Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಅದನ್ನು ನಾವು ಜನರಿಗೆ ಸರಿಯಾಗಿ ತಲುಪಿಸಬೇಕಿತ್ತು. ಆದರೆ ಇನ್ನು ಅಂತಿಮ ಫಲಿತಾಂಶ ಬಂದಿಲ್ಲ. ಈಗಲೇ ನಿರಾಸೆ ವ್ಯಕ್ತಪಡಿಸುವುದು ಬೇಡ. ಆಡಳಿತ ಪಕ್ಷ ಇರುವುದರಿಂದ ಸಹಜವಾಗಿಯೇ ಮೇಲುಗೈ ಇರುತ್ತದೆ. ಸ್ವಾಭಾವಿಕವಾಗಿ ಅದು ಆಡಳಿತ ಪಕ್ಷಕ್ಕೆ ಸಹಾಯ ಆಗುತ್ತದೆ. ಈ ಫಲಿತಾಂಶ ಭ್ರಷ್ಟಾಚಾರ ಮಾಡಲು ನೀಡಿದ ಮತವೆಂದು ಕಾಂಗ್ರೆಸ್ ಭಾವಿಸಬಾರದು ಎಂದರು.
Related Articles
Advertisement
ಮಹಾರಾಷ್ಟ್ರದಲ್ಲಿ 200 ಕ್ಕೂ ಹೆಚ್ಚು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದೇವೆ. ಜಾರ್ಖಂಡ್ ನಲ್ಲಿ ನಾವು ನೀರಿಕ್ಷಿಸಿದಷ್ಟು ಮುನ್ನಡೆ ಸಿಕ್ಕಿಲ್ಲ. ಇದೆಲ್ಲಾ ಸದ್ಯ ಆರಂಭಿಕ ಮುನ್ನಡೆ. ಆದರೆ ಎರಡೂ ರಾಜ್ಯಗಳಲ್ಲೂ ನಾವು ಅಧಿಕಾರಕ್ಕೆ ಬರುತ್ತೆವೆ. ಮಹಾರಾಷ್ಟ್ರದಲ್ಲಿ ಮೀಸಲಾತಿ ವಿಚಾರವನ್ನು ಯಶಸ್ವಿಯಾಗಿ ಹ್ಯಾಂಡಲ್ ಮಾಡಿದ್ದೆವು. ಗ್ಯಾರೆಂಟಿಯನ್ನು ನಾವೇ ಘೋಷಣೆ ಮಾಡಿದ್ದೆವು. ಮಂತಾಧರು ವೋಟ್ ಜಿಹಾದಿ ಕರೆ ಕೊಟ್ಟಿದ್ದರು. ನಾವು ಅದಕ್ಕೆ ಪ್ರತಿತಂತ್ರ ರೂಪಿಸಿದ್ದೆವು ಎಂದು ಸಿ.ಟಿ.ರವಿ ಹೇಳಿದರು.