಾರಿಗಳು ಸರ್ಕಸ್‌ ಮಾಡಿಕೊಂಡೇ ಹೋಗುವಂತಾಗಿದೆ. ಮಚ್ಚಿನದಿಂದ ದೇವರಗುಂಡಿ ವರೆಗೆ ಇರುವ ಡಾಮರು ರಸ್ತೆ ಕೂಡ ಕಿತ್ತು ಹೋಗಿದ್ದು , ಹೆಸರಿಗೆ ಮಾತ್ರ ಡಾಮರು ರಸ್ತೆಯಾಗಿದೆ. ಸಂಪೂರ್ಣ ಡಾಮರು ರಸ್ತೆ ಅಗತ್ಯವಾಗಿದೆ.

Advertisement

ತಾತ್ಕಾಲಿಕ ಕಾಮಗಾರಿ
ಕಳೆದ ಬಾರಿಯೂ ಸಮಸ್ಯೆಯಾಗಿತ್ತು. ಚರಂಡಿ ಮಾಡಿ ರಸ್ತೆಯಲ್ಲಿ ನೀರು ನಿಲ್ಲದಂತೆ ಮಾಡಲಾಗಿತ್ತು. ಮಣ್ಣಿನ ರಸ್ತೆಯಾದ ಕಾರಣ ಮಳೆಗಾಲದಲ್ಲಿ ಪುನಃ ಸಮಸ್ಯೆಯಾಗಿದೆ. ತಾತ್ಕಾಲಿಕ ಕಾಮಗಾರಿ ನಡೆಸಿ ಅನುಕೂಲ ಮಾಡಿಕೊಡುತ್ತೇವೆ.
– ಚಂದ್ರಶೇಖರ ಬಿ.ಎಸ್‌.
ಉಪಾಧ್ಯಕ್ಷರು, ಮಚ್ಚಿನ ಗ್ರಾ.ಪಂ. 

ಪ್ರಮೋದ್‌ ಬಳ್ಳಮಂಜ 

Advertisement

Udayavani is now on Telegram. Click here to join our channel and stay updated with the latest news.

Next