Advertisement

ದೇವತೆಗಳಿಗೆ ಹಿಂದೂ-ಮುಸ್ಲಿಮರಿಂದ ಜಲಾಭಿಷೇಕ

02:53 PM Apr 06, 2022 | Team Udayavani |

ಆಲಮಟ್ಟಿ: ಮಳೆಗಾಲದ ಅವಧಿಯಲ್ಲಿ ಉತ್ತಮ ಮಳೆಯಾಗಿ ಉತ್ತಮ ಬೆಳೆ ಬರಲಿ ಎಂದು ಹಾರೈಸಿ ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಎಲ್ಲ ದೇವರುಗಳಿಗೆ ಜಲಾಭಿಷೇಕ ಮಾಡಿಸಲಾಯಿತು.

Advertisement

ಹಿಂದೂ-ಮುಸ್ಲಿಮ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ವಯೋಮಾನ ಭೇದವಿಲ್ಲದೇ ಲಿಂಗಭೇದವಿಲ್ಲದೇ ಎಲ್ಲ ಭಕ್ತರು ಸೇರಿಕೊಂಡು ತಾವು ಸ್ನಾನ ಮಾಡಿ ತಾವು ಉಟ್ಟಿರುವ ತೊಯ್ದ ಬಟ್ಟೆಗಳನ್ನುಟ್ಟುಕೊಂಡು ಇಲ್ಲಿನ ಧಾರ್ಮಿಕ ಕೇಂದ್ರಗಳಾಗಿರುವ ದೇವಸ್ಥಾನ ಮತ್ತು ದರ್ಗಾಗಳಿಗೆ ತೆರಳಿ ಜಲಾಭಿಷೇಕ ಮಾಡಿದ್ದು ವಿಶೇಷವಾಗಿತ್ತು.

ಇಲ್ಲಿ ಜಾತಿ-ಮತ ಭೇದವಿಲ್ಲದೇ ಎಲ್ಲ ಧರ್ಮೀಯರೂ ಸೇರಿಕೊಂಡು ಎಲ್ಲ ಜಾತ್ರೆ ಹಾಗೂ ದರ್ಗಾಗಳ ಉರೂಸ್‌ ಗಳಲ್ಲಿ ಭಾಗವಹಿಸಿ ತನುಮನ ಧನದಿಂದ ಸೇವೆ ಸಲ್ಲಿಸುತ್ತಾರೆ. ದೇವಸ್ಥಾನದಲ್ಲಿ ಪ್ರತಿ ಬಾರಿಯೂ ಕೆಲ ಗ್ರಾಮಗಳಲ್ಲಿ ಮಂಗಳವಾರ ಮತ್ತು ಶುಕ್ರವಾರಗಳನ್ನು 5 ವಾರ ಇನ್ನು ಕೆಲ ಗ್ರಾಮಗಳಲ್ಲಿ 11 ವಾರಗಳನ್ನು ಪಾಲಿಸುತ್ತಿದ್ದರೆ ಕೆಲ ಗ್ರಾಮಗಳಲ್ಲಿ ಮಂಗಳವಾರ ಅಥವಾ ಶುಕ್ರವಾರ ಒಂದೇ ಆಚರಿಸತ್ತಾರೆ.

ಈ ದಿನಗಳಂದು ಮನೆಗಳಲ್ಲಿ ಯಾವುದೇ ಪದಾರ್ಥಗಳನ್ನು ಕರಿಯುವುದಿಲ್ಲ. ರೊಟ್ಟಿ, ಚಪಾತಿಗಳನ್ನೂ ಮಾಡುವುದಿಲ್ಲ. ಯಾರೂ ಕೂಲಿ ಕೆಲಸಕ್ಕೆ ಹೋಗುವುದಿಲ್ಲ. ಎಲ್ಲ ನಾಗರಿಕರು ದೇವರ ಹೆಸರಿನಲ್ಲಿ ಧ್ಯಾನ ಮಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next