ಕಲಬುರಗಿ/ಆಳಂದ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಶಿವರಾತ್ರಿಯಂದು ಹಿಂದೂಗಳಿಗೆ ಪೂಜೆ ಸಲ್ಲಿಕೆಗೆ ನಗರದ ಹೈಕೋರ್ಟ್ ಪೀಠ ಅವಕಾಶ ನೀಡಿದೆ.
ಶ್ರೀರಾಮಸೇನೆ ಗೌರವಾಧ್ಯಕ್ಷ ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಹಿತ 15 ಜನರಿಗೆ ಅವಕಾಶ ನೀಡಿದೆ. ಶಿವರಾತ್ರಿ ದಿನ ಪೂಜೆಗೆ ಅವಕಾಶ ಕಲ್ಪಿಸಿರುವ ಹೈಕೋರ್ಟ್, ಪೂಜೆಗೆ ತೆರಳುವವರ ಹೆಸರನ್ನು ಮಾ.7ರಂದು ಸಲ್ಲಿಸುವಂತೆ ಸೂಚನೆ ನೀಡಿದೆ.
ಈ ನಡುವೆ ಶಿವರಾತ್ರಿ ದಿನ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಸಲ್ಲಿಕೆಗೆ ಅವಕಾಶ ನೀಡುವಂತೆ ಜಿÇÉಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಮಾ.4ರಂದು ವಿಚಾರಣೆ ನಡೆಸಿದ ನ್ಯಾಯಾಲಯ, ಈ ವಿಷಯ ಹೈಕೋರ್ಟ್ ನಲ್ಲಿದ್ದು, ಅಲ್ಲಿಗೆ ಹೋಗಲು ತಿಳಿಸಿತ್ತು.
ಶಿವರಾತ್ರಿ ನಿಮಿತ್ತ ಶ್ರೀರಾಮ ಸೇನೆ ಕಾರ್ಯಕರ್ತರು ಆಂದೋಲಾದ ಶ್ರೀ ಕರುಣೇಶ್ವರ ಮಠದ ಪೀಠಾಧಿ ಪತಿ ಸಿದ್ಧಲಿಂಗ ಸ್ವಾಮೀಜಿ ಸಲಹೆ ಮೇರೆಗೆ ಬುಧವಾರ ಶಿವಮಾಲೆ ಧರಿಸಿದ್ದಾರೆ.